Advertisement

ದುರ್ಗಾ ದೌಡ್‌-ಹಿಂದೂ ಶಕ್ತಿ ಸಂಚಲನ; ಪಿಎಫ್ಐ ಭಾರತಕ್ಕೆ ವಿಷ: ಕಾಜಲ್‌ ಹಿಂದೂಸ್ಥಾನಿ

12:56 AM Oct 03, 2022 | Team Udayavani |

ಉಡುಪಿ: ಲವ್‌ ಜೆಹಾದ್‌ ಹಾಗೂ ಆಸ್ತಿಗಳ ಅತಿಕ್ರಮಣದ ಮೂಲಕ ನಮ್ಮ ದೇಶದಲ್ಲಿ ಇಸ್ಲಾಮಿಕ್‌ ಆಕ್ರಮಣವಾಗುತ್ತಿದೆ. ಈ ಮೂಲಕ ದೇಶವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸುವ ಗುರಿ ಹೊಂದಿದೆ. ಪಿಎಫ್ಐಯಂತಹ ಸಂಘಟನೆಗಳು ಭಾರತಕ್ಕೆ ವಿಷವಿದ್ದಂತೆ ಎಂದು ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಕಾಜಲ್‌ ಹಿಂದೂಸ್ಥಾನಿ ಹೇಳಿದರು.

Advertisement

ಜಿಲ್ಲಾ ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜಾಂಗಣ ಸಮೀಪ ಶನಿವಾರ ನಡೆದ ದುರ್ಗಾ ದೌಡ್‌ ಹಿಂದೂ ಶಕ್ತಿ ಸಂಚಲನ ಕಾರ್ಯಕ್ರಮ ದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ದೇಶವನ್ನು ವಿಂಗಡಿಸಲು ಪಿಎಫ್ಐಯಂತಹ ಹಲವು ಸ್ಲಿàಪರ್‌ ಸೆಲ್‌ಗ‌ಳಿವೆ. ಹಿಂದೂಗಳ ಹತ್ಯೆ, ಯುವತಿಯರ ಅಪಹರಣ ನಡೆಯುತ್ತಿದ್ದರೂ ನಾವು ಸುಮ್ಮನಿದ್ದೇವೆ. ಇದಕ್ಕೆ ಕಾರಣ ನಾವು ಜಾತಿ ಮೂಲಕ ವಿಭಜನೆಯಾಗಿರುವುದು. ಆದರೆ ಅವರು ಮುಸ್ಲಿಂ ಹೆಸರಿನಲ್ಲಿ ಒಂದಾಗಿದ್ದಾರೆ ಇದನ್ನು ನಾವು ಅರ್ಥೈಸಿಕೊಳ್ಳಬೇಕು ಎಂದರು.

ನಾರೀ ಶಕ್ತಿ ಜಾಗೃತವಾಗಲಿ
ನಾರೀ ಶಕ್ತಿ ಜಾಗೃತವಾದರೆ ದೇಶ ದಲ್ಲಿ ಇತಿಹಾಸ ನಿರ್ಮಿಸಲು ಸಾಧ್ಯ. ಹಿಂದೂ ಧರ್ಮದ ಸ್ಥಾಪನೆಯಲ್ಲಿ ದುರ್ಗೆ, ಸೀತೆಯರ ಕೊಡುಗೆ ಅಪಾರವಿದೆ. ಕಲಿಯುಗದಲ್ಲಿ ಮತ್ತೆ ಹಿಂದೂ ಧರ್ಮಸ್ಥಾಪನೆಯ ಜವಾಬ್ದಾರಿಯನ್ನು ಮಹಿಳೆಯರಿಗೆ ನೀಡಬೇಕು ಎಂದರು.

ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಪ್ರತೀ ಮನೆಯಲ್ಲಿಯೂ ಆಗಬೇಕು. ಧಾರಾವಾಹಿ, ಬಾಲಿವುಡ್‌ನ‌ ಕೆಲವು ಸಿನೆಮಾಗಳಿಂದಲೂ ಲವ್‌ ಜೆಹಾದ್‌ ನಂತಹ ಪ್ರಕರಣಗಳು ಆರಂಭಗೊಳ್ಳಲು ಕಾರಣವಾಗುತ್ತಿವೆ. ಜೆಹಾದಿ
ಗಳ ಅಸಲಿ ರೂಪ ತೋರಿಸುವ ಚಲನಚಿತ್ರ ಬಾಲಿವುಡ್‌ನಿಂದ ಯಾಕೆ ಹೊರಬರುತ್ತಿಲ್ಲ ಎಂದು ಪ್ರಶ್ನಿಸಿದರು.

“ಯಹೂದಿ’ ಬಿಡುಗಡೆ
ಶ್ರೀಕಾಂತ ಶೆಟ್ಟಿ ಕಾರ್ಕಳ ಬರೆ ದಿರುವ “ಯಹೂದಿ’ ಪುಸ್ತಕ ಬಿಡುಗಡೆ ನಡೆಯಿತು. ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್‌ ಉಳ್ತೂರು ಅಧ್ಯಕ್ಷತೆ ವಹಿಸಿದ್ದರು.

Advertisement

ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಧರ್ಮದರ್ಶಿ ದೇವರಾಯ ಮಂಜುನಾಥ್‌ ಶೇರೆಗಾರ್‌, ಬೈಲೂರು ಶ್ರೀ ರಾಮಕೃಷ್ಣ ಶಾರದಾ ಶ್ರಮದ ಸ್ಥಾಪಕಾಧ್ಯಕ್ಷೆ ಸುಮತಾ ರಮೇಶ್‌ ನಾಯಕ್‌ ಅಮ್ಮುಂಜೆ, ಧಾರ್ಮಿಕ ಮುಖಂಡ ಎರ್ಮಾಳು ಹರೀಶ್‌ ಶೆಟ್ಟಿ, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಅ.ಭಾ. ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಮುಂಬಯಿಯ ಉದ್ಯಮಿಗಳಾದ ರತ್ನಾಕರ ಶೆಟ್ಟಿ ಬಡಾಮನೆ ಗಿಳಿಯಾರು, ಅರವಿಂದ್‌ ಆನಂದ್‌ ಶೆಟ್ಟಿ, ಮುಂಬಯಿ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ. ರಾವ್‌, ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ಕಾರ್ಕಳದ ಅಧ್ಯಕ್ಷ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಕಚ್ಚಾರು ಶ್ರೀ ಮಾಲ್ತಿದೇವಿ ದೈವಸ್ಥಾನದ ಧರ್ಮದರ್ಶಿ ಗೋಕುಲ್‌ ದಾಸ್‌ ಬಾಕೂìರು, ಅವಿಭಜಿತ ದ.ಕ. ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಹಿಂಜಾವೇ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕ ದೋ. ಕೇಶವಮೂರ್ತಿ ಬೆಂಗಳೂರು, ಮಹಿಳಾ ಜಾಗರಣದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್‌ ಕ್ಷಮಾ ಹೆಬ್ರಿ, ಕಡಿಯಾಳಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ರವಿರಾಜ ಆಚಾರ್ಯ, ಕೊರಗ ಸಮಾ ಜದ ಮುಖಂಡ, ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವ ಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುಂದರ ಕೊರಗ, ಹಿಂಜಾವೇ ಜಿಲ್ಲಾ ಸಂಯೋಜಕ ಉಮೇಶ್‌ ನಾಯ್ಕ… ಸೂಡ, ಮುಖಂಡರಾದ ಮಹೇಶ್‌ ಬೈಲೂರು, ಪ್ರವೀಣ್‌ ಯಕ್ಷಿಮಠ, ರಿತೇಶ್‌ ಪಾಲನ್‌, ಪ್ರಶಾಂತ ನಾಯಕ್‌, ದಿನೇಶ್‌ ಶೆಟ್ಟಿ, ವಾಸುದೇವ ಗಂಗೋಳ್ಳಿ , ಶಂಕರ ಕೋಟ, ಪ್ರಕಾಶ ಉಪಸ್ಥಿತರಿದ್ದರು. ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಗಂಗೊಳ್ಳಿ ಸ್ವಾಗತಿಸಿ, ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಪ್ರಸ್ತಾವನೆಗೈದರು. ದಾಮೋದರ ಶರ್ಮ ನಿರೂಪಿಸಿದರು.

ಪ್ರಜ್ಞಾ ಸಿಂಗ್‌ ಠಾಕೂರ್‌ ಗೈರು
ಪ್ರಧಾನ ಭಾಷಣ ಮಾಡಬೇಕಾಗಿದ್ದ ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಅನಿವಾರ್ಯ ಕಾರಣಗ ಳಿಂದ ಗೈರುಹಾಜರಾಗಿದ್ದರು.

9 ರಾಜ್ಯಗಳಲ್ಲಿ ಹಿಂದೂಗಳು
ಅಲ್ಪ ಸಂಖ್ಯಾಕರು
9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾಕರಾಗಿದ್ದಾರೆ. ವಕ್ಫ್ ಮಂಡಳಿ ಆಸ್ತಿ 12 ವರ್ಷದಲ್ಲಿ ದುಪ್ಪಟ್ಟುಕೊಂಡಿದೆ. ಊರಿಗೆ ಊರನ್ನೇ ತಮ್ಮದು ಎನ್ನುತ್ತಿದ್ದಾರೆ. ಕೃಷ್ಣನ ದ್ವಾರಕಾ ನಗರವನ್ನೂ ವಕ್ಫ್ ಮಂಡಳಿಗೆ ಸೇರಿಸಿದ್ದಾರೆ. ವಕ್ಫ್ ನ್ಯಾಯಮಂಡಳಿಯಲ್ಲಿ ಎಲ್ಲರೂ ಮುಸ್ಲಿಂ ಸಮುದಾಯದವರೇ ಇರುವುದರಿಂದ ಉಳಿದ ಧರ್ಮದವರಿಗೆ ನ್ಯಾಯ ಮರೀಚಿಕೆಯಾಗಿದೆ. ಇದೆಲ್ಲದರ ಬಗ್ಗೆಯೂ ಸಮಾಜ ಜಾಗೃತರಾಗಬೇಕು ಎಂದು ಕಾಜಲ್‌ ಹಿಂದೂ ಸ್ಥಾನಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next