Advertisement
ಜಿಲ್ಲೆಯ ಶ್ರೀ ಕ್ಷೇತ್ರ ಕೈವಾರದ ಯೋಗಿ ನಾರೇಯಣ ಮಠಲ್ಲಿ ಗುರು ಪೌರ್ಣಮಿ ಪ್ರಯುಕ್ತ ಭಾನುವಾರದಿಂದ ಆರಂಭಗೊಳ್ಳಲಿರುವ ಮೂರು ದಿನಗಳ ಗುರು ಪೂಜಾ ಮಹೋತ್ಸವ ಹಾಗೂ 72 ಗಂಟೆಗಳ ಸಂಗೀತೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಗುರುಪೂಜೆಯ ವಿಶೇಷವಾಗಿ ಖ್ಯಾತ ಸಂಗೀತ ದಿಗ್ಗಜರಿಂದ ನಾದೋಪಾಸನೆಗೆ ಸಕಲ ರೀತಿಯಲ್ಲಿ ಕೈವಾರ ಕ್ಷೇತ್ರ ಸಜ್ಜಾಗಿ ಸಂಗೀತ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.
Related Articles
Advertisement
ಬೃಹತ್ ವೇದಿಕೆ ನಿರ್ಮಾಣ: ಗುರು ಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ನಡೆಯುವ ಯೋಗಿ ನಾರೇಯಣ ಸಭಾಂಗಣವನ್ನು ವೈಭವವಾಗಿ ಸಜ್ಜುಗೊಳಿಸಲಾಗಿದೆ. ಸಭಾಂಗಣದಲ್ಲಿ ಸಂಗೀತ ಗಾಯನ ಕಚೇರಿಗಳಿಗೆ ಅನುಕೂಲವಾಗುವಂತೆ ಬೃಹತ್ ವೇದಿಕೆ ನಿರ್ಮಿಸಲಾಗಿದೆ.ಸಂಗೀತ ಕಾರ್ಯಕ್ರಮಗಳು ನಡೆಯುವ ವೇದಿಕೆಗೆ ಶ್ರೀ ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರಸ್ವಾಮಿ ವೇದಿಕೆ ಎಂದು ಹೆಸರಿಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಮತ್ತೂಂದು ವೇದಿಕೆಯನ್ನು ನಿರ್ಮಿಸಿ ನಾದಬ್ರಹ್ಮ ಸದ್ಗುರು ತಾತಯ್ಯನವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗುರುಗಳಿಗೆ ಎದುರು ಸಂಗೀತ ವಿದ್ಯಾಂಸರು, ಕಲಾವಿದರು ತಮ್ಮ ಸಂಗೀತ ಸೇವೆಯನ್ನು ಸಮರ್ಪಣೆ ಮಾಡಲಿದ್ದಾರೆ. ಪ್ರಖ್ಯಾತ ಸಂಗೀತ ಮಾಂತ್ರಿಕರು: ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಸಂಗೀತ ಮಾಂತ್ರಿಕರು ಈ ಗುರುಪೂಜಾ ಸಂಗೀತೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು 2 ಗಂಟೆಗಳ ನಿರಂತರ ಸಂಗೀತೋತ್ಸವ ಆಯೋಜನೆ ಸಂಯೋಜಕರಾದ ವಾನರಾಸಿ ಬಾಲಕೃಷ್ಣ ಭಾಗವತರ್ ತಿಳಿಸಿದ್ದಾರೆ. ಸಂಗೀತ ಉತ್ಸವದಲ್ಲಿ ನಾನಾ ಪ್ರಕಾರದ ಸಂಗೀತ ಕಛೇರಿ, ಹರಿಕಥೆ, ಬುರ್ರಕಥೆ, ಕುಚಿಪುಡಿ ನೃತ್ಯ, ಭರತನಾಟ್ಯ, ನಾದಸ್ವರ ವಾದನ, ಸ್ಯಾಕ್ಸೊಪೋನ್, ಹಿಂದೂಸ್ತಾನಿ ಸೇರಿದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲಾ ಪ್ರಕಾರಗಳನ್ನು ಸಂಗೀತ ಪ್ರೇಮಿಗಳು ಒಂದೇ ವೇದಿಕೆಯಲ್ಲಿ ಸವಿಯುವ ಸದಾವಕಾಶವನ್ನು ಒದಗಿಸಲಾಗಿದೆ ಎಂದರು. ವಿಶಾಲ ಮಂಟಪ, ಭಕ್ತರಿಗೆ ಸೌಕರ್ಯ: ಕೈವಾರ ಯೋಗಿ ನಾರೇಯಣ ತಾತಯ್ಯನಗರ ಮೂರು ದಿನಗಳ ಗುರು ಪೂಜಾ ಹಾಗೂ ಸಂಗೀತೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ದೇವಾಯಲದ ಪ್ರಾಂಗಣದಲ್ಲಿ ವಿಸ್ತಾರವಾದ ಶಾಮಿಯಾನ ಹಾಕಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಲಭವಾಗಿ ಭಕ್ತರಿಗೆ ದಾಸೋಹ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕೌಂಟರ್‌ಗಳನ್ನು ತೆರೆಯಲಾಗಿದೆ. ಶುದ್ಧ ಕುಡಿಯುವ ನೀರು, ತಾತ್ಕಾಲಿಕವಾಗಿ ಶೌಚಾಲಯಗಳು, ಭದ್ರತೆ ಸೇರಿದಂತೆ ಮೂರು ದಿನಗಳ ಗುರು ಪೌರ್ಣಮಿಯನ್ನು ಭಕ್ತಿಭಾವದಿಂದ ಆಚರಿಸಲು ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾರ್ಗದರ್ಶನದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್ ತಿಳಿಸಿದರು. ಗುರುಪೂಜಾ ಮಹೋತ್ಸವ, ಸಂಗೀತೋತ್ಸವದಲ್ಲಿ ಇಂದು: ಬೆಳಗ್ಗೆ 6ರಿಂದ ಮಂಗಳವಾದ್ಯದೊಂದಿಗೆ ಅಧಿಕೃತವಾಗಿ ಗುರುಪೂಜಾ ಹಾಗೂ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ. ಬೆಳಗ್ಗೆ 7 ಗಂಟೆಗೆ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕರೆತಂದು ವಿಶೇಷ ಪೂಜೆ ಸಲ್ಲಿಸಿದ ನಂತರ 8 ಗಂಟೆಗೆ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ರವರಿಂದ ತಾತಯ್ಯನವರಿಗೆ ಸಂಕೀರ್ತನೆ ಸಮರ್ಪಣೆ ಮಾಡುತ್ತಾರೆ. ನಂತರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಸ್ಥಳೀಯ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಡಲಿದ್ದಾರೆ. ಸಂಜೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ತಿರುಪತಿ ಯಾಳ್ಳ ಶ್ರೀವಾಣಿ ವೀಣಾವಾದನ, ಬೆಂಗಳೂರಿನ ಅಪೇಕ್ಷ ಅಪ್ಪಲಾ ಗಾಯನ, ಚೆನ್ನೈ ಓ.ಎಸ್.ಅರುಣ್ ಗಾಯನ, ಚೆನ್ನೈ ಪ್ರಿಯಾ ಸಹೋದರಿಯರಿಂದ ಗಾಯನ, ಮೈಸೂರು ಮಂಜುನಾಥ್ ಮತ್ತು ನಾಗರಾಜ್ ರವರಿಂದ ಪಿಟೀಲು ಸೋಲೋ, ಪದ್ಮಶ್ರೀ ಹೈದರಾಬಾದ್‌ನ ಯಲ್ಲಾ ವೆಂಕಟೇಶ್ವರ ರಾವ್ ರವರಿಂದ ಮೃದಂಗ, ಗಿರಿಧರ್ ಉಡುಪ ಅವರಿಂದ ಘಟಂ ವಾದನವಿರುತ್ತದೆ. ಶ್ರೀ ಬೆಂಗಳೂರಿನ ಪದ್ಮಾವತಿ ಕಲಾನಿಕೇತನ್ ಸಂಗೀತ ನೃತ್ಯ ಶಾಲೆಯವರಿಂದ ಭರತನಾಟ್ಯ ಕಾರ್ಯಕ್ರಮವಿರುತ್ತದೆ. * ಇಂದಿನಿಂದ ಮೂರು ದಿನ ಗುರುಪೂಜೆ, ಸಂಗೀತೋತ್ಸವ
* 72 ಗಂಟೆಗಳ ನಾದೋಪಾಸನೆಗೆ ಸಾಕ್ಷಿಯಾಗಲಿರುವ ಕೈವಾರ
* ಕೈವಾರ ಕ್ಷೇತ್ರದಲ್ಲಿ 20ನೇ ಗುರು ಪೂಜೆ ಮಹೋತ್ಸವ ಸಂಭ್ರಮ
* ಮೂರು ದಿನಗಳ ಕಾಲ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
* ಇಡೀ ಕೈವಾರ ಮಠಕ್ಕೆ ವಿದ್ಯುತ್ ದೀಪಾಲಂಕಾರ
* ವಿಶಾಲವಾದ ಸಭಾಂಗಣ ನಿರ್ಮಾಣ, ಆಸನಗಳ ವ್ಯವಸ್ಥೆ
* ಅನ್ನದಾಸೋಹಕ್ಕೆ ಪ್ರತ್ಯೇಕ ಕೌಂಟರ್‌ಗಳ ನಿರ್ಮಾಣ
* ಎಲ್ಲೆಡೆ ಸಿಸಿ ಕ್ಯಾಮರಾಗಳ ಕಣ್ಗಾವಲು, ಬಿಗಿ ಭದ್ರತೆ
* ಶ್ರೀ ಕ್ಷೇತ್ರದಲ್ಲಿ ಸಂಗೀತ ದಿಗ್ಗಜರ ಸಮಾಗಮಾ * ಕಾಗತಿ ನಾಗರಾಜಪ್ಪ