Advertisement

ವಿಶ್ವದಾಖಲೆ ನಿರ್ಮಿಸಿದ ಕೈಗಾ ಅಣು ಸ್ಥಾವರ

06:00 AM Oct 25, 2018 | |

ಕಾರವಾರ: ರಾಜ್ಯದ ಏಕೈಕ ಅಣು ವಿದ್ಯುತ್‌ ಸ್ಥಾವರ ಕೈಗಾದ ಘಟಕ-1, ಸತತ 894 ದಿನ ವಿದ್ಯುತ್‌ ಉತ್ಪಾದಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

Advertisement

ಬುಧವಾರ ಬೆಳಗ್ಗೆ 9 ಗಂಟೆ 19 ನಿಮಿಷಕ್ಕೆ ಕೈಗಾ ಘಟಕ-1ರಲ್ಲಿ 894 ದಿನ ಸತತ ವಿದ್ಯುತ್‌ ಉತ್ಪಾದಿಸಲಾಗಿದೆ. ಆ ಮೂಲಕ ಯುನೈಟೆಡ್‌ ಕಿಂಗ್‌ಡಂನ ಏಷ್ಯನ್‌ ಅಣು ಸ್ಥಾವರ 894 ದಿನ ಕಾಲ ಸತತ ವಿದ್ಯುತ್‌ ಉತ್ಪಾದನೆ ಮಾಡಿದ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ, 895 ದಿನದಲ್ಲಿ ವಿದ್ಯುತ್‌ ಉತ್ಪಾದನೆ ಮುಂದುವರಿಸಿದೆ. ಗುರುವಾರ ಬೆಳಗ್ಗೆ 9 ಗಂಟೆಗೆ 895 ದಿನ ಪೂರೈಸಿ 896ನೇ ದಿನಕ್ಕೆ ಕಾಲಿಡಲಿದೆ. ವಿಶ್ವದಲ್ಲಿ ಸತತ 894 ದಿನ ಅಣು ವಿದ್ಯುತ್‌ ಉತ್ಪಾದಿಸಿ, 895ನೇ ದಿನದಲ್ಲಿ ವಿದ್ಯುತ್‌ ಉತ್ಪಾದನೆ ಮುಂದುವರಿಸಿದ ಘಟಕವಾಗಲಿರುವ ಕೈಗಾ ಘಟಕ-1, ಜಾಗತಿಕವಾಗಿ ಎರಡನೇ ಸ್ಥಾನ ಪಡೆದಿದೆ. ಈ ಕ್ಷಣದ ಸಂಭ್ರಮಾಚರಣೆ ಗುರುವಾರ ಬೆಳಗ್ಗೆ 9 ಗಂಟೆ 19 ನಿಮಿಷ ದಾಟಿದ ನಂತರ ನಡೆಯಲಿದೆ. ಅಣು ರಿಯಾಕ್ಟರ್‌ನ ಸಾಧನೆ ಸಹ ಘೋಷಣೆಯಾಗಲಿದೆ ಎಂದು ಕೈಗಾ ಅಣು ಸ್ಥಾವರದ ಘಟಕ 1-2ರ ನಿರ್ದೇಶಕ ಜೆ.ಆರ್‌. ದೇಶಪಾಂಡೆ 
“ಉದಯವಾಣಿ’ಗೆ ತಿಳಿಸಿದ್ದಾರೆ.

ಅಣು ವಿದ್ಯುತ್‌ ಉತ್ಪಾದನೆಯನ್ನು ಕೈಗಾ ಘಟಕ-1ರಲ್ಲಿ 2018, ನ.24ರವರೆಗೆ ಮುಂದುವರಿಸಲು ಎಇಆರ್‌ಬಿ ಅಣು ವಿದ್ಯುತ್‌ ಶಕ್ತಿ ನಿಯಂತ್ರಣ ನಿಗಮ ಮತ್ತು ಭಾರತದ ಅಣು ಸ್ಥಾವರ ವೀಕ್ಷಣಾ ಕೇಂದ್ರಗಳು ಅನುಮತಿ ನೀಡಿವೆ. ನಾವು ರಿಯಾಕ್ಟರ್‌ ಒಂದರಿಂದ ಅಣು ವಿದ್ಯುತ್‌ ಉತ್ಪಾದನೆಯಲ್ಲಿ ವಿಶ್ವದಲ್ಲಿ ಮೊದಲ ಸ್ಥಾನಕ್ಕೆ ಏರಬೇಕಾದರೆ 940 ದಿನಗಳನ್ನು ದಾಟಬೇಕಿದೆ. ಇದಕ್ಕಾಗಿ ನಾವು ಡಿಸೆಂಬರ್‌ ಮೊದಲ ವಾರದ ತನಕ ಕಾಯಬೇಕು. ಈಗ ನ.24ರವರೆಗೆ ವಿದ್ಯುತ್‌ ಉತ್ಪಾದನೆಗೆ ಅನುಮತಿ ದೊರೆತಿದೆ. ಹಾಗೆ ಉತ್ಪಾದನೆ ನಡೆದ ದಿನಗಳಲ್ಲಿ ಎಇಆರ್‌ಬಿ ಹಾಗೂ ಅಣು ವಿದ್ಯುತ್‌ ಉತ್ಪಾದನೆಯನ್ನು ಗಮನಿಸುವ ವಿಶ್ವದ ವಿಜ್ಞಾನಿಗಳು ಸ್ಥಾವರಕ್ಕೆ ಭೇಟಿ ನೀಡಿ, ವಿದ್ಯುತ್‌ ಉತ್ಪಾದನೆ ಮುಂದುವರಿಸುವ ಬಗ್ಗೆ ರಿಯಾಕ್ಟರ್‌ ಕಾರ್ಯಕ್ಷಮತೆ ಪರಿಶೀಲಿಸಿ ಅನುಮತಿ ನೀಡಲಿದ್ದಾರೆ. ಇದೆಲ್ಲವೂ ಸುಸೂತ್ರವಾಗಿ ನಡೆದಲ್ಲಿ ನಾವು 940 ದಿನಗಳನ್ನು ದಾಟಿ ಅಣು ವಿದ್ಯುತ್‌ ಉತ್ಪಾದನೆ ಮುಂದುವರಿಸಿ, ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಬಹುದು ಎಂಬ ವಿಶ್ವಾಸವನ್ನು ಕೈಗಾದ ವಿಜ್ಞಾನಿ ಜೆ.ಆರ್‌.ದೇಶಪಾಂಡೆ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಮೊದಲ ಸ್ಥಾನ
ಕೈಗಾ ಅಣು ವಿದ್ಯುತ್‌ ಸ್ಥಾವರದಲ್ಲಿ ಸ್ಥಾಪನೆಯಾದ ರಿಯಾಕ್ಟರ್‌ ಹೆವಿ ವಾಟರ್‌ ರಿಯಾಕ್ಟರ್‌ (ಪಿಎಚ್‌ಡಬುÉಆರ್‌)ತಂತ್ರಜ್ಞಾನದ್ದು. ಈ ಮಾದರಿಯ ರಿಯಾಕ್ಟರ್‌ಗಳ ಪೈಕಿ ಸತತ 894 ದಿನ ವಿದ್ಯುತ್‌ ಉತ್ಪಾದಿಸಿದ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ. ಈ ಮಾದರಿಯ ಅಣು ರಿಯಾಕ್ಟರ್‌ಗಳಲ್ಲಿ ಸತತ 894 ದಿನಗಳ ಕಾಲ ಅಣು ವಿದ್ಯುತ್‌ ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ. ಈ ತಂತ್ರಜ್ಞಾನದ ದಿಸೆಯಲ್ಲಿ ಕೈಗಾ ಘಟಕ-1 ರಿಯಾಕ್ಟರ್‌ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಭಾರತ ಅಣುವಿದ್ಯುತ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ವಿಶ್ವಮಟ್ಟದಲ್ಲಿ ಬರೆದಿದೆ ಎಂದು ಕೈಗಾದ ವಿಜ್ಞಾನಿ ದೇಶಪಾಂಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next