Advertisement

ಲಾಕ್ ಡೌನ್ ಪಾಲಿಸಲು ಗ್ರಾಮಸ್ಥರಿಂದ ಸಾಮೂಹಿಕ ಪ್ರತಿಜ್ಞೆ ಸ್ಪೀಕಾರ

12:37 PM Apr 01, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಚೊಕ್ಕ ರೆಡ್ಡಿಹಳ್ಳಿ ಗ್ರಾಮದ ಗ್ರಾಮಸ್ಥರು ಬುಧವಾರ ಬೆಳಗ್ಗೆ ಲಾಕ್ ಡೌನ್ ಪಾಲಿಸುತ್ತೇವೆಂದು ಸಾಮೂಹಿಕವಾಗಿ ಪ್ರತಿಜ್ಞೆ ಸ್ಪೀಕರಿಸಿದ್ದಾರೆ.

Advertisement

ನಾವು  ಪ್ರತಿ ದಿನ ಒಂದು ಗಂಟೆಗೆ ಒಮ್ಮೆ ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ ನಿಂದ ತೊಳೆಯುತ್ತೇವೆ ಹಾಗೂ ಒಬ್ಬರಿಗೊಬ್ಬರು ಕನಿಷ್ಠ 1 ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡುತ್ತೇವೆ ಮತ್ತು ನಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುತ್ತೇವೆ ಎಂಬುದಾಗಿ ಪ್ರತಿಜ್ಞೆಯನ್ನು ಮಾಡಿ ಲಾಕ್ ಡೌನ್ ಪಾಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್,‌‌ ಸ್ಯಾನಿಟೈಸರ್ ಗಳನ್ನು ವಿತರಿಸಿ ಅವುಗಳ ಬಳಕೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ಪ್ರತಿಜ್ಞೆ‌ ಸ್ಪೀಕರಿಸುವ ಸಂದರ್ಭದಲ್ಲಿ‌ಪರಸ್ಪರ ಒಬ್ಬರಿಗೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಗಮನ ಸೆಳೆದರು.

ಈ ವಿಶೇಷ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶಾರದಾ ಶಂಕರ್ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಸಿ ವಿ ಮಂಜುನಾಥ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನ್ನರಾಯಪ್ಪ, ನಾ ಶಂಕರ್, ಕೇಶವರೆಡ್ಡಿ, ಶ್ರೀನಿವಾಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಎಸ್ ರಾದ ಆಶಾ ಕಾರ್ಯಕರ್ತ ಶ್ರೀಮತಿ ವಿಮಲಮ್ಮ ಅಂಗನವಾಡಿ ಕಾರ್ಯಕರ್ತೆ ವೆಂಕಟ ಲಕ್ಷ್ಮಮ್ಮ ಸಹಾಯಕಿ ಸರಸ್ವತಮ್ಮ ಜಲಗಾರ ನರಸಿಂಹಪ್ಪ ಊರಿನ ಗ್ರಾಮಸ್ಥರಾದ ನಾಗರಾಜ್ ವೆಂಕಟರಮಣ ವಿವೇಕ್ ಆಂಜನೇಯ ರೆಡ್ಡಿ ಶ್ರೀನಿವಾಸ್ ರೆಡ್ಡಿ ವೆಂಕಟರೆಡ್ಡಿ ಹರೀಶ್ ವೆಂಕಟೇಶಪ್ಪ ನಂಜುಂಡಪ್ಪ ಮುನಿಸ್ವಾಮಿ ನಾರಾಯಣ್ ರೆಡ್ಡಿ ಮಂಜುನಾಥ್ ನಾರಾಯಣಸ್ವಾಮಿ ಮೊದಲಾದವರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next