Advertisement
ನಿರ್ವಹಣೆಯ ಕೊರತೆಯಿಂದ ಕಳೆದ ವರ್ಷದಿಂದೀಚೆಗೆ ಸಂಗೀತ ಕಾರಂಜಿ ಸೇವೆ ಸ್ಥಗಿತಗೊಳಿಸಿದ್ದು, ಅಲ್ಲಿರುವ ಪೈಪ್‌ಗ್ಳು ಸಹಿತ ಉಪಕರಣಗಳು ತುಕ್ಕು ಹಿಡಿಯಲು ಆರಂಭಿಸಿವೆ. 2018ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಕಾರಂಜಿ ಉದ್ಘಾಟಿಸಿದ್ದು, ಇದೀಗ ಮತ್ತೆ ಕಾರಂಜಿ ಚಾಲೂ ಆಗಲು ಸರಕಾರ ದಿಂದ ಅನುದಾನ ನಿರೀಕ್ಷಿಸಲಾಗಿದೆ.
Related Articles
ಕದ್ರಿ ಜಿಂಕೆ ಪಾರ್ಕ್ ಬಳಿ ಹಳೆ ಮೃಗಾಲಯದಲ್ಲಿ ಮುಡಾ ವತಿಯಿಂದ 5 ಕೋ. ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿ ಸಲಾಗಿದ್ದು, 2018ರ ಜ. 7ರಂದು ಉದ್ಘಾಟಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡು 6 ತಿಂಗಳುಗಳ ಬಳಿಕ ಕಾರಂಜಿ ಉದ್ಘಾಟಿಸಲಾಗಿತ್ತು. ಅಂದಿನ ಶಾಸಕ ಜೆ.ಆರ್. ಲೋಬೋ ನೇತೃತ್ವದಲ್ಲಿ ಸಂಗೀತ ಕಾರಂಜಿ ತಲೆ ಎತ್ತಿತ್ತು. ಕಾಮಗಾರಿ ಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪೆನಿ ವಹಿಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ, ಲೇಸರ್ ಲೈಟ್ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಾಗಿದೆ. ಸದ್ಯ ನಿರ್ವಹಣೆಯ ಕೊರತೆ ಯಿಂದಾಗಿ ಕಾರಂಜಿ ಪ್ರದರ್ಶನ ಸ್ಥಗಿತಗೊಂಡಿದೆ.
Advertisement
ಸಂಪನ್ಮೂಲ ಕ್ರೋಡೀಕರಣವೇ ಸವಾಲುಕದ್ರಿ ಸಂಗೀತ ಕಾರಂಜಿ ಚಾಲೂ ಆಗಲು ತಿಂಗಳಿಗೆ ಸುಮಾರು 70 ಸಾವಿರ ರೂ. ನಿರ್ವಹಣೆಯ ಖರ್ಚು ತಗಲುತ್ತದೆ. ಖರ್ಚಿನ ಶೇ.10ರಷ್ಟು ಕೂಡ ಆದಾಯ ಬರುತ್ತಿರಲಿಲ್ಲ. ತಿಂಗಳಿಗೆ ಸುಮಾರು 35,000 ರೂ. ನಷ್ಟು ವಿದ್ಯುತ್ ಬಿಲ್ ಬರುತ್ತಿದೆ. ಅದರಂತೆ ಟೆಕ್ನೀಶಿಯನ್, ಸಿಬಂದಿ ವರ್ಗದವರಿಗೆಂದು ತಿಂಗಳಿಗೆ ಒಟ್ಟಾರೆ ಸುಮಾರು 50 ಸಾವಿರ ರೂ. ಹಣ ನೀಡಬೇಕು. ಕೋವಿಡ್‌ಗೂ ಮುನ್ನ ವಾರದಲ್ಲಿ ಬೆರಳೆಣಿಕೆ ದಿನ ಮಾತ್ರ ಕಾರಂಜಿ ಶೋ ನಡೆಯುತ್ತಿತ್ತು. ಪ್ರತೀ ದಿನ ಕೇವಲ 5-7 ಮಂದಿ ವೀಕ್ಷಣೆಗೆ ಬರುತ್ತಿದ್ದರು. ಹೀಗಿದ್ದಾಗ ತಿಂಗಳಿಗೆ 5 ಸಾವಿರ ರೂ. ಕೂಡ ಆದಾಯ ಬರುತ್ತಿಲ್ಲ. ಅದನ್ನು ಸರಿದೂಗಿಸಿ ಪ್ರವಾಸಿಗರಿಗೆ ಆಕರ್ಷಿಸುವುದು ಇನ್ನೂ ಸವಾಲಾಗಿಯೇ ಇದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿ ಕಾರಂಜಿ ನಡೆಸಬಹುದು ಎಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಅಧಿಕಾರಿಗಳ ಪ್ರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೂಕ್ತ ಕ್ರಮ
ಕದ್ರಿ ಜಿಂಕೆ ಉದ್ಯಾನವನ ದಲ್ಲಿರುವ ಸಂಗೀತ ಕಾರಂಜಿ ಶೋ ಕೆಲವು ಸಮಯದಿಂದ ಸ್ಥಗಿತ ಗೊಂಡಿದೆ. ಮುಂದಿನ ದಿನಗ ಳಲ್ಲಿ ಇದನ್ನು ಚಾಲೂ ಮಾಡುವ ಉದ್ದೇಶಕ್ಕೆ ಸಂಬಂಧ ಪಟ್ಟ ಅಧಿ ಕಾರಿಗಳ ಜತೆ ಮಾತುಕತೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ.
– ರವಿಕುಮಾರ್ ಎಂ.ಆರ್., ದ.ಕ. ಜಿಲ್ಲಾಧಿಕಾರಿ - ನವೀನ್ ಭಟ್ ಇಳಂತಿಲ