Advertisement

ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ: ಧ್ವಜಸ್ತಂಭಕ್ಕೆ ಸ್ವಾಗತ, ಶೋಭಾಯಾತ್ರೆ

11:15 PM Mar 04, 2022 | Team Udayavani |

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲದ ಜೀರ್ಣೋದ್ಧಾರ ಪ್ರಯುಕ್ತ ನೂತನ ಧ್ವಜಸ್ತಂಭದ ಶೋಭಾಯಾತ್ರೆ ಶುಕ್ರ ವಾರ ನಡೆಯಿತು.

Advertisement

ಜೋಡುಕಟ್ಟೆಯಿಂದ ಕವಿ ಮುದ್ದಣ ಮಾರ್ಗ, ಶಿರಿಬೀಡು, ಕಲ್ಸಂಕ ಮಾರ್ಗವಾಗಿ ಧ್ವಜಸ್ತಂಭವನ್ನು ಆಕರ್ಷಕ ಮೆರವಣಿಗೆಯಲ್ಲಿ ದೇಗುಲಕ್ಕೆ ತರಲಾಯಿತು.

ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿ ದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಡಿಯಾಳಿ ದೇವಸ್ಥಾನದಲ್ಲಿ ಧ್ವಜಮರವನ್ನು ಸ್ವಾಗತಿಸಿದರು. ಅರ್ಚಕರು ಪೂಜಾ ವಿಧಿ ನೆವೇರಿಸಿದರು.

ಶಾಸಕ ಕೆ. ರಘುಪತಿ ಭಟ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಉದ್ಯಮಿ ಡಾ| ಜಿ. ಶಂಕರ್‌, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಪುತ್ತೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆನುವಂಶಿಕ ಮೊಕ್ತೇಸರ ಕೃಷ್ಣಮೂರ್ತಿ ಭಟ್‌, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ರಾಮ್‌ ಬನ್ನಂಜೆ, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್‌, ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇಗು ಲದ ಆಡಳಿತಾಧಿಕಾರಿ, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ವಾಸ್ತುತಜ್ಞ ಗುಂಡಿಬೈಲು ವಿ| ಸುಬ್ರಹ್ಮಣ್ಯ ಭಟ್‌, ದೇಗುಲದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ| ರವಿರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಪ್ರಧಾನ ಕಾರ್ಯ ದರ್ಶಿ ಕೆ. ರಾಘವೇಂದ್ರ ಕಿಣಿ, ಬಿಜೆಪಿ ಮುಂದಾಳು ಉದಯ ಕುಮಾರ ಶೆಟ್ಟಿ, ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಗಿರೀಶ್‌ ಅಂಚನ್‌, ಗೀತಾ ಶೇಟ್‌, ರಶ್ಮೀ ಭಟ್‌, ಅಶೋಕ್‌ ನಾಯಕ್‌, ಸಗ್ರಿ ಗೋಪಾಲಕೃಷ್ಣ ಸಾಮಗ ಮೊದಲಾದವರು ಉಪಸ್ಥಿತರಿದ್ದರು.

ಭಟ್‌, ಪ್ರಮೋದ್‌ ಸಹಿತ 1,400 ಭಕ್ತರ ಕೇಸರಿ ಪೇಟ
1,400 ಮಹಿಳಾ ಮತ್ತು ಪುರುಷ ಭಕ್ತರು ಕೇಸರಿ ಪೇಟ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕೇಸರಿ ಪೇಟ ಧರಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು. ಕಡಿಯಾಳಿ ಅಮ್ಮನ ಭಾವಚಿತ್ರದ ರಥವನ್ನು ಎಳೆದು ತರಲಾಯಿತು. ಮೆರವಣಿಗೆಯಲ್ಲಿ ಕೊಂಬು, ಕಹಳೆ, ವಾದ್ಯ ಘೋಷ, ಭಜನೆ, ಚಂಡೆ ವಾದನ, ಕುಣಿತ ಭಜನೆ, ಡೊಳ್ಳು ವಾದನ, ವೇದ ಘೋಷಗಳು ಇದ್ದವು.

Advertisement

ಇತಿಹಾಸ ಮರುಸೃಷ್ಟಿ
1960ರ ಶುಕ್ರವಾರ ಜೋಡುಕಟ್ಟೆಯಿಂದ ಎರಡು ಎತ್ತುಗಳ ಮೂಲಕ ಕೊಡಿಮರ ತರಲಾಗಿತ್ತು. 2022ರ ಶುಕ್ರವಾರ ಇಂದು ಕೊಡಿಮರ ತರಲಾಯಿತು. ಇಲ್ಲಿಗೆ 60 ವರ್ಷ ಅಂದರೆ ಒಂದು ಸಂವತ್ಸರ ಚಕ್ರವಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next