Advertisement

ಕಡಬ ಸಿ.ಎ. ಬ್ಯಾಂಕ್‌ನ ಯೋಗ ಕ್ಷೇಮ ಸಹಕಾರ ಸೌಧ ಉದ್ಘಾಟನೆ

02:43 PM Dec 25, 2017 | Team Udayavani |

ಕಡಬ: ಮರಳು ನೀತಿಯಿಂದಾಗಿ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಕೊರತೆಯಾಗಿ ಸಮಸ್ಯೆಯನ್ನು ನೀಗಿಸಲು ಮಲೇಶಿಯಾದಿಂದ ಮರಳು ಆಮದು ಮಾಡಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮುಖಾಂತರ ಪೂರೈಸುವ ವ್ಯವಸ್ಥೆಯನ್ನು ಮಾಡ ಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಹೇಳಿದರು.

Advertisement

ಅವರು ರವಿವಾರ ಕಡಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ನೂತನ ಕಟ್ಟಡ ಯೋಗ ಕ್ಷೇಮ ಸಹಕಾರ ಭವನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ರಸಗೊಬ್ಬರ ಆಮದು
ನಮ್ಮ ಕೃಷಿಕರು ಯೂರಿಯಾ ರಸ ಗೊಬ್ಬರದ ಕೊರತೆಯನ್ನು ಎದುರಿಸುತ್ತಿದ್ದಾರೆ. ನಾವು ಪ್ರಸ್ತುತ 84 ಲಕ್ಷ ಟನ್‌ ಯೂರಿಯಾವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಕೇವಲ 4-5 ಲಕ್ಷ ಟನ್‌ ಯೂರಿಯಾ ಉತ್ಪತ್ತಿಯಾಗುತ್ತಿದೆ. ಆದರೆ ಬೇಡಿಕೆ 18 ಲಕ್ಷ ಟನ್‌ಗಿಂತಲೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅನಿಲ ಆಧಾರಿತ ಮಿತ ದರದ ಯೂರಿಯಾ ತಯಾರಿಕಾ ಕಾರ್ಖಾನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ತೆರೆಯುವ ಸಿದ್ಧತೆ ನಡೆಸಲಾಗುತ್ತಿದೆ. ಅದೇ ರೀತಿ ವಿದೇಶಿ ತಂತ್ರಜ್ಞಾನ ಬಳಸಿ ತ್ಯಾಜ್ಯ ಸಂಸ್ಕರಣ ಘಟಕವನ್ನು ಪ್ರಾರಂಭಿಸಿ ಕಸದಿಂದ ರಸ ತೆಗೆಯುವ ಕಾರ್ಯ ಮಾಡಲಾಗುವುದು. ಜಿಲ್ಲೆಯಲ್ಲಿ ಸಹಕಾರ ಸಂಘಗಳಲ್ಲಿ ಸದಸ್ಯರು ಮಾಡಿರುವ ಸಾಲವನ್ನು ಶೇ. 100ರಷ್ಟು ಮರು ಪಾವತಿ ಮಾಡುವ ಮೂಲಕ ನಮ್ಮ ಸಹಕಾರ ಸಂಘಗಳು  ದೇಶಕ್ಕೇ ಮಾದರಿಯಾಗಿದೆ. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ಪ್ರಾಮಾಣಿಕ ಸೇವೆಯ ಮೂಲಕ ಸದಸ್ಯರ ಹಾಗೂ ಇಲ್ಲಿನ ಜನರ ವಿಶ್ವಾಸಕ್ಕೆ ಪಾತ್ರವಾಗಿರುವುದಲ್ಲದೆ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿ ಕಡಬ ತಾಲೂಕಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದರು. ನವೋದಯ ಸದಸ್ಯರಿಗೆ ಹೊಸ ವರ್ಷದ ಕೊಡುಗೆಯಾಗಿ ಹೊಸ ಸಮವಸ್ತ್ರದ ಸೀರೆಯನ್ನು ವಿತರಿಸಲಾಗುವುದು ಎಂದರು.

ಆಡಳಿತ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು, ಜಿಲ್ಲೆಯ ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತಾಪಿ ವರ್ಗದ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ ಎಂದರು. ಭಧ್ರತಾ ಕೊಠಡಿಯನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್‌, ಲಾಕರ್‌ನ ಪ್ರಥಮ ಕೀಯನ್ನ ಸದಸ್ಯ ವೆಂಕಟ್ರಾಜ್‌ ಕೋಡಿಬೈಲು ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಗೋದಾಮು ಕಟ್ಟಡವನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ರಾಜ್ಯ ಸಹ ಸಂಘಟನ ಪ್ರಮುಖ ಹರೀಶ್‌ ಆಚಾರ್‌ ಶುಭ ಹಾರೈಸಿದರು.

ಪುತ್ತೂರು ಪಿ.ಎಲ್‌.ಡಿ. ಬ್ಯಾಂಕ್‌ ಅಧ್ಯಕ್ಷ ಎ.ಬಿ. ಮನೋಹರ ರೈ, ತಾ.ಪಂ. ಸದಸ್ಯರಾದ ಗಣೇಶ್‌ ಕೈಕುರೆ, ಪಿ.ವೈ. ಕುಸುಮಾ, ಎಪಿಎಂಸಿ ನಿರ್ದೇಶಕರಾದ ಪುಲಸ್ತ್ಯಾ ರೈ, ಮೇದಪ್ಪ ಗೌಡ ಡೆಪ್ಪುಣಿ, ಸಂಘದ ನಿರ್ದೇಶಕರಾದ ಪೂವಪ್ಪ ಗೌಡ ಐತ್ತೂರು, ನಿತ್ಯಾನಂದ ಗೌಡ ಬೊಳ್ಳಾಜೆ, ರಘುಚಂದ್ರ ಕೆ., ಸುದರ್ಶನ ಗೌಡ ಕೋಡಿಂಬಾಳ, ರಾಜೀವಿ, ಲೀಲಾವತಿ, ಅಂಗಜ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ವಸಂತ್‌ ಎಸ್‌. ಉಪಸ್ಥಿತರಿದ್ದರು.

Advertisement

ಸಮ್ಮಾನ
ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಸಂಘದ ವತಿಯಿಂದ ಹಿರಿಯ ಸಹಕಾರಿ ಧುರೀಣ ಕುಳವಳಿಕೆ ರಾಜರತ್ನ ಆರಿಗ ಅವರು ಸಮ್ಮಾನಿಸಿದರು. ಕಟ್ಟಡ
ಎಂಜಿನಿಯರ್‌ ಸುರೇಶ್‌ ಕುಮಾರ್‌ ಪಣೆಮಜಲು, ಗುತ್ತಿಗೆದಾರ ಪ್ರಸಾದ್‌ ಕೆ.ಎನ್‌., ಸಹ ಗುತ್ತಿಗೆದಾರ ನಾಗೇಶ್‌
ಎಂ.ಆರ್‌. ಕೋಡಿಂಬಾಳ ಅವರನ್ನು ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾಕೋ ಕೆ.ಎಂ. ವರದಿ ವಾಚಿಸಿ, ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ ವಂದಿಸಿದರು. ಸಂಘದ ಉಪಾಧ್ಯಕ್ಷ ರಮೇಶ್‌ ಕಲ್ಪುರೆ ರಾಜೇಂದ್ರಕುಮಾರ್‌ ಅವರನ್ನು ಸಭೆಗೆ ಪರಿಚಯಿಸಿದರು. ದೀಪ್ತಿ, ಧೃತಿ, ಭವಿತಾ ರೈತ ಗೀತೆ ಹಾಡಿದರು. ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಹಾಗೂ ಶಿವಪ್ರಸಾದ್‌ ರೈ ಮೈಲೇರಿ ನಿರೂಪಿಸಿದರು.

ಕಾರ್ಯಶೈಲಿ ಪೂರಕ
ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಳ್ಯ ಶಾಸಕ ಎಸ್‌. ಅಂಗಾರ ಅವರು, ನಿರ್ದಿಷ್ಟ ವಾದ ಗುರಿ, ಯೋಜನೆ
ಹಾಗೂ ಸ್ಪಷ್ಟವಾದ ನಿರ್ಧಾರಗಳಿಂದ ಸಹಕಾರಿ ಸಂಘಗಳಲ್ಲಿ ಆಡಳಿತ ನಡೆಸಿದಾಗ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರು ಕಂಡ ಕನಸು ಸಾಕಾರಗೊಳ್ಳುತ್ತವೆ. ಕಡಬ ಪ್ರಾ.ಕೃ.ಪ. ಸ. ಸಂಘದ ಆಡಳಿತ ಮಂಡಳಿಯ
ಕಾರ್ಯಶೈಲಿ ಅದಕ್ಕೆ ಪೂರಕವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next