Advertisement
ಹಳ್ಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆ ಯಡಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ 3.48 ಕೋ.ರೂ. ಮಂಜೂರಾಗಿತ್ತು. ಕಳೆದ ವಾರ ಮುಳ್ಳಿಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಲಾನ್ಯಾಸಗೈದಿದ್ದು, ಶನಿವಾರ ಸಂಜೆ ಶಾಸಕ ಸುಕುಮಾರ್ ಶೆಟ್ಟಿ ಅವರು ಸೇತುವೆ ನಿರ್ಮಾಣ ಜಾಗದಲ್ಲಿ ಭೂಮಿಪೂಜೆಯನ್ನು ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
Related Articles
Advertisement
ಗ್ರಾಮಸ್ಥರಿಂದ ಕೃತಜ್ಞತೆ
ಬಹು ವರುಷದ ಬೇಡಿಕೆ ಈಡೇರಿದ ಸಂತೋಷದಲ್ಲಿ ಈ ಭಾಗದ ನೂರಾರು ಜನರು ಭಾಗವಹಿಸಿ ಅನುದಾನ ಮಂಜೂರುಗಾಗಿ ಶ್ರಮಿಸಿದ ಶಾಸಕರು, ಸಂಸದರು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅನೇಕ ವರ್ಷಗಳ ಬೇಡಿಕೆಯಿದ್ದರೂ, ಈಡೇರದೇ ನೆನೆಗುದಿಗೆ ಬಿದ್ದಿದ್ದ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆ ಬಗ್ಗೆ ಬೆಳಕು ಚೆಲ್ಲಿ, ತ್ವರಿತಗತಿಯಲ್ಲಿ ಕಾಮಗಾರಿಗೆ ಚಾಲನೆ ನೀಡುವಂತೆ ಮಾಡಿದ ಉದಯವಾಣಿ ಪತ್ರಿಕೆಗೆ ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ಕೊಠಾರಿ, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಅವರು ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಉದಯವಾಣಿ ವರದಿ
ಉದಯವಾಣಿಯು ಕಳೆದ ವರ್ಷದ ಜು. 2 ರಂದು “ಗ್ರಾಮಭಾರತ’ ಸರಣಿಯಲ್ಲಿ ಹಳ್ಳಿಹೊಳೆ ಗ್ರಾಮದ ದೇವರಬಾಳು, ಕಟ್ಟಿನಾಡಿ, ಕಬ್ಬಿನಾಲೆ ಯನ್ನು ಸಂಪರ್ಕಿಸುವ ಸೇತುವೆ ಬೇಡಿಕೆ ಬಗ್ಗೆ, ಅಗತ್ಯತೆ, ಸೇತುವೆಯಿಲ್ಲದೆ ಜನ ಅನುಭವಿಸುತ್ತಿರುವ ಬವಣೆ ಕುರಿತಂತೆ ಸಮಗ್ರ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.