Advertisement

ಕ್ರೀಡಾ ಕೋಟಾದಿಂದ ಕಬಡ್ಡಿ, ಚೆಸ್‌ಗೆ ಕೊಕ್‌

06:00 AM Jun 05, 2018 | Team Udayavani |

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುವ ಹೊತ್ತಲ್ಲೇ ರಾಜ್ಯದ ಕ್ರೀಡಾಪಟುಗಳಿಗೆ ಸಿಡಿಲಾಘಾತದ ಸುದ್ದಿ ಹೊರಬಿದ್ದಿದೆ. ಭಾರತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿರುವ ಚೆಸ್‌, ಗ್ರಾಮೀಣ ಭಾಗದ ಬೇರು ಹೊಂದಿರುವ, ಇತ್ತೀಚಿನ ವರ್ಷಗಳಲ್ಲಿ ಭಾರತೀಯರಲ್ಲಿ ಹುಚ್ಚೆಬ್ಬಿಸಿರುವ ಕಬಡ್ಡಿ, ಖೋ-ಖೋ ಸಹಿತ 20 ಕ್ರೀಡೆಗಳಿಗೆ ಸಿಇಟಿಯ ಕ್ರೀಡಾ ಕೋಟದಿಂದ ಕೊಕ್‌ ನೀಡಲಾಗಿದೆ.

Advertisement

ಅಧಿಕೃತವಾಗಿ ಒಟ್ಟಾರೆ 52 ಕ್ರೀಡೆಗಳಿದ್ದು, ಕೇಂದ್ರ ಸರಕಾರ ಈ ಎಲ್ಲ ಕ್ರೀಡೆಗಳಿಗೆ ಮಾನ್ಯತೆ ನೀಡಿದೆ. ಆದರೆ ಒಲಿಂಪಿಕ್ಸ್‌ ಮಾನ್ಯತೆ ಹೊಂದಿರುವ 32 ಕ್ರೀಡೆಗಳಿಗಷ್ಟೇ ಈ ವರ್ಷದಿಂದ ಸಿಇಟಿಯಲ್ಲಿ ಕ್ರೀಡಾ ಕೋಟಾ ನೀಡಲಾಗುತ್ತದೆ ಎಂದು ಕ್ರೀಡಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೇ 22ರ ಈ ಸುತ್ತೋಲೆಯ ಪ್ರತಿ ಉದಯವಾಣಿಗೆ ಲಭ್ಯವಾಗಿದೆ.

ವಿಷಯ ಮುಚ್ಚಿಟ್ಟಿತೇ ಕ್ರೀಡಾ ಇಲಾಖೆ?: ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಕುಳಿತು ಹೆಚ್ಚು ಅಂಕ ತೆಗೆದುಕೊಂಡು ಕ್ರೀಡಾ ಮೀಸಲಾತಿ ಪಡೆಯಬೇಕು ಎನ್ನುವುದು ಅನೇಕ ಕ್ರೀಡಾಪಟುಗಳ ಕನಸಾಗಿರುತ್ತದೆ. ಪ್ರತಿ ವರ್ಷವೂ ಭಾರತ ಸರಕಾರದಿಂದ ಮಾನ್ಯತೆ ಹೊಂದಿರುವ ರಾಜ್ಯದ ವಿವಿಧ ಸಂಸ್ಥೆಗಳಲ್ಲಿನ ಕ್ರೀಡಾಪಟುಗಳಿಗೆ ಮೀಸಲಾತಿ ಸಿಗುತ್ತಿತ್ತು. ಆದರೆ ಈ ಬಾರಿ ತಮ್ಮ ಕ್ರೀಡೆಗಳ ಕೋಟಾವೇ ರದ್ದಾಗಿದೆ ಅನ್ನುವ ಸುದ್ದಿ ಕ್ರೀಡಾ ಸಂಸ್ಥೆಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ವಿಪರ್ಯಾಸ ಎಂದರೆ, ಪರಿಷ್ಕೃತ ಕ್ರೀಡಾ ಮೀಸಲಾತಿ ಪಟ್ಟಿಯನ್ನು ಕ್ರೀಡಾ ಇಲಾಖೆ ಬಹಿರಂಗವಾಗಿ ಇನ್ನೂ ಪ್ರಕಟಿಸಿಲ್ಲ. ಆದರೆ ಕೋಟಾ ತಿದ್ದುಪಡಿಗೆ ಸರಕಾರ ಅನುಮೋದನೆ ನೀಡಿದೆ ಎಂಬುದನ್ನು ಕ್ರೀಡಾ ಇಲಾಖೆಯ ಅಪರ ಮಖ್ಯ ಕಾರ್ಯದರ್ಶಿಗಳು ಕ್ರೀಡಾ ಇಲಾಖೆಯ ಆಯುಕ್ತರಿಗೆ ಮೇ 22ರಂದು ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿದ್ದಾರೆ.

ಗ್ರಾಮೀಣ ಕ್ರೀಡಾಪಟುಗಳ ವಿರುದ್ಧ ಬ್ರಹ್ಮಾಸ್ತ್ರ?: ಕಬಡ್ಡಿ ಗ್ರಾಮೀಣ ಕ್ರೀಡಾಕೂಟ. ಏಷ್ಯಾಡ್‌ನ‌ಲ್ಲೂ ಕಬಡ್ಡಿ ಇದೆ.  ಅದನ್ನು ಒಲಿಂಪಿಕ್ಸ್‌ಗೆ ಸೇರಿಸುವ ಪ್ರಯತ್ನ ನಡೆಯುತಿದೆಯಾದರೂ ಅದಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದರೆ ಪ್ರೊಕಬಡ್ಡಿಯಿಂದಾಗಿ ಅದಕ್ಕೆ ಭಾರೀ ಜನಪ್ರಿಯತೆ ಸಿಕ್ಕಿದ್ದು ಯುವಕರು ಹೆಚ್ಚಾಗಿ ಕಬಡ್ಡಿಯತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಬಡ್ಡಿ ಸೇರಿದಂತೆ ಖೋ-ಖೋ, ನೆಟ್‌ಬಾಲ್‌ನಂತಹ ಗ್ರಾಮೀಣ ಕ್ರೀಡಾ ಕೂಟಗಳ ಮೇಲೆ ಸರಕಾರದ ಈ ನಿರ್ಧಾರ ಗಂಭೀರ ಪರಿಣಾಮ ಬೀರುತ್ತದೆ.

ಸಂಪರ್ಕಕ್ಕೆ ಸಿಗದ ಕ್ರೀಡಾ ಇಲಾಖೆ
ಈ ಸಂಬಂಧ ಕ್ರೀಡಾ ಇಲಾಖೆ ಉಪನಿರ್ದೇಶಕ ಸತೀಶ್‌ ಅವರನ್ನು ಉದಯವಾಣಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಇಲಾಖೆಯ ಇತರೆ ಸಿಬಂದಿಯನ್ನು ದೂರವಾಣಿ ಮೂಲಕ ತಲುಪುವ ಪ್ರಯತ್ನ ನಡೆಸಲಾಯಿತಾದರೂ ಅವರ್ಯಾರಿಂದಲೂ ಸಕರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ.

Advertisement

ಯಾವ್ಯಾವ ಕ್ರೀಡೆಗಳಿಗೆ ಕೊಕ್‌?
ಚೆಸ್‌, ಕಬಡ್ಡಿ, ನೆಟ್‌ಬಾಲ್‌, ಖೋ-ಖೋ, ಟೆನ್ನಿಕಾಯ್‌r, ಅಟ್ಯಾ ಪಟ್ಯಾ, ದೇಹದಾಡ್ಯì, ವೂಷು ಸಹಿತ 20 ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿರುವ ರಾಜ್ಯದ ಕ್ರೀಡಾಪಟುಗಳಿಗೆ ಈಗ ಸಂಕಷ್ಟ ಎದುರಾಗಿದೆ. ಸಿಇಟಿಯಡಿಯ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಕ್ರೀಡಾ ಕೋಟಾದಲ್ಲಿ 250 ಸೀಟುಗಳಿವೆ. ಈ ಹಿಂದಿನ ವರ್ಷಗಳಲ್ಲಿ  ಈ ಸೀಟುಗಳು ಭರ್ತಿಯಾಗಿರಲಿಲ್ಲ. ಈಗ 20 ಕ್ರೀಡೆಗಳಿಗೇ ಕೊಕ್‌ ನೀಡಿರುವ ಕಾರಣದಿಂದ ಈ ಕೋಟಾವೂ ಭರ್ತಿಯಾಗುವುದಿಲ್ಲ, ಪ್ರತಿಭಾವಂತರಿಗೆ ಅವಕಾಶವೂ ಸಿಗದಂತಾಗಲಿದೆ. ಕ್ರೀಡಾ ಇಲಾಖೆಯು ಕ್ರೀಡಾತಜ್ಞರು ಅಥವಾ ಹಿರಿಯ ಕ್ರೀಡಾಪಟುಗಳಿಂದ ಸಲಹೆಯನ್ನೂ ಕೇಳದೆ ಏಕಾಏಕಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹಿರಿಯ ಕ್ರೀಡಾಪಟುವೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next