Advertisement

ಲಸಿಕೆಯ ಬಗ್ಗೆ ಯಾವುದೇ ಆತಂಕ ಬೇಡ: ಸಚಿವ ಡಾ. ಕೆ.ಸುಧಾಕರ್

12:06 PM Jan 19, 2021 | Team Udayavani |

ಹುಬ್ಬಳ್ಳಿ: ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯ, ದೇಶದಲ್ಲೇ ಮುಂದಿದೆ. ಎಲ್ಲ ರೀತಿಯ ಸಂಶೋಧನೆ, ಪರೀಕ್ಷೆಯ ನಂತರವೇ ಲಸಿಕೆಯನ್ನು ಬಳಕೆಗೆ ನೀಡಲಾಗಿದ್ದು, ಈ ಬಗ್ಗೆ ಆತಂಕ ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಲಸಿಕೆ ಪಡೆದ ವ್ಯಕ್ತಿ ಮೃತಪಟ್ಟ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸ್ಪಷ್ಟತೆ ಗೊತ್ತಾಗಲಿದೆ. ಲಸಿಕೆ ಸುರಕ್ಷಿತವಾಗಿದೆ. ನಾರಾಯಣ ಹೃದಯಾಲದ ಮುಖ್ಯಸ್ಥ ಡಾ. ದೇವಿ ಶೆಟ್ಟಿ ಸೇರಿದಂತೆ ಅನೇಕರು ಲಸಿಕೆ ಪಡೆದಿದ್ದಾರೆ. ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಎಲ್ಲ ರೀತಿ ಪರೀಕ್ಷೆ ಮಾಡಿಯೇ ಅನುಮತಿ ಕೊಟ್ಟಿದೆ. ಅದು ಸುರಕ್ಷಿತವಾಗಿದೆ ಎಂದರು.

ಇದನ್ನೂ ಓದಿ:ವಲಸಿಗರ ಬಣದಲ್ಲಿ ಒಡಕಿನ ಸುಳಿವು: ಭಿನ್ನ ದಿಕ್ಕಿನೆಡೆಗೆ ಮುಖಂಡರ ಚಿಂತನೆ

ಸಿಎಂ ಯಡಿಯೂರಪ್ಪರಿಗೆ ಆಡಳಿತದ ಅನುಭವವಿದೆ. ಅಸಮಾಧಾನ ಗೊಂಡವರಿಗೆ ಶಮನ ಮಾಡುವುದು ಅವರಿಗೆ ಗೊತ್ತು. ಯಾರಿಗೆ ಸ್ಥಾನ ಕೊಡಬೇಕು ಎಂದು ಸಹ ಗೊತ್ತು ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ  ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದ್ದು, ಸಿಎಂ ಬದಲಾವಣೆ ಹೇಳಿಕೆಗಳು ಅರ್ಥಹೀನ ಎಂದರು.

Advertisement

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಭಾರತದಿಂದ 20 ಲಕ್ಷ ಕೋವಿಡ್ ಲಸಿಕೆ: ಪಾಕ್ ನಿಂದಲೂ ಮುಂದುವರಿದ ಪ್ರಯತ್ನ

ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಸಿಎಂ ಬದಲಾವಣೆ ಕುರಿತಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇನು ಹೇಳುವುದು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next