Advertisement

ಈ ಬಾರಿ ದಸರಾ ಉದ್ಘಾಟಿಸೋದು ನಿತ್ಯೋತ್ಸವ ಕವಿ ನಿಸಾರ್ ಅಹಮದ್

03:00 PM Aug 17, 2017 | Sharanya Alva |

ಬೆಂಗಳೂರು/ಮೈಸೂರು: ಸೆಪ್ಟೆಂಬರ್ 21ರಿಂದ 9 ದಿನಗಳ ಕಾಲ ನಡೆಯಲಿರುವ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ನಿತ್ಯೋತ್ಸವ ಕವಿ ಕೆಸ್ ನಿಸಾರ್ ಅಹಮದ್ ಅವರು ಉದ್ಘಾಟಿಸಲಿದ್ದಾರೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

Advertisement

ಈ ಬಾರಿ ದಸರಾವನ್ನು ಹಿರಿಯ ಕವಿ ಕೆಸ್ ನಿಸಾರ್ ಅಹಮದ್ ಅವರು ಉದ್ಘಾಟಿಸಬೇಕೆಂದು ದಸರಾ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ. ಅದರಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಸಾರ್ ಜತೆ ಮಾತುಕತೆ ನಡೆಸಿರುವುದಾಗಿ ಹೇಳಿದರು.

ಶೀಘ್ರದಲ್ಲೇ ನಿಸಾರ್ ಅಹಮದ್ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಗುವುದು ಎಂದು ಮಹದೇವಪ್ಪ ಈ ಸಂದರ್ಭದಲ್ಲಿ ತಿಳಿಸಿದರು.  ಪ್ರೊ. ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್ ಅವರು ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದ್ದರು. ಸುಮಾರು 5 ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಕೆಎಸ್ 25 ಕೃತಿಗಳನ್ನು ರಚಿಸಿದ್ದಾರೆ.

ಮನಸು ಗಾಂಧಿ ಬಜಾರು ಹಾಗೂ ನಿತ್ಯೋತ್ಸವ ಪ್ರಸಿದ್ಧ ಕವನ ಸಂಕಲನಗಳಾಗಿದೆ. ನಿಸಾರ್ ಅವರು ಸಂವೇದನಾಶೀಲ ಹಾಗೂ ಜನಪ್ರಿಯ ಕವಿಯಾಗಿದ್ದಾರೆ. ಕುರಿಗಳು ಸಾರ್ ಕುರಿಗಳು ಅವರ ರಾಜಕೀಯ ವಿಡಂಬನೆಯ ಜನಪ್ರಿಯ ಕವನ.

Advertisement

Udayavani is now on Telegram. Click here to join our channel and stay updated with the latest news.

Next