ಮೈಸೂರು: ಸಿದ್ದರಾಮಯ್ಯ,ಪರಮೇಶ್ವರ ಇಬ್ಬರೂ ಯಾವುದಾದರೂ ದಲಿತರ ಬೀದಿಗೆ ಹೋಗಲಿ. ಸಿದ್ದರಾಮಯ್ಯರನ್ನು ಸೋಲಿಸಲು ನಾನು ಪ್ರಯತ್ನ ಮಾಡಿಲ್ಲವೆಂದು ಪರಮೇಶ್ವರ್ ಹೇಳಲಿ, ಪರಮೇಶ್ವರರನ್ನು ಸೋಲಿಸಲು ನಾನು ಪ್ರಯತ್ನ ಮಾಡಿಲ್ಲವೆಂದು ಸಿದ್ದರಾಮಯ್ಯ ಆಣೆ ಮಾಡಿ ಹೇಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸವಾಲೆಸೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಐವರು ಸ್ವಯಂ ಘೋಷಿತ ಮುಖ್ಯಮಂತ್ರಿಗಳಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದೆ. ಒಂದೊಂದು ಸಮುದಾಯಕ್ಕೆ ಒಬ್ಬೊಬ್ಬ ನಾಯಕ ಸಿಎಂ ಆಗಬೇಕು ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನಾನೊಬ್ಬ ಕಾಮನ್ ಮ್ಯಾನ್, ಜನ ಸ್ಟಾರ್ ಡಮ್ ಕೊಟ್ಟಿದ್ದಾರಷ್ಟೇ.: ಶಿವಣ್ಣ special ಮಾತು
17 ಮಂದಿ ಕಾಂಗ್ರೆಸ್ ಗೆ ಮತ್ತೆ ಸೇರಿಕೊಳ್ಳುವ ವಿಚಾರದಲ್ಲಿ ಡಿ ಕೆ ಶಿವಕುಮರ್, ಸಿದ್ದರಾಮಯ್ಯ ನಡುವೆ ಕಿತ್ತಾಟ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ನಿಮ್ಮ ಪಕ್ಷ ನಿಮ್ಮ ಶಾಸಕರನ್ನ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೂ ಕಾಂಗ್ರೆಸ್ ಬರಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೊಸೆ ಎನ್ನುತ್ತಾರೆ. ಬಾದಾಮಿಯಲ್ಲಿ ನಿಂತು ಅಲ್ಲಿಯೂ ಸೊಸೆ ಎನ್ನುತ್ತಾರೆ. ಕೀಲಿ ಕೈ ನನ್ನ ಕೈಯಲ್ಲಿ ಇದೆ ಎನ್ನುತ್ತಾರೆ. ಹಾಗಿದ್ರೆ ನೀವು ಯಾವ ಪಕ್ಷಕ್ಕೆ ಮಗ ಹೇಳಿ ಎಂದು ಸಿದ್ದರಾಮಯ್ಯ ಸೋಸೆ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.