Advertisement

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

06:45 PM Oct 15, 2024 | Shreeram Nayak |

ಶಿವಮೊಗ್ಗ: ಹುಬ್ಬಳಿಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಅ.20ರಂದು ಬಾಗಲಕೋಟೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಅಲ್ಲಿ ಬ್ರಿಗೇಡ್‌ಗೆ ನಾಮಕರಣ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗ ದಲಿತ ವರ್ಗದ ಜತೆಗೆ ಎಲ್ಲಾ ಸಮುದಾಯದ ದೊಡ್ಡ ಸಂಘಟನೆ ಮಾಡಬೇಕು ಎಂದು ಅನೇಕ ಸಾಧು ಸಂತರ ಅಪೇಕ್ಷೆ ಇದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಒಂದು ಸಭೆ ಆಗಿದೆ. ಸಭೆಯಲ್ಲಿ ತೀರ್ಮಾನ ಆಗಿರುವ ಪ್ರಕಾರ ಬಾಗಲಕೋಟೆಯ ಚರಂತಿಮಠ ಸಭಾಂಗಣದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಎರಡೂವರೆ ಸಾವಿರಕ್ಕೂ ಅ ಧಿಕ ಜನ ಸೇರುವ ನಿರೀಕ್ಷೆ ಇದೆ.

ಉತ್ತರ ಕರ್ನಾಟಕ ಭಾಗದ ಸಾಧು- ಸಂತರು ಸಭೆಯ ನಾಯಕತ್ವ ವಹಿಸುತ್ತಾರೆ. ಅವರೇ ಬ್ರಿಗೇಡ್‌ ಹೆಸರು ಘೋಷಣೆ ಮಾಡುತ್ತಾರೆ ಎಂದರು.

ವಕ್ಫ್ ಆಸ್ತಿ ಕಬಳಿಸಿದ ಖರ್ಗೆ,ರೆಹಮಾನ್‌: ಈಶ್ವರಪ್ಪ
ಶಿವಮೊಗ್ಗ:ರಾಜ್ಯದ ಶ್ರೀಮಂತ ಮುಸ್ಲಿಮರು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ. ಅನ್ವರ್‌ ಮಾನಪ್ಪಾಡಿ ವರದಿ ಪ್ರಕಾರ ರೆಹಮಾನ್‌ ಖಾನ್‌, ಮಲ್ಲಿಕಾರ್ಜುನ ಖರ್ಗೆ ಆಸ್ತಿ ಲೂಟಿ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಫ್ ಆಸ್ತಿಯಲ್ಲಿ ಸಾವಿರಾರು ಕೋಟಿ ರೂ. ಲೂಟಿಯಾಗಿದೆ. ಬಡ ಮುಸ್ಲಿಮರಿಗೆ ಸಹಾಯ ಮಾಡಲು ಎಲ್ಲರೂ ಪ್ರಯತ್ನ ಮಾಡಿದರು.

Advertisement

ಪ್ರಭಾವಿ ಮುಸ್ಲಿಮರು ತಮ್ಮ ಆಸ್ತಿ ಹೋಗುತ್ತದೆ ಎಂದು ಡಿ.ಎಚ್‌.ಶಂಕರಮೂರ್ತಿ ಸಭಾಧ್ಯಕ್ಷರಾಗಿದ್ದಾಗ ವರದಿ ಸ್ವೀಕಾರ ಮಾಡಿದ್ದರು. ಅನ್ವರ್‌ ಮಾನಪ್ಪಾಡಿ ಹಾಗೂ ಡಿ.ಎಚ್‌.ಶಂಕರಮೂರ್ತಿ ಅವರಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next