Advertisement
“ಕಳಪೆ ಫಾರ್ಮ್ ಹೀಗೆ ಮುಂದುವರಿದರೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ . ಅನಿವಾರ್ಯವಾಗಿ ರಾಹುಲ್ ನಮಗೆ ಪರ್ಯಾಯ ಆಯ್ಕೆಯಾಗಬಹುದು’ ಎಂದುರವಿ ಶಾಸ್ತ್ರಿ ತಿಳಿಸಿದ್ದಾರೆ.
Related Articles
Advertisement
ಕೆ.ಎಲ್.ರಾಹುಲ್ ಭಾರತ ತಂಡದ ಪರ ವಿಕೆಟ್ ಕೀಪಿಂಗ್ ಮಾಡಿಲ್ಲ. ರಣಜಿ ಹಾಗೂ ಐಪಿಎಲ್ ನಲ್ಲಿ ವಿಕೆಟ್ ಕೀಪಿಂಗ್ ಮಾಡಿ ಯಶಸ್ಸು ಕಂಡಿದ್ದಾರೆ.
ಪಂತ್ ವೈಫಲ್ಯ ಸುರಿಮಳೆ: ಬ್ಯಾಟ್ಸ್‌ಮನ್ -ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ವೈಫಲ್ಯಗಳ ಸುರಿಮಳೆ ಕಂಡಿದ್ದಾರೆ. ಇತ್ತೀಚಿಗಿನ ವಿಂಡೀಸ್ ವಿರುದ್ಧ ಟಿ20 ಸರಣಿ ಸೇರಿದಂತೆ ಹಲವು ಸರಣಿಗಳಲ್ಲಿ ರಿಷಭ್ ಪಂತ್ ರನ್ ಬರ ಅನುಭವಿಸಿದ್ದಾರೆ. ಅಷ್ಟೇ ಆದರೆ ಸುಮ್ಮನಿರಬಹುದಿತ್ತು. ವಿಕೆಟ್ ಹಿಂದೆ ಸ್ಟಂಪ್ ಹಿಂದೆಯೂ ಅವಕಾಶ ಚೆಲ್ಲಿ ದುಬಾರಿಯಾಗಿದ್ದಾರೆ.
ಹೀಗಾಗಿಯೇ ಅಭಿಮಾನಿಗಳು ಟ್ವೀಟರ್‌ನಲ್ಲಿ ಧೋನಿಗೆ ಅವಕಾಶ ನೀಡಿ ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು ಒತ್ತಾಯಿಸಿದರು. ವಿಶಾಖಪಟ್ಟಣದಲ್ಲಿ ನಡೆದ ವಿಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಪಂತ್ ಕೀಪಿಂಗ್‌ನಲ್ಲಿ ತಪ್ಪು ಎಸಗಿದ್ದಾಗ ಅಭಿಮಾನಿಗಳು “ಧೋನಿ…ಧೋನಿ’ ಎಂದು ಕೂಗಿದ್ದರು.
ಆಗ ವಿರಾಟ್ ಕೊಹ್ಲಿ ಪಂತ್‌ಗೆ ಬೆಂಬಲವಾಗಿ ಕ್ರೀಡಾಂಗಣದಲ್ಲಿ ನಿಂತಿದ್ದರು. ಸ್ವತಃ ಆಯ್ಕೆ ಸಮಿತಿ, ನಾಯಕ ಕೊಹ್ಲಿ ಸೇರಿದಂತೆ ಎಲ್ಲರ ಬೆಂಬಲದಿಂದ ಹಲವು ಅವಕಾಶ ಪಡೆಯುತ್ತಿದ್ದರೂ ಪಂತ್ ವಿಫಲರಾಗುತ್ತಿರುವುದು ವಿಪರ್ಯಾಸವೇ ಸರಿ.