Advertisement
ಗುಜರಾತ್‌ನಲ್ಲಿ ಮತ ಎಣಿಕೆ ವೇಳೆ ಗೊಂದಲ ಉಂಟಾದ ಕಾರಣ, ಮತ ಎಣಿಕೆಯನ್ನು ವಿಳಂಬ ಮಾಡಲಾಗಿದೆ.
Related Articles
Advertisement
ಸಿಂದಿಯಾ, ದಿಗ್ವಿಜಯ್ ಮೇಲ್ಮನೆಗೆ: ಮಧ್ಯಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಜೆಪಿಯಿಂದ ಜ್ಯೋತಿರಾದಿತ್ಯ ಸಿಂದಿಯಾ, ಸುಮೇರ್ ಸಿಂಗ್ ಸೋಲಂಕಿ, ಕಾಂಗ್ರೆಸ್‌ನಿಂದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮೇಲ್ಮನೆಗೆ ಎಂಟ್ರಿ ಪಡೆದಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಅಭ್ಯರ್ಥಿ, ದಲಿತ ನಾಯಕ ಫೂಲ್ ಸಿಂಗ್ ಬರಿಯಾ ಸೋಲುಂಡಿದ್ದಾರೆ.
ಇದೇ ವೇಳೆ, ಸಮಾಜವಾದಿ ಪಕ್ಷದ ಶಾಸಕ ರಾಜೇಶ್ ಶುಕ್ಲಾ ಅವರು ಬಿಜೆಪಿ ಪರ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದೇ ವೇಳೆ, ಬಿಜೆಪಿಯ ಇಬ್ಬರು ಶಾಸಕರು ಅಡ್ಡಮತದಾನ ಮಾಡಿರುವ ಆರೋಪ ಎದುರಿಸಿದ್ದಾರೆ.
ಆಂಧ್ರದಲ್ಲಿ ಕ್ಲೀನ್‌ಸ್ವೀಪ್: ನಿರೀಕ್ಷೆಯಂತೆಯೇ ಎಲ್ಲ ನಾಲ್ಕು ಸ್ಥಾನಗಳನ್ನೂ ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಬಾಚಿಕೊಂಡಿದೆ.
ಉಳಿದೆಡೆ ಏನಾಯ್ತು?: ಜಾರ್ಖಂಡ್‌ನ 2 ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಬಿಜೆಪಿಯ ದೀಪಕ್ ಪ್ರಕಾಶ್, ಮತ್ತೊಂದನ್ನು ಆಡಳಿತಾರೂಢ ಜೆಎಂಎಂ ಸ್ಥಾಪಕ, ಮಾಜಿ ಸಿಎಂ ಶಿಬು ಸೊರೇನ್ ತಮ್ಮದಾಗಿಸಿಕೊಂಡಿದ್ದಾರೆ. ಮೇಘಾಲಯದಲ್ಲಿ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ, ಮಣಿಪುರದಲ್ಲಿ ಬಿಜೆಪಿ ಗೆದ್ದಿದೆ. ಜೋರಾಂನಲ್ಲಿ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ.