Advertisement
ಭೂಮಿಯನ್ನು ಹೋಲುವಂಥ ಗ್ರಹಗಳ ಸಮೂಹವನ್ನು ಟ್ರ್ಯಾಪಿಸ್ಟ್-1 ಎಂದು ಕರೆಯುತ್ತಾರೆ. ಈ ಗ್ರಹಗಳು ವಾಸಯೋಗ್ಯವಾಗಬಲ್ಲ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಟ್ರ್ಯಾಪಿಸ್ಟ್-1ಬಿ ವಿಚಾರದಲ್ಲಿ ಈ ಅಂಶ ಸುಳ್ಳಾಗಿದೆ. ಈ ಗ್ರಹದಲ್ಲಿನ ವಾತಾವರಣ ಮತ್ತು ತಾಪಮಾನವನ್ನು ಅಳೆದ ಬಳಿಕ, ಇದು ವಾಸಯೋಗ್ಯವನ್ನು ಎಂಬುದನ್ನು ಬಾಹ್ಯಾಕಾಶದಲ್ಲಿರುವ ಅತಿದೊಡ್ಡ ದೂರದರ್ಶಕವಾದ ಜೇಮ್ಸ್ ವೆಬ್ ಸ್ಪಷ್ಟಪಡಿಸಿದೆ.
ಹಗಲು ಹೊತ್ತಲ್ಲಿ ಈ ಗ್ರಹದ ತಾಪಮಾನ ಸುಮಾರು 500 ಕೆಲ್ವಿನ್ಸ್ ಅಂದರೆ ಬರೋಬ್ಬರಿ 232 ಡಿಗ್ರಿ ಸೆಲಿÏಯಸ್ ಆಗಿರುತ್ತದೆ ಎಂದು ಖಗೋಳವಿಜ್ಞಾನಿಗಳು ತಿಳಿಸಿದ್ದಾರೆ. ಜೇಮ್ಸ್ ವೆಬ್‌ನ ಮಿಡ್-ಇನ್‌ಫ್ರಾರೆಡ್ ಇನ್‌ಸ್ಟುಮೆಂಟ್(ಎಂಐಆರ್‌ಐ) ಅನ್ನು ಬಳಸಿಕೊಂಡು ವಿಜ್ಞಾನಿಗಳು, ಈ ಗ್ರಹದಿಂದ ಹೊರಸೂಸುವ ಉಷ್ಣತೆ ಹಾಗೂ ಅವರಕ್ತ ಕಿರಣಗಳ ಪ್ರಮಾಣವನ್ನು ಪತ್ತೆಹಚ್ಚಿದ್ದಾರೆ.
ಭೂಮಿಯು ಸೂರ್ಯನಿಂದ ಪಡೆಯುವ ಶಕ್ತಿಯ ನಾಲ್ಕು ಪಟ್ಟು ಅಧಿಕ ಶಕ್ತಿಯನ್ನು ಟ್ರ್ಯಾಪಿಸ್ಟ್-1ಬಿ ಗ್ರಹವು ಪಡೆಯುತ್ತದೆ ಎಂಬ ಅಂಶವೂ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟ್ರ್ಯಾಪಿಸ್ಟ್ ವ್ಯವಸ್ಥೆಯಲ್ಲಿರುವ ಇತರೆ ಗ್ರಹಗಳ ಕುರಿತೂ ಅಧ್ಯಯನ ನಡೆಸಲು ಆರಂಭಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.