Advertisement

ನ್ಯಾಯ,ಸತ್ಯ, ಅಭಿವೃದ್ಧಿಯೇ ಬಿಜೆಪಿಯ ಧರ್ಮ: ಜೆ.ಪಿ.ನಡ್ಡಾ

03:51 PM Nov 25, 2021 | Team Udayavani |

ಪಣಜಿ: ‘ನ್ಯಾಯ,ಸತ್ಯ, ಅಭಿವೃದ್ಧಿಯೇ ಬಿಜೆಪಿಯ ಧರ್ಮ, ಅದಕ್ಕಾಗಿ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಗೋವಾ ಮತದಾರರಲ್ಲಿ ಮನವಿ ಮಾಡಿದ್ದಾರೆ.

Advertisement

ವಿಧಾಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ಸಾಖಳಿ ಕ್ಷೇತ್ರದ ಅಮೋಣಾದಿಂದ ಗುರುವಾರದಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ನಡ್ಡಾ ಅವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ” ಎಂಬುದು ಬಿಜೆಪಿಯ ಧ್ಯೇಯವಾಕ್ಯವಾಗಿದೆ. ಇದರಿಂದಾಗಿ ಅಧರ್ಮದ ಶಕ್ತಿಗಳನ್ನು ಧರ್ಮದ ಹಾದಿಗೆ ತರಬೇಕು ಎಂದು ಕರೆ ನೀಡಿದರು.

ಗೋವಾ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಗೋವಾ ಗಣನೀಯ ಕೊಡುಗೆ ನೀಡಬೇಕಾದರೆ ಮತ್ತೊಮ್ಮೆ ಗೋವಾದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿ ಯಾವಾಗಲೂ ದೇವರು,ದೇಶ,ಧರ್ಮಕ್ಕೆ ಆದ್ಯತೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ಗೋವಾದಲ್ಲಿ ಬಿಜೆಪಿಯು ಚುನಾವಣಾ ಪ್ರಚಾರ ಕಾರ್ಯವನ್ನು ಸಾಖಳಿಂ ಕ್ಷೇತ್ರದಿಂದ ಆರಂಭಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಸಂತಸ ತಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯ ಹಾಗೂ ಕಾರ್ಯಕರ್ತರ ಪರಿಶೃಮದ ಬಲದಿಂದ ಗೋವಾದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಗೋವಾದಲ್ಲಿ ಬಿಜೆಪಿ 22 ಕ್ಕೂ ಹೆಚ್ಚು ಮತ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಗೋವಾ ಬಿಜೆಪಿ ಪ್ರಭಾರಿ ಸಿ.ಟಿ.ರವಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Advertisement

ವಿಶೇಷ ಪೂಜೆ


ನಡ್ಡಾ ರವರು ಪಣಜಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಪಣಜಿ ಶಾಸಕ ಬಾಬೂಶ್ ಮೊನ್ಸೆರಾತ್, ಉತ್ಪಲ್ ಪರೀಕರ್, ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next