ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ದೊರಕಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್ ಹೇಳಿದರು.
Advertisement
ಪಟ್ಟಣದಲ್ಲಿ ಮಾದಿಗ ಸಮಾಜ ಸೇರಿದಂತೆ ವಿವಿಧ ದಲಿತ ಸಮುದಾಯಗಳ ಮುಖಂಡರಿಂದ ಕೆಪಿಸಿಸಿ ನೂತನ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ನೇಮಕವಾದ ಹಿನ್ನಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೆಳಸ್ತರದಲ್ಲಿದ್ದ ಸಮುದಾಯಗಳಿಗೆ ಸಂವಿಧಾನದ ಅಶಯದಂತೆ ಕಾಂಗ್ರೆಸ್ ಪಕ್ಷ ಸಕಲ ಸೌಲಭ್ಯವನ್ನು ಕಲ್ಪಿಸಿ ಅವರ ಜೀವನ ಸುಧಾರಿಸುವಲ್ಲಿ ಬಹುಮುಖ್ಯ
ಪಾತ್ರವಹಿಸಿದೆ ಎಂದರು.
ಜನರನ್ನು ಗೊಂದಲಕ್ಕೆ ಸಿಕ್ಕಿಸುತ್ತಿದೆ. ಸರ್ಕಾರದ ನಿರ್ಣಯದಿಂದ ಜನರು ಶೋಷಣೆಗೊಳಗಾಗುತ್ತಿದ್ದಾರೆ. ತನ್ನ ಹೊಸ ನೀತಿಗಳ ಮೂಲಕ ಸರ್ಕಾರ ವಿಫಲವಾಗುತ್ತಿದ್ದು, ಸರ್ಕಾರ ಆದೇಶದಿಂದಾಗಿ ಜನರು ಬೇಸರಗೊಂಡಿದ್ದಾರೆ ಎಂದು ತಿಳಿಸಿದರು. ಮಾದಿಗ ಮಹಾಸಭಾದ ಅಧ್ಯಕ್ಷ ಯರಬಳ್ಳಿ ಆರ್.ಹನುಮಂತಪ್ಪ, ತಾಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ ಮಾತನಾಡಿದರು.
ಮುಖಂಡರಾದ ಡಿ.ರಾಜಕುಮಾರ್, ಪುಣಬಗಟ್ಟ ನಿಂಗಪ್ಪ, ಕಾನಹಳ್ಳಿ ರುದ್ರಪ್ಪ, ಲಕ್ಷಣ ಜಾದವ್, ಯು.ನರಸಿಂಗ್ ರಾವ್, ಬಾವಿಕಟ್ಟಿ ಭರಮಪ್ಪ, ಮೇಘರಾಜ್, ಪ್ರಕಾಶ್, ಕೊರಚರ ಸಮಾಜದ ಮುಖಂಡ ಆಶೋಕ ಭಾಗವಹಿಸಿದ್ದರು.