Advertisement

ಭಾರತ-ಇಂಗ್ಲೆಂಡ್‌ ಕಿರಿಯರ ಟೆಸ್ಟ್‌ ಡ್ರಾ

09:32 AM Feb 25, 2017 | |

ನಾಗ್ಪುರ: ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್‌ ತಂಡದೆದುರು ನಡೆದ 19 ವಯೋಮಿತಿಯೊಳಗಿನ ಟೆಸ್ಟ್‌ ಸರಣಿಯ ದ್ವಿತೀಯ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ. ನಾಲ್ಕು ದಿನಗಳ ಈ ಟೆಸ್ಟ್‌ನ ಅಂತಿಮ ದಿನ ತಾಳ್ಮೆಯ ಆಟವಾಡಿದ ಇಂಗ್ಲೆಂಡ್‌ ಆಟಗಾರರು 255 ರನ್‌ ಪೇರಿಸಿ ಆಲೌಟಾಯಿತು. 

Advertisement

ಇದರಿಂದಾಗಿ ಭಾರತ ಗೆಲ್ಲಲು 243 ರನ್‌ ಗಳಿಸಬೇಕಿತ್ತು. ಆದರೆ ಹೆಚ್ಚಿನ ಸಮಯವಿಲ್ಲದ ಕಾರಣ ಪಂದ್ಯವನ್ನು ಅಲ್ಲಿಗೆ ಡ್ರಾದಲ್ಲಿ ಅಂತ್ಯಗೊಳಿಸಲು ನಿರ್ಧರಿಸಲಾಯಿತು. ಸರಣಿಯ ಮೊದಲ ಪಂದ್ಯ ಕೂಡ ಡ್ರಾದಲ್ಲಿ ಅಂತ್ಯಗೊಂಡಿತ್ತು. ಎರಡು ವಿಕೆಟಿಗೆ 34 ರನ್ನಿನಿಂದ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡವನ್ನು ಜಾರ್ಜ್‌ ಬಾಟ್ಲೆìಟ್‌, ಡೆಲಾÅಯ್‌ ರಾಲಿನ್ಸ್‌ ಮತ್ತು ಏರಾನ್‌ ಬಿಯರ್ಡ್‌ ಆಧರಿಸಿದರು. ಬಾಟ್ಲೆìಟ್‌ 76 ರನ್‌ ಗಳಿಸಿದರೆ ರಾಲಿನ್ಸ್‌ 49 ರನ್‌ ಹೊಡೆದರು. ರಾಲಿನ್ಸ್‌ ಮೊದಲ ಇನಿಂಗ್ಸ್‌ ಶತಕ ಸಿಡಿಸಿ ಸಂಭ್ರಮಿಸಿದ್ದರು. ಬಿಯರ್ಡ್‌ 34 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್‌ ಆಟಗಾರರನ್ನು ಬೇಗನೇ ಔಟ್‌ ಮಾಡಲು ಭಾರತ ಕೀಪರ್‌ ಹೊರತುಪಡಿಸಿ ಉಳಿದ 10 ಆಟಗಾರರ ಸೇವೆ ಪಡೆಯಿತು. ಹರ್ಷ ತ್ಯಾಗಿ ಮಾತ್ರ ಯಶಸ್ವಿ ಬೌಲರ್‌ ಎನಿಸಿಕೊಂಡರು. 25 ಓವರ್‌ ಎಸೆದ ಅವರು 67 ರನ್ನಿಗೆ 4 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 375 ಮತ್ತು 255 (ಜಾರ್ಜ್‌ ಬಾಟ್ಲೆìಟ್‌ 76, ಡೆಲಾÅಯ್‌ ರಾಲಿನ್ಸ್‌ 49, ಏರಾನ್‌ ಬಿಯರ್ಡ್‌ 34 ಔಟಾಗದೆ, ಹರ್ಷ ತ್ಯಾಗಿ 67ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next