Advertisement

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

06:37 PM Apr 27, 2024 | Team Udayavani |

ಗಂಗಾವತಿ : ಭಾರತದ ಹಿರಿಮೆ ಗರಿಮೆಯನ್ನು ಹೆಚ್ಚು ಮಾಡಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಬಡತನದಿಂದ ಮುಕ್ತ ಮಾಡಲಿ ಎಂದು ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Advertisement

ಅವರು ತಾಲೂಕಿನ ಆನೆಗೊಂದಿ ಹೋಬಳಿ ವ್ಯಾಪ್ತಿಯಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರವಾಗಿ ಬಹಿರಂಗ ಪ್ರಚಾರ ಸಮಾರಂಭದಲ್ಲಿ ಮಾತನಾಡಿದರು.

ಭಾರತ ವಿಶ್ವಗುರು ಆಗಲು ನರೇಂದ್ರ ಮೋದಿಯವರು ಕೈಗೊಂಡಿರುವ 10 ಹಲವು ಕಾರ್ಯಕ್ರಮಗಳು ಕಾರಣವಾಗಿವೆ ಭಾರತದ ಸೈನ್ಯದ ಶಕ್ತಿಯನ್ನು ವೃದ್ಧಿ ಮಾಡಿದ್ದಾರೆ ಐಟಿಬಿಟಿ ಸೇರಿದಂತೆ ಹಲವು ಉದ್ಯಮಗಳಲ್ಲಿ ಬೆಳವಣಿಗೆ ಕಂಡಿದೆ ಇದರಿಂದ ಉದ್ಯೋಗ ಸಂಖ್ಯೆ ಹೆಚ್ಚಿದೆ ಬಡತನ ರೇಖೆ ಕಡಿಮೆಯಾಗಿದೆ. ಬಡ ಜನತೆಗೆ ದವಸಧಾನ್ಯ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಕಿಸಾನ್ ಸಮ್ಮನ್ ಯೋಜನೆ ಅಡಿ ಪ್ರತಿವರ್ಷ 12,000 ಹಣ ನೀಡಲಾಗುತ್ತಿದೆ.

ಇನ್ನು ಹಲವು ಕಾರ್ಯಕ್ರಮಗಳು ದೇಶದ ಜಾರಿಯಲ್ಲಿ ಲಭ್ಯವಾಗುತ್ತಿದೆ ಆದ್ದರಿಂದ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಲು, ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರದ ಹೆಚ್ಚುವರಿ ಹಣ ತರಲು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಭಾರತೀಯ ಜನತಾ ಪಾರ್ಟಿ ಬದ್ಧತೆಯ ಪಕ್ಷವಾಗಿದೆ. ದೇಶ ಮತ್ತು ಧರ್ಮದ ಸಂರಕ್ಷಣೆಗಾಗಿ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಬೇಕು. ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡುವ ನೀಲನಕ್ಷೆಯನ್ನು ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಚನೆ ಮಾಡಲಾಗಿತ್ತು. ಹೆಚ್ಚುವರಿ ಅನುದಾನವನ್ನು ಸಹ ನೀಡಲಾಗಿತ್ತು ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಸ್ತ ಮತಬಾಂಧವರು ಡಾ. ಬಸವರಾಜ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಅಭ್ಯರ್ಥಿ ಡಾ.ಬಸವರಾಜ, ಆನೆಗೊಂದಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ್, ಆನೆಗೊಂದಿ ರಾಜಮನೆತನದ ರಾಜಾ ಕೃಷ್ಣದೇವರಾಯ, ಚಂದ್ರಶೇಖರ್ ಬತ್ತಾದ್ , ಪ್ರಮುಖರಾದ‌ ವೀರಭದ್ರಪ್ಪ ನಾಯಕ,ಹನುಮಂತಪ್ಪ ನಾಯಕ, ಸಿದ್ರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ರಾಜು ನಾಯಕ, ರುದ್ರೇಶ ಡ್ಯಾಗಿ, ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರುರೂ, ದುರುಗಪ್ಪ ಆಗೋಲಿ, ಚನ್ನವೀರಗೌಡ ಕೋರಿ, ಹುಲಿಗೆಮ್ಮ ನಾಯಕ, ವಿಜಯ ಪದ್ಮಾ ಸೇರಿದಂತೆ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next