Advertisement

ಜೇಸಿ ಉಡುಪಿ ಸಿಲ್ವರ್ ಸ್ಟಾರ್ ಅಧ್ಯಕ್ಷರಾಗಿ ದೀಪಿಕಾ ಭಟ್

11:14 AM Jan 26, 2019 | Karthik A |

ಉಡುಪಿ: ಜೇಸಿ ಉಡುಪಿ ಸಿಲ್ವರ್ ಸ್ಟಾರ್ ನ ಅಧ್ಯಕ್ಷರಾಗಿ ದೀಪಿಕಾ ನಾಗೇಂದ್ರ ಭಟ್ ಅವರು ಅಧಿಕಾರ ಸ್ವೀಕರಿಸಿದರು. ಕಡಿಯಾಳಿಯ ಕಾತ್ಯಾಯಿನಿ ಸಭಾಂಗಣದಲ್ಲಿ ಇತ್ತೀಚೆಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯದರ್ಶಿಯಾಗಿ ವಿಜೇತಾ ಶೆಟ್ಟಿ, ಜೇ.ಜೆ.ಸಿ. ಅಧ್ಯಕ್ಷರಾಗಿ ಸುಪ್ರದ ಭಟ್ ಹಾಗೂ ನೂತನ ಸದಸ್ಯರು ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಮಲ್ಲಿಕಾ ಕೆ.ಆರ್. ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

Advertisement


ಜೇಸಿ ವಲಯಾಧ್ಯಕ್ಷರಾದ ಅಶೋಕ್ ಚುಂತಾರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಪದಗ್ರಹಣ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕಡಿಯಾಳಿ ವಾರ್ಡಿನ ಕೌನ್ಸಿಲರ್ ಗೀತಾ ಶೇಟ್ ಮತ್ತು ವಲಯ ಉಪಾಧ್ಯಕ್ಷರಾದ ಜೆಸಿ ದೇವೇಂದ್ರ ನಾಯಕ್ ಅವರು ನೂತನ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು. ಸಿಲ್ವರ್ ಸ್ಟಾರ್ ಘಟಕದ ಸ್ಥಾಪಕಾದ್ಯಕ್ಷರಾದ ಜ್ಯೋತಿ ರಮಾನಾಥ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ನಿರ್ದೇಶಕ ಜೆಸಿ ಸಂದೀಪ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ನಿಕಟಪೂರ್ವ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು, ಜೇಸಿ ರಾಘವೇಂದ್ರ ಪ್ರಭು ಕರ್ವಾಲು, ಜೇಸಿ ಅಕ್ಷತಾ ಗಿರೀಶ್, ಜೆಸಿ ಶಿವಕುಮಾರ್ ಬಾರಿತ್ತಾಯ ಸೇರಿದಂತೆ ಜೇಸಿ ಹಾಗೂ ಜೇಸಿಯೇತರ ಗಣ್ಯರು ಈ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next