Advertisement
ಇಂಗ್ಲೆಂಡ್ ತಲುಪಿದೊಡನೆ ಪಾಕ್ ಆಟಗಾರರು ಡರ್ಬಿಶೈರ್‌ನಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇವರ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು. ಹಾಗೆಯೇ ಈ ಆಟಗಾರರ ನಡುವೆಯೇ ಅಭ್ಯಾಸ ಪಂದ್ಯಗಳನ್ನೂ ನಡೆಸಲಾಗುವುದು.ಮುನ್ನೆಚ್ಚರಿಕೆಯ ಕ್ರಮವಾಗಿ ತಂಡದಲ್ಲಿ ಎರಡು ಪಟ್ಟು ಕ್ರಿಕೆಟಿಗರನ್ನು ಸೇರಿಸಿಕೊಳ್ಳಲಾಗಿದೆ. ಅಕಸ್ಮಾತ್ ಯಾರಾದರೂ ಅನಾರೋಗ್ಯಕ್ಕೆ ಸಿಲುಕಿದರೆ ಸಮಸ್ಯೆ ಆಗಬಾರದೆಂಬುದೇ ಇದಕ್ಕೆ ಕಾರಣ.
ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಪತಿ, ಶೋಯಿಬ್ ಮಲಿಕ್ ವಿಳಂಬವಾಗಿ ಇಂಗ್ಲೆಂಡಿಗೆ ಪಯಣಿಸಲಿದ್ದಾರೆ. ಅವರಿಗೆ ಕುಟುಂಬದೊಂದಿಗೆ ಇರಲು ವಿಶೇಷ ಅನುಮತಿ ನೀಡಲಾಗಿದೆ. ಸಿಯಾಲ್‌ಕೋಟ್‌ನಲ್ಲಿರುವ ಶೋಯಿಬ್ ಮಲಿಕ್ ತಮ್ಮ ಪತ್ನಿ-ಪುತ್ರನನ್ನು ಭೇಟಿಯಾಗದೇ 5 ತಿಂಗಳಾಗಿವೆ. ಹೀಗಾಗಿ ಇವರೊಂದಿಗೆ ಸ್ವಲ್ಪ ಕಾಲ ಇದ್ದು, ಜು. 24ರಂದು ಇಂಗ್ಲೆಂಡಿಗೆ ತೆರಳುವರು ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಂ ಖಾನ್ ಹೇಳಿದ್ದಾರೆ.
Related Articles
Advertisement