Advertisement

ಜು. 15ರೊಳಗೆ ದುರಸ್ತಿ ಭರವಸೆ; ವರ್ಷದೊಳಗೆ ಕಾಮಗಾರಿ ಪೂರ್ಣ

12:11 AM Jun 26, 2020 | Sriram |

ಮಹಾನಗರ: ಗುಜ್ಜರಕೆರೆ ಸಮೀಪದ ಅರೆಕೆರೆಬೈಲು ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ತಲೆದೋರಿರುವ ಒಳಚರಂಡಿ ನೀರು ಉಕ್ಕಿ ಹರಿಯುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ದಿನ ಸನಿಹವಾಗುತ್ತಿದೆ.

Advertisement

ಜು. 15ರೊಳಗೆ ಸಮಸ್ಯೆ ನಿವಾರಿಸುವ ಭರವಸೆ ಯನ್ನು ಜನಪ್ರತಿನಿಧಿಗಳು ನೀಡಿ ದ್ದಾರೆ. ಒಟ್ಟು 4.5 ಲಕ್ಷ ರೂ.ಗಳ ಯೋಜನೆ ಇದಾಗಿದ್ದು, ಮುಂದಿನ ಒಂದು ವರ್ಷ ದೊ ಳಗೆ ಹಂತ ಹಂತವಾಗಿ ಸಮಸ್ಯೆ ನಿವಾರಣೆಯಾಗಲಿದೆ.

ಪ್ರತಿವರ್ಷ ಧಾರಾಕಾರ ಮಳೆಗೆ ಅರೆಕೆರೆಬೈಲು ಪ್ರದೇಶದಲ್ಲಿ ಒಳಚರಂಡಿಯಿಂದ ಉಕ್ಕಿ ಹರಿದ ನೀರು ರಸ್ತೆಯಲ್ಲಿ ತುಂಬಿ ಕೊಳ್ಳುವುದಲ್ಲದೆ, ಸನಿಹದ ಮನೆಗಳಿಗೂ ನುಗ್ಗುತ್ತಿದೆ. ರಸ್ತೆಯಲ್ಲಿ ಚರಂಡಿ ನೀರು ಹರಿದು, ನಡೆದಾಡಲೂ ಇಲ್ಲಿನ ನಿವಾಸಿಗಳು ಕಷ್ಟ ಅನುಭವಿ ಸುತ್ತಿದ್ದಾರೆ. ಈ ಬಗ್ಗೆ “ಉದಯವಾಣಿ’ ಈ ಹಿಂದೆಯೂ ವರದಿ ಪ್ರಕಟಿಸಿ ಸಂಬಂಧಪಟ್ಟ ಜನಪ್ರತಿ ನಿಧಿ ಗಳ ಗಮನ ಸೆಳೆದಿದೆ.

ಇದೀಗ ಮತ್ತೆ ಸಮಸ್ಯೆ ಮರು ಕಳಿಸುತ್ತಿರುವ ಹಿನ್ನೆಲೆ ಯಲ್ಲಿ ಆ ಭಾಗದ ಕಾರ್ಪೊರೇಟರ್‌ ರೇವತಿ ಅವರನ್ನು “ಉದಯ ವಾಣಿ’ ಸಂಪರ್ಕಿಸಿದ್ದು, ಜು. 15ರ ವೇಳೆಗೆ ಚರಂಡಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ.

ಹಲವು ವರ್ಷಗಳಿಂದ ಅರೆಕೆರೆ ಬೈಲು ಪರಿಸರದ ಜನರಿಗೆ ಒಳಚರಂಡಿಯದ್ದೇ ಸಮಸ್ಯೆಯಾಗಿದೆ. ಮನೆಗಳಿಗೆ ನೀರು ನುಗ್ಗುವ ಪರಿಣಾಮ ಮಳೆಗಾಲದಲ್ಲಿ ವಾಸಿ ಸಲೂ ಕಷ್ಟವಾಗುತ್ತಿದೆ. ಜನಪ್ರತಿ ನಿಧಿ ಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದಾಗಿ ಸ್ಥಳೀಯರಾದ ಪಿ. ನೇಮು ಕೊಟ್ಟಾರಿ ದೂರಿದ್ದಾರೆ.

Advertisement

ಹಲವಾರು ವರ್ಷದ ಸಮಸ್ಯೆ
ಇಲ್ಲಿ ಚರಂಡಿ ಅವ್ಯವಸ್ಥೆ ಹಲವಾರು ವರ್ಷದ ಸಮಸ್ಯೆಯಾಗಿದೆ. ವೆಟ್‌ವೆಲ್‌ನಲ್ಲಿ ನೀರು ಓವರ್‌ ಫ್ಲೋ ಆಗುತ್ತಿರುವುದರಿಂದ ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗು ತ್ತಿದೆ. ಹೀಗಾಗಿ, ವೆಟ್‌ ವೆಲ್‌ನಲ್ಲಿ ಹಳೆಯದಾದ ಪೈಪ್‌ ಕನೆಕ್ಷನ್‌ಗಳನ್ನು ತೆಗೆದು ಪರ್ಯಾಯ ಜೋಡಣೆ ಆಗಬೇಕಿದೆ. ಈಗಾಗಲೇ ಇಲ್ಲಿ ಕಾಮ ಗಾರಿ ನಡೆಯುತ್ತಿದ್ದು, ಜು.15ರ ವೇಳೆಗೆ ಒಳಚರಂಡಿಯಿಂದ ನೀರು ರಸ್ತೆ ಮೇಲೆ ಹರಿಯದಂತೆ ವ್ಯವಸ್ಥೆ ಮಾಡಿ ಕೊಡಲಾ ಗುವುದು. 4.5 ಲಕ್ಷ ರೂ. ವೆಚ್ಚದ ಕಾಮ ಗಾರಿಯಾಗಿರುವುದರಿಂದ ಹಂತ ಹಂತವಾಗಿ ಮುಂದಿನ ಒಂದು ವರ್ಷದೊಳಗೆ ಎಲ್ಲ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಶೀಘ್ರ ಸಮಸ್ಯೆ ನಿವಾರಣೆ
ಅರೆಕೆರೆಬೈಲ್‌ನಲ್ಲಿ ಒಳಚರಂಡಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇಲ್ಲಿ ಸಮಸ್ಯೆ ನಿವಾರಣೆಗೆ ಕೆಲವು ಪೈಪ್‌ಲೈನ್‌ಗಳನ್ನು ಬದಲಾಯಿಸಬೇಕಿದೆ. ಕೋವಿಡ್ 19 ಭೀತಿಯಿಂದ ಲಾಕ್‌ಡೌನ್‌ ಆದ ಪರಿಣಾಮ ಇಲ್ಲಿ ಉಂಟಾಗಿರುವ ಸಮಸ್ಯೆ ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಶೀಘ್ರ ಈ ಸಮಸ್ಯೆಯನ್ನು ನಿವಾರಿಸಿಕೊಡಲಾಗುವುದು.
– ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next