Advertisement

Law: ನ್ಯಾಯಾಂಗದ ಮೂಲಕ ವಿಚ್ಛೇದನ, ಸಹ ಜೀವನ ನೋಂದಣಿ ಕಡ್ಡಾಯ?

01:03 AM Jan 28, 2024 | Team Udayavani |

ಹೊಸದಿಲ್ಲಿ: ನ್ಯಾಯಾಂಗ ಪ್ರಕ್ರಿಯೆ ಮೂಲಕವೇ ವಿಚ್ಛೇದನಕ್ಕೆ ಅವಕಾಶ, ಪೂರ್ವ ಷರತ್ತಿನೊಂದಿಗೆ ಮರುವಿವಾಹಕ್ಕೆ ನಿರ್ಬಂಧ, ಸಹ ಜೀವನ (ಲಿವ್‌ ಇನ್‌ ರಿಲೇಶನ್‌ಶಿಪ್‌) ನೋಂದಣಿ ಕಡ್ಡಾಯ…

Advertisement

ಉತ್ತರಾಖಂಡ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯಲ್ಲಿ ಇರುವ ಅಂಶಗಳಿವು. ಇದರ ಜತೆಗೆ, ಎಲ್ಲ ಧರ್ಮಗಳಲ್ಲೂ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕಲ್ಪಿಸುವ ಅಂಶವೂ ಇದರಲ್ಲಿದೆ ಎಂದು ಮೂಲಗಳು ತಿಳಿಸಿವೆ. ಫೆ.5ರಂದು ಉತ್ತರಾಖಂಡ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಈ ವೇಳೆ, ಮಸೂದೆ ಮಂಡಿಸಿ ಅಂಗೀಕರಿಸಲಾಗುತ್ತದೆ.

ಹೆಣ್ಣುಮಕ್ಕಳ ವಿವಾಹದ ವಯೋಮಾನವನ್ನು ಈಗಿರುವ 18ರಿಂದ 21ಕ್ಕೇರಿಸುವ ಪ್ರಸ್ತಾವವನ್ನು ಸಂಹಿತೆಯಲ್ಲಿ ಸೇರಿಸಲಾಗಿಲ್ಲ. “ಎರಡು ಮಕ್ಕಳ ನೀತಿ’ ಕುರಿತ ವಿಚಾರವೂ ಯುಸಿಸಿಯಲ್ಲಿ ಇಲ್ಲ. ಮದುವೆಯಿಂದ ಹಿಡಿದು ಸಹ ಜೀವನದವರೆಗೆ ಮಹಿಳೆಯರಿಗೆ ಎಲ್ಲ ಹಂತಗಳಲ್ಲೂ ಸಮಾನ ಹಕ್ಕುಗಳು ದೊರೆಯಬೇಕು ಮತ್ತು ದೌರ್ಜನ್ಯ, ಬ್ಲ್ಯಾಕ್‌ವೆುಲ್‌. ಅಪರಾಧ, ಅನ್ಯಾಯದಿಂದ ಆಕೆಯನ್ನು ರಕ್ಷಿಸಬೇಕು ಎಂಬ ಉದ್ದೇಶವನ್ನು ಯುಸಿಸಿ ಹೊಂದಿದೆ. ಇದೇ ಕಾರಣಕ್ಕೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ವಿಚ್ಛೇದನ ಮತ್ತು ಲಿವ್‌ ಇನ್‌ ಸಂಬಂಧದ ನೋಂದಣಿಯನ್ನು ಕಡ್ಡಾಯ­ಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾನೂನು ಮೂಲಕವೇ ವಿಚ್ಛೇದನ ಕಡ್ಡಾಯ­ವಾಗುವ ಕಾರಣ, ಯುಸಿಸಿ ಜಾರಿಗೆ ಬಂದ ಬಳಿಕ ಇಸ್ಲಾಂ ಧರ್ಮದಲ್ಲಿರುವ ಇದ್ದತ್‌(ಪತ್ನಿಯು ತನ್ನ ಪತಿಯ ಮರಣಾನಂತರ ಅಥವಾ ವಿಚ್ಛೇದನದ ಅನಂತರ ಮರುಮದುವೆಯಾಗು­ವವರೆಗೆ ಕಾಯ­ಬೇಕಾದ ನಿರ್ದಿಷ್ಟ ಅವಧಿ) ಮತ್ತು ಖುಲಾ(ಪತ್ನಿಯೇ ಪತಿಗೆ ವಿಚ್ಛೇದನ ನೀಡುವ ಕ್ರಮ) ಪದ್ಧತಿ ನಿಷೇಧಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next