Advertisement

ಜು. 28: “ಅಂತು’ಕೊಂಕಣಿ ಚಿತ್ರದ ಧ್ವನಿ ಸುರುಳಿ ಮುದ್ರಿಕೆ ಬಿಡುಗಡೆ

05:50 AM Jul 23, 2017 | Team Udayavani |

ಪುತ್ತೂರು: ಕರೋಪಾಡಿ ಅಕ್ಷಯ ನಾಯಕ್‌ ನಿರ್ದೇಶನದ ನಿರೀಕ್ಷೆ ಹುಟ್ಟಿಸಿರುವ ಕೊಂಕಣಿ ಭಾಷೆಯ “ಅಂತು’ ಚಿತ್ರದ ಧ್ವನಿ ಸುರುಳಿ ಮುದ್ರಿಕೆ ಬಿಡುಗಡೆ ಜು. 28ರಂದು ಸಂಜೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಕರೋಪಾಡಿ ಅಕ್ಷಯ ನಾಯಕ್‌, ಚಿತ್ರವು ಎಲ್ಲ  ವರ್ಗದ ಜನರಿಗೂ ಅರ್ಥವಾಗುವ ಕೌಟುಂಬಿಕ ಸನ್ನಿವೇಶದ ಕಥೆಯನ್ನು ಹೊಂದಿದೆ. ಅಂತು ಚಿತ್ರ ನಮ್ಮ ಜೀವನದ ಒಂದು ಕಥೆ. ನೆಂಟಸ್ಥಿಕೆಯ ವಿಚಾರ, ವಿಕಲಾಂಗ ಮಗುವನ್ನು ಸಮಾಜ ಪರಿಗಣಿಸುವ ರೀತಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಕಲಾರಾಧಕರಾದ ಕೊಂಕಣಿ ಭಾಷಿಕ ಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಧ್ವನಿ ಸುರುಳಿ ಹಕ್ಕನ್ನು ತನ್ನದಾಗಿಸಿಕೊಂಡು ಮೊದಲ ಬಾರಿಗೆ ಕೋಸ್ಟಲ್‌ವುಡ್‌ನ‌ ಪ್ರಾದೇಶಿಕ ಭಾಷೆಯ ಚಿತ್ರಕ್ಕೆ ತನ್ನ ಲಹರಿ ಸಂಸ್ಥೆಯ ಮೂಲಕ ಪ್ರೋತ್ಸಾಹದ ಹಸ್ತ ಚಾಚಿರುವ ಸಂಸ್ಥೆಯ ಮಾಲಕ ವೇಲು ಅವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಸಭಾ ಕಾರ್ಯಕ್ರಮ
ಮಂಗಳೂರು ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ್‌ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಉದ್ಯಮಿ ಜಗನ್ನಾಥ ಶೆಣೈ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್‌.ಪಿ. ನಾಯ್ಕ, ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಡಾ| ಬಿ. ದೇವದಾಸ್‌ ಪೈ, ಉದ್ಯಮಿ ಡಿ. ವೇದವ್ಯಾಸ ಕಾಮತ್‌, ಜಯಾ ಪಿ. ಕಾಮತ್‌, ಲಹರಿ ಆಡಿಯೋ ಸಂಸ್ಥೆಯ ನಿರ್ದೇಶಕ ವೇಲು ಪಾಲ್ಗೊಳ್ಳಲಿದ್ದಾರೆ.

ಸಾಹಿತಿಗಳಾದ ಶ್ರೀನಿವಾಸ್‌ ಶೆಣೈ, ಓಂ ಗಣೇಶ್‌ ಕಾಮತ್‌, ಸಂಗೀತ ನಿರ್ದೇಶಕ ಬಿ. ಆತ್ಮಾರಾಮ್‌ ನಾಯಕ್‌ ಪುತ್ತೂರು, ಸಂಗೀತ ನಿರ್ದೇಶಕ ಹರೀಶ್‌ ಪಾಂಡವ್‌ ಮೈಸೂರು ಅವರಿಗೆ ಸಮ್ಮಾನ ನಡೆಯಲಿದೆ. ಅನಂತರ ಕೊಂಕಣಿ ಹಾಸ್ಯಸಂಜೆ “ಯೇಯಾ ಹಾಸಯಾ’ ಜರಗಲಿದೆ ಎಂದು ಹೇಳಿದರು.

Advertisement

ಚಿತ್ರಕ್ಕೆ ಸಂಗೀತ ಸಾಹಿತ್ಯವನ್ನು ಓಂ ಗಣೇಶ್‌ ಕಾಮತ್‌ ಉಪ್ಪುಂದ ಹಾಗೂ ಶ್ರೀನಿವಾಸ ಶೆಣೈ ಪುತ್ತೂರು ಬರೆದಿದ್ದು, ಬಿ. ಆತ್ಮಾರಾಮ್‌ ನಾಯಕ್‌ ಹಾಗೂ ಹರೀಶ್‌ ಪಾಂಡವ್‌ ಸಂಗೀತ, ಚಾಲಚಂದ್ರ ಪ್ರಭು, ಅಶ್ವಿ‌ನ್‌ ಪ್ರಭು ಮೈಸೂರು, ವರ್ಷ ಭಟ್‌ ಮೈಸೂರು, ಸ್ನೇಹ ದಾನಿವಾಸ್‌ ಮೈಸೂರು ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಎಲ್ಲ  ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ಚಿತ್ರದ ಪ್ರಮುಖ ಕಲಾವಿದ ಚಿದಾನಂದ ಕಾಮತ್‌ ಕಾಸರಗೋಡು ಹೇಳಿದರು.
ಗೋಷ್ಠಿಯಲ್ಲಿ ಚಿತ್ರದ ಕಲಾವಿದರಾದ ಮಂಗೇಶ್‌ ಭಟ್‌ ವಿಟ್ಲ, ಚಿತ್ರ ಪೈ, ಗೀತಾ ನಾಯಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next