Advertisement
ಅವರು ಮಂಗಳವಾರ ಬ್ರಹ್ಮಾವರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಬ್ರಹ್ಮಾವರ ಶಾಸಕನಾಗಿದ್ದಾಗ, ಮೀನುಗಾರಿಕೆ ಮಂತ್ರಿಯಾಗಿದ್ದಾಗ, ಎರಡು ವರ್ಷ ಸಂಸದನಾಗಿದ್ದಾಗ ನನ್ನ ಕ್ರಿಯಾಶೀಲತೆ ಅಭಿವೃದ್ಧಿ ವೇಗವನ್ನು ಜನರು ನೋಡಿದ್ದಾರೆ. ಈ ಬಾರಿ ಮತ್ತೊಮ್ಮೆ ಅವಕಾಶ ನೀಡಿದರೆ ಅದೇ ಕ್ರಿಯಾಶೀಲತೆಯೊಂದಿಗೆ ನಿಮ್ಮ ಸೇವೆ ಮಾಡುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು. ಹೆಗ್ಡೆ ಗೆದ್ದರೆ ನಾವೆಲ್ಲ ಗೆದ್ದಂತೆ
ಜಯಪ್ರಕಾಶ್ ಹೆಗ್ಡೆಯವರು ಗೆದ್ದರೆ ನಮ್ಮ ಜೆಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎನ್ನುವ ನೋವು ದೂರವಾಗಲಿದೆ. ಉಡುಪಿ ಜಿಲ್ಲೆಗೊಂದು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ. ಕೈಗಾರಿಕಾ ವಲಯ, ಕಂಪನಿಗಳು ಸ್ಥಾಪನೆಯಾಗಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಮೂಲಕ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆ ಹರಿದುಬರಲಿದೆ. ಆದ್ದರಿಂದ ಹೆಗ್ಡೆ ಗೆಲುವು ಕ್ಷೇತ್ರದ
ಜನರಿಗೆ, ನಮ್ಮ ನಿಮ್ಮಲ್ಲರಿಗೆ ಅಗತ್ಯವಿದೆ ಮತ್ತು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು ಹಾಗೂ ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಪರಶುರಾಮ ದೇವರಿಗೆ ಅನ್ಯಾಯ ಮಾಡಿದ ಬಿಜೆಪಿಗರಿಗೆ ಹಿಂದುತ್ವದ ಹೆಸರಲ್ಲಿ ಮತ ಕೇಳುವ ಅಧಿಕಾರವಿಲ್ಲ ಎಂದರು.
Related Articles
Advertisement
ಕಲ್ಯಾಣಪುರದ ಕಾಮಗಾರಿ ತಾತ್ಕಾಲಿಕಚುನಾವಣೆ ಸಂದರ್ಭ ಜನರ ಆಕ್ರೋಶ ಎದುರಿಸಲಾಗದೆ ಅರೆಬರೆ ಕಾಮಗಾರಿ ಮುಗಿಸಿ ಕಲ್ಯಾಣಪುರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರೆ. ಚುನಾವಣೆ ಮುಗಿಯುತ್ತಿದ್ದಂತೆ ರಸ್ತೆಯ ನಿಜಬಣ್ಣ ಬಯಲಾಗಲಿದೆ ಹಾಗೂ ಈ ಬಾರಿ ಮಳೆಗಾಲದಲ್ಲಿ ಸಂಚಾರಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದರು. ಜಾತಿ ಹೆಸರಲ್ಲಿ ಮತಕೇಳುವ ನೈತಿಕತೆ ಇಲ್ಲ
ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿಯವರನ್ನು ಸೋಲಿಸುವಾಗ ಕೋಟ ಶ್ರೀನಿವಾಸ ಪೂಜಾರಿಗೆ ಜಾತಿ ನೆನಪಾಗಲಿಲ್ಲ. ನಾರಾಯಣ ಗುರುಗಳಿಗೆ ಅವಮಾನವಾದಾಗ ಇವರಿಗೆ ಜಾತಿನೆನಪಾಗಲಿಲ್ಲ. ಅಧಿಕಾರವಿದ್ದಾಗ ಜಾತಿಗಾಗಿ ಎನಾದರು ಮಾಡಬೇಕು ಎಂದು ನೆನಪಾಗಲಿಲ್ಲ. ಈಗ ಚುನಾವಣೆಯಲ್ಲಿ ಮತ ಸಿಗಬೇಕು ಎನ್ನುವ ಕಾರಣಕ್ಕೆ ಬಿಲ್ಲವರ ಹೆಸರಲ್ಲಿ ಮತ ಕೇಳುತ್ತಿರುವುದು, ಬಿಲ್ಲವರೆಲ್ಲ ಒಗ್ಗಟ್ಟಾಗಬೇಕು ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹೆಗ್ಡೆಯವರು ಪಕ್ಷೇತರ ಶಾಸಕನಾಗಿದ್ದ ಸಂದರ್ಭ ನನ್ನ ಜಾತಿ ನೋಡದೆ ಸಂಸದನಾಗುವಾಗುವಲ್ಲಿ, ಶಾಸಕನಾಗುವಾಗಲ್ಲಿ ಸಹಕಾರ ನೀಡಿದ್ದಾರೆ. ಆದ್ದರಿಂದ ಬಿಲ್ಲವರು ಜಾತಿ ನೋಡದೆ ಹೆಗ್ಡೆಯವರನ್ನು ಬೆಂಬಲಿಸಬೇಕು ಎಂದು ಸೊರಕೆ ತಿಳಿಸಿದರು. ಹೆಗ್ಡೆಗೆ ಸಂಸದರಾಗುವ ಎಲ್ಲ ಅರ್ಹತೆ ಇದೆ
ಸಂಸದರಾಗಬೇಕಾದರೆ ಅಭಿವೃದ್ಧಿ, ಜನಪರ ಕಾಳಜಿ, ಆಡಳಿತ ಜ್ಞಾನ, ಅಧಿಕಾರಿಗಳು, ಸಚಿವರೊಂದಿಗೆ ಸಂಪರ್ಕ ಹೀಗೆ ಒಂದಷ್ಟು ಅರ್ಹತೆಗಳು ಅಗತ್ಯವಿರುತ್ತದೆ. ಆ ಎಲ್ಲ ಅಹರ್ತೆಗಳು ಜಯಪ್ರಕಾಶ್ ಹೆಗ್ಡೆಯವರಿಗಿದ್ದು ಎದುರಾಳಿಗೆ ಇದರಲ್ಲಿ ಬಹುತೇಕ ಅರ್ಹತೆ ಇಲ್ಲ ಎ.ಐ.ಸಿ.ಸಿ. ಸದಸ್ಯ ಚಿಕ್ಕಮಗಳುರಿನ ಸಂದೀಪ್ ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಎಂ.ಎ. ಗಪೂರ್, ಸುಧೀರ್ ಕುಮಾರ್ ಮುರೊಳ್ಳಿ, ಕಿಶನ್ ಹೆಗ್ಡೆ, ದಿನಕರ ಹೇರೂರು, ಶಂಕರ್ ಕುಂದರ್, ಭುಜಂಗ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ,ಮೈರ್ಮಾದಿ ಸುಧಾಕರ ಶೆಟ್ಟಿ, ಪ್ರಿಯದರ್ಶನ ಶೆಟ್ಟಿ ಇದ್ದರು. ವಿನಯ ಕುಮಾರ್ ಕಬ್ಯಾಡಿ ಕಾರ್ಯಕ್ರಮ ನಿರೂಪಿಸಿದರು.