ಕಳೆದ ಜುಲೈಯಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಡ್ಯುಮಿನಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ದ್ವಿತೀಯ ಟೆಸ್ಟ್ ಬಳಿಕ ಅವರನ್ನು ತವರಿಗೆ ವಾಪಸ್ ಕಳುಹಿಸಲಾಗಿತ್ತು. ಇನ್ನು ಮುಂದೆ ಸೀಮಿತ ಓವರ್‌ಗಳ ಪಂದ್ಯಗಳನ್ನಷ್ಟೇ ಆಡುವುದಾಗಿ ಡ್ಯುಮಿನಿ ಹೇಳಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ದೇಶಿ ಪ್ರಥಮ ದರ್ಜೆ ಕ್ರಿಕೆಟಿನ ಮೊದಲ ಸುತ್ತಿನಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ.
Advertisement
“ಸುದೀರ್ಘ ಹಾಗೂ ಎಚ್ಚರಿಕೆಯ ಪರಿಶೀಲನೆ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ. ದೇಶದ ಪರ 46 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಸುಯೋಗ. ಈ ಕ್ರಿಕೆಟ್ ಯಾತ್ರೆಯನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ನನ್ನ ಪಾಲಿಗೆ ಇದೊಂದು ಸಾಟಿಯಿಲ್ಲದ ಅನುಭವ…’ ಎಂಬುದಾಗಿ ಡ್ಯುಮಿನಿ ನಿವೃತ್ತಿ ಸಂದರ್ಭದಲ್ಲಿ ಹೇಳಿದರು.