Advertisement

ಅಮೆರಿಕ ಚುನಾವಣೆ ಬಳಿಕವೂ ಕಾವು ಜೋರು

12:07 PM Nov 03, 2015 | mahesh |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಫ‌ಲಿತಾಂಶ ಬಂದ ಬಳಿಕವೂ ಡೆಮಾಕ್ರಾಟ್‌ ಮತ್ತು ರಿಪಬ್ಲಿಕನ್‌ ಪಕ್ಷದ ನಾಯಕರ ನಡುವಿನ ಸಮರ ಮುಂದುವರಿಯುವ ಲಕ್ಷಣ ಗೋಚರಿಸಿದೆ. ನಾಯಕರ ಹೇಳಿಕೆಗಳು ಚುನಾವಣೋತ್ತರ ಬಿಕ್ಕಟ್ಟು ಸ್ಫೋಟಗೊಳ್ಳುವ ಸುಳಿವು ನೀಡಿವೆ.

Advertisement

ಮತದಾನದ ಪ್ರಕ್ರಿಯೆ ಹಾಗೂ ಮತಪತ್ರಗಳ ಎಣಿಕೆಗೆ ಸಂಬಂಧಿಸಿದಂತೆ ಅಪಸ್ವರಗಳು ಎದ್ದಿದ್ದು, ಹಾಲಿ ಅಧ್ಯಕ್ಷ ಟ್ರಂಪ್‌ ಅವರಂತೂ ಈಗಾಗಲೇ ಈ ವಿಚಾರ ಕುರಿತು ಬಹಿರಂಗವಾಗಿಯೇ ಹೇಳಿಕೆ ನೀಡಿ ದ್ದಾರೆ. ಪ್ರತಿಕೂಲ ಫ‌ಲಿತಾಂಶ ಬಂದರೆ ಸುಮ್ಮನಿರಲ್ಲ, ನಾನು ಅಷ್ಟು ಸುಲಭದಲ್ಲಿ ಅಧಿಕಾರ ಹಸ್ತಾಂತರವನ್ನೂ ಮಾಡುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.

ಇದರ ನಡುವೆಯೇ, ನ್ಯೂಜೆರ್ಸಿಯ ಅಂಚೆ ಸಿಬಂದಿಯೊಬ್ಬರು 99 ಮತಪತ್ರಗಳು ಸೇರಿದಂತೆ 1800ರಷ್ಟು ಮೇಲ್‌ಗ‌ಳನ್ನು ಒಂದೆಡೆ ಬಿಸಾಕಿ ಹೋಗಿರುವ ಸುದ್ದಿಯೊಂದು ಪ್ರಕಟವಾಗಿದೆ. ಈ ಸುದ್ದಿಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಟ್ರಂಪ್‌, ‘ತಿರುಚುವಿಕೆ’ ಎಂದು ಒಂದು ಪದದಲ್ಲಿ ಟ್ವೀಟ್‌ ಮಾಡಿದ್ದಾರೆ. ಇನ್ನೊಂದೆಡೆ, ರಿಪಬ್ಲಿಕನ್ನರು ‘ಅಧಿಕೃತ’ ಎಂದು ಬರೆದಿರುವ ಅನಧಿಕೃತ ಮತ ಪೆಟ್ಟಿಗೆಗಳನ್ನು ಅಳವಡಿಸಿ ಹೋಗಿರುವ ವರದಿಗಳೂ ಬಂದಿವೆ.

ಪ್ರಚಾರಕ್ಕೆ ಇಳಿದ ಟ್ರಂಪ್‌
ಸೋಂಕಿನಿಂದ ಗುಣಮುಖರಾದ ಬಳಿಕ ಟ್ರಂಪ್‌ ಫ್ಲೋರಿಡಾದಲ್ಲಿ ಮಂಗಳವಾರ ಚುನಾವಣ ಪ್ರಚಾರ ಪುನರಾರಂಭಿಸಿದ್ದಾರೆ. ಈ ನಡುವೆ, ಸಿಲಿಕಾನ್‌ ವ್ಯಾಲಿ ಮೂಲದ ಭಾರತೀಯ-ಅಮೆರಿಕನ್‌ ದಂಪತಿ ಡೆಮಾ ಕ್ರಾಟ್‌ ಅಭ್ಯರ್ಥಿ ಬೈಡೆನ್‌ ಪರ ಹಿಂದಿ ಭಾಷೆ ಯಲ್ಲಿ ಡಿಜಿಟಲ್‌ ಗ್ರಾಫಿಕ್‌ ಪ್ರಚಾರ ಆರಂಭಿಸಿದ್ದಾರೆ. ‘ಟ್ರಂಪ್‌ ಹಟಾವೋ, ಅಮೆರಿಕ ಬಚಾವೋ’, ‘ಬೈಡೆನ್‌ ಹ್ಯಾರಿಸ್‌ ಕೋ ಜಿತಾವೋ, ಅಮೆರಿಕ ಕೋ ಆಗೇ ಬಡಾವೋ’ ಎಂಬ ಹೆಸರಿನಲ್ಲಿ, 14 ಭಾರ ತೀಯ ಭಾಷೆಗಳಲ್ಲಿ ಅಭಿಯಾನ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next