Advertisement

ಜೋಕಟ್ಟೆ: ರಸ್ತೆ ಬದಿಯೇ ಕಸದ ರಾಶಿ

10:07 AM Jan 04, 2018 | Team Udayavani |

ಜೋಕಟ್ಟೆ: 62ನೇ ತೋಕೂರು ಗ್ರಾಮ ಪಂಚಾಯತ್‌, ಜೋಕಟ್ಟೆಗೆ ತ್ಯಾಜ್ಯ ವಿಲೇವಾರಿಯೇ ಬಹುದೊಡ್ಡ ಸಮಸ್ಯೆಯಾಗಿದೆ. ಸರಿಯಾದ ನಿರ್ವಹಣೆಯಿಲ್ಲದೆ ಬೈಕಂಪಾಡಿ ಕೈಗಾರಿಕ ಪ್ರದೇಶವಾಗಿ ಜೋಕಟ್ಟೆಗೆ ಸಾಗುವ ಹಾದಿಯುದ್ದಕ್ಕೂ ಅರೆಬರೆ ಸುಟ್ಟ, ಪ್ಲಾಸ್ಟಿಕ್‌ಗಳಲ್ಲಿ ಬಿಸಾಡಿದ ತ್ಯಾಜ್ಯ ರಾಶಿಗಳೇ ತುಂಬಿವೆ.

Advertisement

ಇಲ್ಲಿನ ಗ್ರಾಮ ಪಂಚಾಯತ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶವೂ ಇಲ್ಲ. ಇದರಿಂದಾಗಿ ಸುತ್ತಮುತ್ತ ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನಾಗರಿಕರೂ ವಾಹನದಲ್ಲಿ ಹೋಗುವ ಸಂದರ್ಭ ಜೋಕಟ್ಟೆ ರಸ್ತೆ ಬದಿ ಸುರಿಯುತ್ತಿದ್ದಾರೆ. ಬಳಿಕ ಅದಕ್ಕೆ ಬೆಂಕಿ ಹಚ್ಚಿ ಸುಡಲಾಗುತ್ತದೆ. ಪ್ಲಾಸ್ಟಿಕ್‌ ಗಳಲ್ಲಿ ಹಸಿ, ಪ್ಲಾಸ್ಟಿಕ್‌, ಮಾಂಸದ
ತ್ಯಾಜ್ಯಗಳನ್ನು ಕಟ್ಟಿ ಬಿಸಾಡುವುದರಿಂದ ಅವುಗಳು ಸರಿಯಾಗಿ ಸುಡದೆ ಅರೆಬರೆಯಾಗಿ ರಸ್ತೆ ಬದಿಯೇ ಕಾಣ
ಸಿಗುತ್ತಿದ್ದು, ರಸ್ತೆ ಬದಿಗಳನ್ನು ಮತ್ತಷ್ಟು ವಿರೂಪಗೊಳಿಸಿವೆ.

ತೋಡಿಗೆ ಕೋಳಿ ತ್ಯಾಜ್ಯ !
ಜೋಕಟ್ಟೆಗೆ ಸಾಗುವ ದಾರಿಯಲ್ಲೇ ಮಳೆ ನೀರು ಹರಿಯುವ ತೋಡು ಇದ್ದು, ವಿವಿಧೆಡೆಯಿಂದ ತ್ಯಾಜ್ಯ ಸಹಿತ ನೀರು
ಹರಿಯುತ್ತದೆ. ಇದಕ್ಕೆ ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಮೇಲ್ಸೇತುವೆಯಿಂದಲೇ ಸುರಿಯುತ್ತಿದ್ದು, ಇದು ಕೈಗಾರಿಕ ಪ್ರಾಂಗಣದ ಸಮೀಪವೇ ಇರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. 

ಪೌರ ಕಾರ್ಮಿಕರ ಕೊರತೆ
ಜೋಕಟ್ಟೆಯಲ್ಲಿ ಪೌರ ಕಾರ್ಮಿಕರ ಕೊರತೆಯಿದೆ. ತ್ಯಾಜ್ಯ ಸಾಗಾಟಕ್ಕೆ ಸೂಕ್ತ ವಾಹನ ಸೌಲಭ್ಯವಿಲ್ಲ. ಬೃಹತ್‌ ಕಂಪನಿಗಳ ಆದಾಯವೂ ಇಲ್ಲಿನ ಗ್ರಾಮಗಳಿಗೆ ಹೆಚ್ಚಾಗಿ ಬರುತ್ತಿಲ್ಲ. ಮೂಲ ಸೌಕರ್ಯಕ್ಕೂ ಸಾಮಾಜಿಕ ಜವಾಬ್ದಾರಿ ಯಡಿ ಒತ್ತು ನೀಡುತ್ತಿಲ್ಲ. ಹೀಗಾಗಿ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಅಸಹಾಯಕವಾಗಿದೆ. ಸರಿಯಾಗಿ ಕಸ ಸಂಗ್ರಹಕ್ಕೆ ಮುಂದಾದದರೆ ನಾಗರಿಕರೂ ರಸ್ತೆ ಬದಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬಹುದಾಗಿದೆ. ಜಿ.ಪಂ.ನಿಂದ 20 ಲ.ರೂ. ತ್ಯಾಜ್ಯ ವಿಲೇವಾರಿಗೆ ಲಭಿಸುತ್ತದೆ. ಆದರೆ ಸ್ಥಳಾವಕಾಶದ ಕೊರತೆಯಿದೆ.
ಹಸನಬ್ಬ,
 ಪಿಡಿಒ, ಜೋಕಟ್ಟೆ

ಹಣಕಾಸು ಸಮಸ್ಯೆ
ಎಂಆರ್‌ಪಿಎಲ್‌ ತ್ಯಾಜ್ಯ ವಿಲೇವಾರಿ ಯೋಜನೆಗೆ ಹಣಕಾಸು ಒದಗಿಸುವುದಾಗಿ ಭರವಸೆ ನೀಡಿ ಈಗ ಹಿಂದೇಟು ಹಾಕುತ್ತಿದೆ. ಪೆಟ್ರೋನೆಟ್‌ ಕಂಪೆನಿ ವಾಹನ ನೀಡಲು ಮುಂದೆ ಬಂದಿದ್ದು, ಎಂಆರ್‌ಪಿಎಲ್‌ ಸಂಸ್ಥೆಯು ಕಾರ್ಮಿಕರ ವೇತನ ಹಾಗೂ ನಿರ್ವಹಣೆಗೆ ಆರ್ಥಿಕ ಸಹಾಯ ನೀಡಬೇಕು. ಸಿಎಸ್‌ಆರ್‌ ನಿ ಧಿಯನ್ನು ಗ್ರಾಮದ ತ್ಯಾಜ್ಯ ವ್ಯವಸ್ಥೆ ನಿರ್ವಹಿಸಲು ನೀಡಲಿ.
ಸಂಶುದ್ದೀನ್‌, ಉಪಾಧ್ಯಕ್ಷರು
  62ನೇ ತೋಕೂರು ಗ್ರಾ.ಪಂ. ಜೋಕಟ್ಟೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next