Advertisement

Jobs; ಕಳೆದ 3-4 ವರ್ಷದಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ

12:23 AM Jul 14, 2024 | Team Udayavani |

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ದೇಶದಲ್ಲಾದ ಉದ್ಯೋಗ ಸೃಷ್ಟಿ ಬಗ್ಗೆ ಇತ್ತೀಚೆಗೆ ವರದಿ ಬಿಡುಗಡೆಗೊಳಿಸಿದೆ. ಆ ಪ್ರಕಾರ, ಕಳೆದ 3-4 ವರ್ಷದಲ್ಲಿ ಬರೋಬ್ಬರಿ 8 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ನಿರುದ್ಯೋಗದ ಹೆಸರಿನಲ್ಲಿ ಬರೀ ವದಂತಿಗಳನ್ನೇ ಹಬ್ಬಿಸುತ್ತಿದ್ದವರ ಬಾಯಿಗೆ ಈಗ ಬೀಗ ಬಿದ್ದಿದೆ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ನಿರುದ್ಯೋಗ ವಿಚಾರ ಪ್ರಸ್ತಾವಿಸಿದ್ದ ವಿಪಕ್ಷಗಳಿಗೆ ಮೋದಿ ಈ ರೀತಿ ಚಾಟಿ ಬೀಸಿದ್ದಾರೆ.

Advertisement

ಮುಂಬಯಿಯಲ್ಲಿ ರಸ್ತೆ, ರೈಲ್ವೇ, ನಗರಾಭಿವೃದ್ಧಿ, ಬಂದರು ಕ್ಷೇತ್ರಗಳಿಗೆ ಸಂಬಂಧಿಸಿದ 29,000 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, “ದೇಶಕ್ಕೆ ಕೌಶಲ ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಅಗತ್ಯವಿದೆ. ಇದೇ ಹಾದಿಯಲ್ಲಿ ಸರಕಾರ ಶ್ರಮಿಸುತ್ತಿದೆ. ಆದರೂ ಈ ಬಗ್ಗೆ ಕೆಲವರು ವದಂತಿ ಹಬ್ಬಿಸು ತ್ತಿದ್ದಾರೆ. ಅವರ ಉದ್ದೇಶ ಅಭಿವೃದ್ಧಿಯನ್ನು ವಿರೋಧಿಸುವುದೇ ಆಗಿದೆ. ಅವರ ನೀತಿಗಳೆಲ್ಲವೂ ಯುವಜನತೆಗೆ ದ್ರೋಹ ಬಗೆದು, ಉದ್ಯೋಗ ಸೃಷ್ಟಿಯನ್ನು ನಿಲ್ಲಿಸುವಂಥವಾಗಿವೆ. ಈಗ ಜನರು ಅವರ ಸುಳ್ಳುಗಳನ್ನು ನಿರಾಕರಿಸಿದ ಬಳಿಕ ಅವರ ಬಂಡವಾಳ ಬಯಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next