Advertisement
ಮೂರನೇ ಸುತ್ತಿನಲ್ಲಿ ಖಾಲಿ ಇರುವ ಒಟ್ಟು 5,222 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಒಡಿಶಾ ಅಂಚೆ ವಲಯದಲ್ಲಿ 3,162 ಮತ್ತು ತಮಿಳುನಾಡು ಅಂಚೆ ವಲಯದಲ್ಲಿನ 2,060 ಹುದ್ದೆಗಳು ಸೇರಿವೆ. ನೊಂದಣಿ ಪ್ರಕ್ರಿಯೆ ಎಲ್ಲವೂ ಹಿಂದಿನ ನೇಮಕಾತಿಯಂತೆಯೇ ಇರಲಿದೆ. ಆಸಕ್ತರು ಸೆ. 30ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ.
10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಉತ್ತಮ ಅಂಕ ಹೊಂದಿದ್ದು, 10ನೇ ತರಗತಿ ತನಕ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪೂರೈಸಿರಬೇಕು. ವಯೋಮಾನ/ ಆಯ್ಕೆ
18ರಿಂದ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Related Articles
ಅರ್ಜಿ ಶುಲ್ಕವನ್ನು 100 ರೂ. ಎಂದು ನಿಗದಿಪಡಿಸಲಾಗಿದ್ದು, ಎಸ್ಸಿ. ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Advertisement
ಅರ್ಜಿ ಸಲ್ಲಿಕೆ ಹೇಗೆ?ಸಂಸ್ಥೆಯ ಅಧಿಕೃತ ಜಾಲತಾಣ https://appost.in/gdsonline/Home.aspxದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ : ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ
ಒಟ್ಟು ಹುದ್ದೆಗಳು: 5,222
ತಮಿಳುನಾಡು: 2,060
ಒಡಿಶಾ: 3,162
ಸೆಪ್ಟಂಬರ್ ಕಡೆಯ ದಿನಾಂಕ: 30