Advertisement

ಜೆಜೆಎಂ ಕಾಮಗಾರಿ ಶೀಘ್ರ ಉದ್ಘಾಟನೆಗೆ ಸಿದ್ಧಗೊಳಿಸಲು ಸೂಚನೆ

11:43 AM Mar 01, 2022 | Team Udayavani |

ಬಂಟ್ವಾಳ : ಬಂಟ್ವಾಳ ದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನ ಗೊಳಿ ಸುತ್ತಿರುವ ಜಲಜೀವನ್‌ ಮಿಷನ್‌(ಜೆಜೆಎಂ) ಕುಡಿಯುವ ನೀರಿನ ಯೋಜನೆಯ ಕಾಮ ಗಾರಿಯನ್ನು ಶೀಘ್ರದಲ್ಲಿ ಪೂರ್ಣ ಗೊಳಿಸಿ ಎಪ್ರಿಲ್‌ ಅಂತ್ಯದ ವೇಳೆಗೆ ಉದ್ಘಾ ಟನೆಗೆ ಸಿದ್ಧಗೊಳಿಸಬೇಕು. ಜತೆಗೆ ಉಳಾಯಿ ಬೆಟ್ಟು ಬಹುಗ್ರಾಮ ಯೋಜ ನೆಯ ಕಾಮಗಾರಿಯನ್ನೂ ಶೀಘ್ರ ಆರಂಭಿಸುವಂತೆ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗೆ ಸೂಚಿಸಿದರು.

Advertisement

ಸೋಮವಾರ ಬಿ.ಸಿ.ರೋಡ್‌ನ‌ಲ್ಲಿರುವ ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಜಿ.ಕೆ.ನಾಯ್ಕ ಮಾಹಿತಿ ನೀಡುತ್ತಿದ್ದ ವೇಳೆ, ಜಲಜೀವನ್‌ ಮಿಷನ್‌ ಯೋಜನೆಯ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 2ನೇ ಹಂತದಲ್ಲಿ 10 ಗ್ರಾ.ಪಂ.ಗಳಲ್ಲಿ ಯೋಜನೆ ಅನುಷ್ಠಾನಕ್ಕೆ 21 ಕೋ.ರೂ.ಅನುದಾನ ಮಂಜೂರಾಗಿದೆ ಎಂದರು.

ಸಭೆಗೆ ಅಧಿಕಾರಿಗಳ ಗೈರು: ಶಾಸಕ ಗರಂ
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಸಭೆಗೆ ಗೈರಾಗಿರುವ ಕುರಿತು ಗರಂ ಆದ ಶಾಸಕರು, ಕೆಡಿಪಿ ಸಭೆಗೆ ಅಧಿಕಾರಿಗಳು ಗೈರಾಗುವುದಾದರೆ ಮೊದಲೇ ತಿಳಿಸಬೇಕು, ಇಲಾಖೆಯ ಮುಖ್ಯಸ್ಥ ಗೈರಾಗಿ ಯಾರ್ಯಾರನ್ನೇ ಕಳುಹಿಸುವುದಾದರೆ ನಾನು ಕೂಡ ತನ್ನ ಪಿಎಯನ್ನು ಕಳುಹಿಸಿ ಸಭೆ ಮಾಡಿಸಬಹುದಲ್ಲವೇ. ಸಭೆಗೆ ಗೈರಾಗಿರುವ ಆರ್‌ಟಿಒ, ವಲಯ ಅರಣ್ಯಾಧಿಕಾರಿ, ಅಂಬೇಡ್ಕರ್‌ ವಸತಿ ನಿಗಮದವರಿಗೆ ನೋಟಿಸ್‌ ನೀಡುವಂತೆ ತಾ.ಪಂ.ಇಒ ರಾಜಣ್ಣ ಅವರಿಗೆ ಸೂಚಿಸಿದರು.

ಶಾಸಕರ ಮಾತಿಗೆ ಧ್ವನಿಗೂಡಿಸಿದ ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ, ಇಂತಹ ಸಭೆಗಳಲ್ಲಿ ಅಧಿ ಕಾರಿಗಳು ಇಲಾಖೆಯ ಪ್ರಗತಿಯನ್ನು ನೀಡಿ ದಾಗ ಸಮಸ್ಯೆಗಳನ್ನು ನಮಗೆ ವಿಧಾನ ಮಂಡಲದಲ್ಲಿ ಚರ್ಚೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಲು ಅನುಕೂಲವಾಗುತ್ತದೆ ಎಂದರು.

ಬ್ಲಾಕ್‌ ಮಾಡಿ
ಕೃಷಿ ಇಲಾಖೆಯ ಸೌಲಭ್ಯಗಳು ಒಂದೇ ಕುಟುಂಬದಲ್ಲಿ ಹಲವು ಆರ್‌ಟಿಸಿ ಹೊಂದಿರುವ ಸದಸ್ಯರಿಗೆ ಸಿಗುತ್ತಿದೆ ಎಂದು ನಾಮ ನಿರ್ದೇಶಿತ ಸದಸ್ಯರೊಬ್ಬರು ಆರೋಪಿಸಿದಾಗ, ಅದು ಎಲ್ಲರಿಗೂ ಸಿಗುವಂತೆ ಕ್ರಮವಹಿಸಬೇಕು ಎಂದು ಶಾಸಕರು ಸೂಚಿಸಿದರು. ಕುಟುಂಬದ ಪಡಿತರ ಚೀಟಿ ಅಥವಾ ಇನ್ಯಾವುದೋ ದಾಖಲೆ ಪಡೆದು ಒಮ್ಮೆ ಸೌಲಭ್ಯ ಪಡೆದ ಕುಟುಂಬವನ್ನು ಬ್ಲಾಕ್‌ ಮಾಡುವಂತೆ ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ ಸೂಚಿಸಿದರು.

Advertisement

ಕೆಎಸ್‌ಆರ್‌ಟಿಸಿ ಬಿ.ಸಿ.ರೋಡ್‌ ಘಟಕ ದಲ್ಲಿ ಎಲ್ಲ ಬಸ್‌ಗಳನ್ನು ಆಪರೇಟ್‌ ಮಾಡು ವುದಕ್ಕೆ ಒಟ್ಟು 65 ಮಂದಿ ಚಾಲಕ -ನಿರ್ವಾಹಕರ ಕೊರತೆ ಇದೆ. ಜತೆಗೆ 110 ಬಸ್‌ಗಳಿರಬೇಕಾದಲ್ಲಿ 99 ಬಸ್‌ಗಳು ಮಾತ್ರ ಇದೆ ಎಂದು ಘಟಕ ವ್ಯವಸ್ಥಾಪಕ ಶ್ರೀಶ ಭಟ್‌ ತಿಳಿಸಿದರು.

ಯುಜಿಡಿ ಅನುಷ್ಠಾನ: ಗಮನ ಹರಿಸಿ
ಬಂಟ್ವಾಳ ಪುರಸಭೆ ವ್ಯಾಪ್ತಿಯ ಯುಜಿಡಿ ಅನುಷ್ಠಾನದ ಕುರಿತು ತಮಗೂ ಅನೇಕ ಜವಾಬ್ದಾರಿಗಳಿದ್ದು, ಅದರ ಕುರಿತು ಗಮನಹರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಶಾಸಕರು ಸೂಚಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿ ತಹ ಶೀಲ್ದಾರ್‌ ರಶ್ಮಿ ಮಾಹಿತಿ ನೀಡಿ ಸಾರ್ವ ಜನಿಕ ಉದ್ದೇಶಗಳಿಗೆ ಮೀಸಲಿರಿಸಿದ ಜಾಗದಲ್ಲಿ ಶ್ಮಶಾನಕ್ಕೆ ಎಲ್ಲ ಗ್ರಾಮದಲ್ಲಿ ಜಾಗ ಕಾದಿರಿಸಲಾಗಿದೆ. ಘನ ತ್ಯಾಜ್ಯ ಘಟಕಕ್ಕೆ ಸಂಬಂಧಿಸಿ ಸಜೀಪಮೂಡ, ಸಜೀಪಮುನ್ನೂರಿನಲ್ಲಿ ನಿವೇಶನ ಅಂತಿಮ ಗೊಂಡಿಲ್ಲ. ಗುರುತು ಮಾಡಲಾದ ವಸತಿ ನಿವೇಶನಗಳನ್ನು ರಾಜೀವ ಗಾಂಧಿ ನಿಗಮದ ಮೂಲಕ ಹಂಚಿಕೆ ಮಾಡುತ್ತಿದ್ದಾರೆ ಎಂದರು.

ಅಮೃತ ಯೋಜನೆಗೆ ಆಯ್ಕೆಯಾದ ತಾಲೂಕಿನ 6 ಗ್ರಾ.ಪಂ.ಗಳಲ್ಲಿ ವಸತಿ ನಿವೇಶನಕ್ಕೆ ಜಾಗ ಕೊರತೆಯಾಗುತ್ತಿರುವ ಕುರಿತು ಇಒ ರಾಜಣ್ಣ ಅವರು ಸಭೆಯ ಗಮನಕ್ಕೆ ತಂದರು. ಶಂಭೂರು ಗ್ರಾಮದಲ್ಲಿ 4.85 ಎಕ್ರೆ ಜಾಗ ಶ್ಮಶಾನಕ್ಕೆ ಮೀಸಲಿಡಲಾಗಿದ್ದು, ಅದಕ್ಕೆ ಗಡಿಗುರುತು ಆಗಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಆನಂದ ಶಂಭೂರು ತಿಳಿಸಿದರು.
ವಿಧಾನ ಪರಿಷತ್‌ ಸದಸ್ಯ ಡಾ| ಮಂಜು ನಾಥ್‌ ಭಂಡಾರಿ ಅವರು ಮಾತನಾಡಿ, ತನ್ನ ಎಂಎಲ್‌ಸಿ ಅನುದಾನದಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳ ತುರ್ತು ಅಗತ್ಯಗಳಿಗೆ ಅನುದಾನ ನೀಡುವುದಕ್ಕೆ ನಿರ್ಧರಿಸಿದ್ದು, ಅಂತಹ ಕಾಮಗಾರಿಗಳ ಪಟ್ಟಿ ನೀಡುವಂತೆ ತಿಳಿಸಿದರು.

ಇದನ್ನೂ ಓದಿ : ಶಿವರಾತ್ರಿ ಹಿನ್ನೆಲೆ : ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ದಂಡು

ರಸ್ತೆ ಕಾಮಗಾರಿ ವಿಳಂಬ
ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಸಿದ್ದಕಟ್ಟೆ ಮುಖ್ಯರಸ್ತೆಯ ಕಾಮಗಾರಿ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಅಂತಹ ಗುತ್ತಿಗೆದಾರರಿಗೆ ಯಾಕೆ ಕಾಮಗಾರಿ ನೀಡುತ್ತೀರಿ, ಅವರು ಕಾಮಗಾರಿ ಮುಗಿಸದೇ ಇದ್ದರೆ ನೇರವಾಗಿ ಬ್ಲಾÂಕ್‌ ಲಿಸ್ಟ್‌ ಗೆ ಹಾಕಿ ಎಂದು ಸಹಾಯಕ ಎಂಜಿನಿಯರ್‌ ಅಮೃತ್‌ಕುಮಾರ್‌ಗೆ ಸೂಚಿಸಿದರು.

ಸಿಬಂದಿ ಕೊರತೆಯ ಕುರಿತು ಪಟ್ಟಿ ನೀಡಿ
ತಾಲೂಕಿನ ಪ್ರತೀ ಇಲಾಖೆಯ ಕೆಲಸ ನಿರ್ವಹಣೆಗೆ ಸಿಬಂದಿ ಕೊರತೆಯಾಗುತ್ತಿರುವ ಕುರಿತು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ, ಪ್ರತೀ ಇಲಾಖೆಯಲ್ಲಿ ಇರುವ ಸಿಬಂದಿ ಕೊರತೆಯ ಕುರಿತು ಪಟ್ಟಿ ನೀಡುವಂತೆ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌.ಅವರಿಗೆ ಶಾಸಕರು ಸೂಚಿಸಿದರು. ಜತೆಗೆ ಕೃಷಿ ಇಲಾಖೆಯ ಮಾಹಿತಿಯನ್ನು ಸಭೆಯ ಅಜೆಂಡಾ ಪುಸ್ತಕಕ್ಕೆ ಸೇರಿಸದೇ ಇರುವ ಕುರಿತು ಸಹಾಯಕ ಕೃಷಿ ಅಧಿಕಾರಿ ಚೆನ್ನಕೇಶವ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next