Advertisement

13 ದಿನ ಜೈಲಲ್ಲಿದ್ದ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್‌ಮಲಿಕ್‌ ಬಿಡುಗಡೆ

07:46 PM Jul 15, 2017 | Team Udayavani |

ಶ್ರೀನಗರ: ಇಲ್ಲಿನ ಕೇಂದ್ರೀಯ ಬಂಧೀಖಾನೆಯಲ್ಲಿ ಕಳೆದ 13 ದಿನಗಳಿಂದ ಇರಿಸಲ್ಪಟ್ಟಿದ್ದ  ಜೆಕೆಎಲ್‌ಎಫ್ ಅಧ್ಯಕ್ಷ ಮೊಹಮ್ಮದ್‌ ಯಾಸಿನ್‌ ಮಲಿಕ್‌ ನನ್ನು ಇಂದು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.

Advertisement

ಮಲಿಕ್‌ ನನ್ನು ಕಳೆದ ಜುಲೈ 3ರಂದು ಬಂಧಿಸಲಾಗಿತ್ತು. ಮಲಿಕ್‌ ಸಹಿತ ಹುರಿಯತ್‌ ಕಾನ್ಫರೆನ್ಸ್‌ ನ ಎರಡೂ ಬಣ ವಾರ ಪೂರ್ತಿ ಪ್ರತಿಭಟನೆ, ರಾಲಿಗೆ ಕರೆ ನೀಡಿದ ಪ್ರಯುಕ್ತ ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಲಾಗಿತ್ತು. 

ಕಳೆದ ವರ್ಷ ಜುಲೈ 8ರಂದು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ ಹಿಜ್‌ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿಯ ಸಾವಿನ ಮೊದಲ ವರ್ಷಾಚರಣೆ ಪ್ರಯುಕ್ತ ಸೈಯದ್‌ ಅಲೀ ಶಾ ಗೀಲಾನಿ ಮತ್ತು ಮೀರ್‌ವೆಜ್‌ ಉಮರ್‌ ಫಾರೂಕ್‌ ವಾರ ಪೂರ್ತಿ ಪ್ರತಿಭಟನೆಗೆ ಕರೆ ನೀಡಿದ್ದು. 

ಜಾಮೀನಿನಲ್ಲಿ ಇಂದು ಬಿಡುಗಡೆಗೊಂಡಿರುವ ಮಲಿಕ್‌ ತಮ್ಮ ಮನೆ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next