Advertisement

ಜಮ್ಮು ಕಾಶ್ಮೀರ: ನಗರ ಸ್ಥಳೀಯಾಡಳಿತೆ ಚುನಾವಣೆ; ಮತದಾನ ಆರಂಭ

10:47 AM Oct 08, 2018 | Team Udayavani |

ಜಮ್ಮು/ಶ್ರೀನಗರ : ಜಮ್ಮು ಕಾಶ್ಮೀರದ 1,145 ವಾರ್ಡುಗಳನ್ನು ಒಳಗೊಂಡ 422 ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯ ಮೊದಲ ಹಂತ ಇಂದು ಆರಂಭವಾಗಿದೆ. ಮತದಾನ ಶಾಂತಿಯುತವಾಗಿ ನಡೆಯುತ್ತಿರುವುದಾಗಿ ವರದಿಯಾಗಿದೆ. 

Advertisement

ಉಗ್ರ ಬೆದರಿಕೆಗಳು, ಪ್ರತ್ಯೇಕತಾವಾದಿ ಗುಂಪುಗಳಿಂದ ಬಹಿಷ್ಕಾರ, ಮತ್ತು ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ನ್ಯಾಶನಲ್‌ ಕಾನ್ಫರನ್ಸ್‌  (ಎನ್‌ಸಿ) ಮತ್ತು ಪೀಪಲ್ಸ್‌ ಡೆಮೋಕ್ರಾಟಿಕ್‌ ಪಾರ್ಟಿ (ಪಿಡಿಪಿ) ಬಹಿಷ್ಕಾರದ ನಡುವೆಯೇ ಈ ಚುನಾವಣೆಗಳು ನಡೆಯುತ್ತಿರುವದು ಗಮನಾರ್ಹವಾಗಿದೆ. 

ಇಂದು ಸೋಮವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 4 ಗಂಟೆಗೆ ಮುಗಿಯಲಿದೆ. 

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಒಟ್ಟು 1,283 ಅಭ್ಯರ್ಥಿಗಳು 422 ಮುನಿಸಿಪಲ್‌ ವಾರ್ಡುಗಳ ಕಣದಲ್ಲಿ ಇದ್ದಾರೆ. ಈ ಬಾರಿ ಅತ್ಯಧಿಕ ಸಂಖ್ಯೆಯ ಪಕ್ಷೇತರರು ಕಣದಲ್ಲಿರುವುದು ವಿಶೇಷವಾಗಿದೆ.

ಚುನಾವಣೆಗಳು ಸಾಂಗವಾಗಿ ನಿರ್ಭಿಡೆಯಿಂದ ನಡೆಸಿಕೊಡುವ ನಿಟ್ಟಿನಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ. ಅಂತೆಯೇ ಎಲ್ಲ ಅಭ್ಯರ್ಥಿಗಳಿಗೆ ಅವರು ತಂಗಿರು ಹೊಟೇಲುಗಳಲ್ಲಿ ಕ್ಲಸ್ಟರ್‌ ಭದ್ರತೆಯನ್ನು ಅಥವಾ ವೈಯ್ಯಕ್ತಿಕ ಭದ್ರತೆಯನ್ನು ಕಾಶ್ಮೀರ ಕಣಿವೆಯಲ್ಲಿ  ವ್ಯವಸ್ಥೆಗೊಳಿಸಲಾಗಿದೆ. 

Advertisement

ಈ ಬಾರಿಯ ಮುನಿಸಿಪಲ್‌ ಚುನಾವಣೆಯಲ್ಲಿ ಮೊದಲ ಬಾರಿಗೆಂಬಂತೆ ಎರಡು ಸಂಗತಿಗಳು ಗಮನಾರ್ಹವಾಗಿವೆ : 1. ಮೊದಲ ಬಾರಿಗೆ ಇಲೆಕ್ಟ್ರಾನಿಕ್‌ ವೋಟಿಂಗ್‌ ಮಶೀನ್‌ಗಳನ್ನು ಬಳಸಲಾಗುತ್ತಿರುವುದು; 2. ವಲಸಿಗರಿಗೆ ಅಂಚೆ ಮತಪತ್ರಗಳನ್ನು ಪೂರೈಸಿ ಮತದಾನಕ್ಕೆ ಅವಕಾಶ ಕಲ್ಪಿಸಿರುವುದು. 

ಮತ ಎಣಿಕೆ ಅಕ್ಟೋಬರ್‌ 20ರಂದು ನಡೆಯಲಿದೆ. ಚುನಾವಣೆ ಕರ್ತವ್ಯದಲ್ಲಿರುವ ಎಲ್ಲ ಸರಕಾರಿ ಸಿಬಂದಿಗಳಿಗೆ ಒಂದು ತಿಂಗಳ ಹೆಚ್ಚುವರಿ ವೇತನವನ್ನು ಕೇಂದ್ರ ಸರಕಾರ ಪ್ರಕಟಿಸಿರುವುದು ಮುಖ್ಯ ಕಾರ್ಯದರ್ಶಿ ಬಿವಿಆರ್‌ ಸುಬ್ರಹ್ಮಣ್ಯಂ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next