Advertisement

Vaishno Devi “ಲೈವ್‌ ದರ್ಶನ’ಕ್ಕೆ ಚಾಲನೆ ನೀಡಿದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ

08:49 PM Oct 22, 2023 | Team Udayavani |

ರಿಯಾಸಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಪರ್ವತಗಳಲ್ಲಿರುವ ಪ್ರಖ್ಯಾತ ಮಾತಾ ವೈಷ್ಣೋದೇವಿಯ “ಲೈವ್‌ ದರ್ಶನ’ಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಚಾಲನೆ ನೀಡಿದರು.

Advertisement

ಮಹಾ ಅಷ್ಟಮಿ ದಿನವಾದ ಭಾನುವಾರ ಮಾತಾ ವೈಷ್ಣೋದೇವಿ ಕ್ಷೇತ್ರಕ್ಕೆ ಭೇಟಿ ನೀಡಿದ ಮನೋಜ್‌ ಸಿನ್ಹಾ ಅವರು ಜಮ್ಮು ಮತ್ತು ಕಾಶ್ಮೀರದ ಶಾಂತಿ, ಸಮೃದ್ಧತೆ ಮತ್ತು ಪ್ರಗತಿಗಾಗಿ ಪೂಜೆ ಸಲ್ಲಿಸಿದರು.

ಇದೇ ವೇಳೆ ರೂಪಾ ಪಬ್ಲಿಕೇಶನ್ಸ್‌ ಹೊರತಂದಿರುವ “ಭಕ್ತಿ ಆನ್‌ ಶಕ್ತಿ’ ಪುಸ್ತಕ ಹಾಗೂ ಶ್ರೀ ಮಾತಾ ವೈಷ್ಣೋದೇವಿ ದೇವಿ ತೀರ್ಥಕ್ಷೇತ್ರ ಮಂಡಳಿಯ ವೆಬ್‌ಸೈಟ್‌ನಲ್ಲಿ ದ್ವಿಭಾಷಾ ಚಾಟ್‌ಬಾಟ್‌ ಅನ್ನು ಲೋಕಾರ್ಪಣೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next