Advertisement
ಜಿಯೋ ಫೈಬರ್ ನ ಮೆಗಾ ಆಫರ್ ಅನ್ನು ಇಂದು ರಿಯಲನ್ಸ್ ಘೋಷಿಸಿದೆ. ಜಿಯೋ ಮೆಗಾ ಆಫರ್ ವಿವರ ಹೀಗಿದೆ…
Related Articles
Advertisement
ಅನ್ ಲಿಮಿಟೆಡ್ ಡಾಟಾ ಡೌನ್ ಲೋಡ್ ಮತ್ತು ಅಪ್ ಲೋಡ್:
ಜಿಯೋ ಫೈಬರ್ ನ ಪ್ರತಿಯೊಂದು ಪ್ಲ್ಯಾನ್ ನಲ್ಲಿಯೂ ಅನ್ ಲಿಮಿಟೆಡ್ ಡೌನ್ ಲೋಡ್ ಮತ್ತು ಅಪ್ ಲೋಡ್ ಸೇವೆ ಲಭ್ಯವಾಗಲಿದೆ. ಆರಂಭಿಕವಾಗಿ ಕಂಚು(ಬ್ರೊನ್ಜ್) ಪ್ಲ್ಯಾನ್ ನಲ್ಲಿ 100 ಜಿಬಿ, ನಂತರ ಬೆಳ್ಳಿಯಿಂದ ಟಿಟಾನಿಯಂ ಪ್ಲ್ಯಾನ್ ವರೆಗೆ 5000 ಜಿಬಿ ಕ್ರಮವಾಗಿ ಲಭ್ಯವಾಗಲಿದೆ. ಅಷ್ಟೇ ಅಲ್ಲ ಹೆಚ್ಚುವರಿ 250 ಜಿಬಿ ಉಚಿತ ಹೈಸ್ಪೀಡ್ ಡಾಟಾ ಸೇವೆ ನೀಡುವುದಾಗಿ ಜಿಯೋ ಘೋಷಿಸಿದೆ.
ಫ್ರೀ ವಾಯ್ಸ್ ಕರೆ, ಟಿವಿ ವಿಡಿಯೋ ಕರೆ:
ಜಿಯೋ ಫೈಬರ್ ನ ಪ್ಲ್ಯಾನ್ ನಲ್ಲಿ ದೇಶೀಯ ಉಚಿತ ವಾಯ್ಸ್ ಕರೆ, ಟಿವಿ ವಿಡಿಯೋ ಕರೆ, ಗೇಮಿಂಗ್, 5 ಡಿವೈಸ್ ಗೆ ಆ್ಯಂಟಿ ವೈರಸ್ ನೋರ್ಟೊನ್ ನೀಡಲಾಗುವುದು.
ಪ್ರಮುಖ ನಗರಗಳಲ್ಲಿ ಸಂಪರ್ಕ:
ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಹೈದರಾಬಾದ್, ಸೂರತ್, ವಡೋದರಾ, ಚೆನ್ನೈ, ನೋಯ್ಡಾ, ಗಾಜಿಯಾಬಾದ್, ಭುವನೇಶ್ವರ್, ವಾರಣಾಸಿ, ಅಲಹಾಬಾದ್, ಆಗ್ರಾ, ಮೀರತ್, ವೈಜಾಗ್, ಲಕ್ನೋ, ಹರಿದ್ವಾರ, ಗಯಾ, ಪಾಟ್ನ, ಪೋರ್ಟ್ ಬ್ಲೇರ್, ಪಂಜಾಬ್ ಸೇರಿದಂತೆ ಹಲವು ನಗರಗಳಲ್ಲಿ ಜಿಯೋ ಫೈಬರ್ ಸೇವೆ ಲಭ್ಯವಾಗಲಿದೆ ಎಂದು ಜಿಯೋ ತಿಳಿಸಿದೆ.
ಜಿಯೋ ಗಿಗಾಫೈಬರ್ ಸೇವೆ ಪಡೆಯಲು ಗಿಗಾಫೈಬರ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ವಿವರಗಳನ್ನು ದಾಖಲಿಸಬೇಕು. ಬಳಿಕ ನಾವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಬೇಕು. ಮನೆಯಲ್ಲಿ ರೂಟರ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್ ಸೇವೆ ಆರಂಭವಾಗುತ್ತದೆ.
ಅಲ್ಲದೇ ಇಂಟರ್ನೆಟ್ ಸೇವೆ ಪಡೆಯಲು ರೂಟರ್ ಅಗತ್ಯ. ಅದಕ್ಕಾಗಿ ಜಿಯೋ ಸಂಪರ್ಕ ಪಡೆಯುವ ಗ್ರಾಹಕರು ರೂಟರ್ ಗೆ 2500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ..ಇದನ್ನು ಗ್ರಾಹಕರು ಹಿಂಪಡೆಯುವ ಮೊತ್ತವಾಗಿದೆ.