ಅಡಿಲೇಡ್: ಇಂಗ್ಲೆಂಡ್ ತಂಡದ ಅನುಭವಿ ಪೇಸ್ ಬೌಲರ್‌ಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇಬ್ಬರೂ ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ಕೋಚ್ ಕ್ರಿಸ್ ಸಿಲ್ವರ್‌ವುಡ್ ಹೇಳಿದ್ದಾರೆ. ಈ ಡೇ-ನೈಟ್ ಟೆಸ್ಟ್ ಪಂದ್ಯ ಗುರು ವಾರದಿಂದ ನಡೆಯಲಿದೆ.
ಗಾಯಾಳಾಗಿದ್ದ ಆ್ಯಂಡರ್ಸನ್ ಫಿಟ್ ಆಗಿದ್ದರೂ ಅವರನ್ನು ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ಹೊರಗುಳಿಸಿತ್ತು. ಬ್ರಾಡ್ ಕೂಡ ಆಡಿರಲಿಲ್ಲ. ಇಂಗ್ಲೆಂಡ್ 9 ವಿಕೆಟ್‌ಗಳಿಂದ ಸೋಲಲು ಇವರಿಬ್ಬರ ಗೈರು ಕೂಡ ಕಾರಣವಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಆ್ಯಂಡರ್ಸನ್ ಮತ್ತು ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 1,156 ವಿಕೆಟ್ ಉರುಳಿಸಿದ ಅಮೋಘ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ:ಚಿನ್ನ ಗೆದ್ದ ಅಜಯ್ ಸಿಂಗ್ ಕಾಮನ್ವೆಲ್ತ್ ಗೇಮ್ಸ್‌ಗೆ ಆಯ್ಕೆ
ಆ್ಯಂಡರ್ಸನ್ ಇಂಗ್ಲೆಂಡ್ ಪರ ಸರ್ವಾಧಿಕ 632 ವಿಕೆಟ್ ಹಾಗೂ ಬ್ರಾಡ್ 524 ವಿಕೆಟ್ ಕೆಡವಿದ್ದಾರೆ. ಆ್ಯಶಸ್‌ನಲ್ಲಿ ಇವರಿಬ್ಬರ ಪಾತ್ರ ನಿರ್ಣಾಯಕವಾಗಿತ್ತು. ಆದರೆ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಗ್ಯಾಂಬ್ಲಿಂಗ್ ನಡೆಸಿದ ಇಂಗ್ಲೆಂಡ್ ಭಾರೀ ಏಟು ತಿಂದಿತು.