ಬೊಕಾರೊ: ಕೊರೊನಾ ಲಸಿಕೆ ತೆಗೆದುಕೊಂಡರೆ ಜ್ವರ, ಮೈ-ಕೈ ನೋವು ಬರುತ್ತದೆ ಎಂಬುದು ಮಾಮೂಲಿ ಭೀತಿ. ಇನ್ನು ಕೆಲವರು ಲಸಿಕೆಯಿಂದ ಏನೇನೋ ಸಮಸ್ಯೆಗಳು ಎದುರಾಗುತ್ತವೆ ಎಂದೂ ಹೆದರಿಸಿದ್ದಾರೆ. ಆದರೆ ಝಾರ್ಖಂಡ್‌ನ ಬೊಕಾರೊ ಜಿಲ್ಲೆಯ ಪೆಟಾವರ ಎಂಬ ಹಳ್ಳಿ ಯಲ್ಲಿ ಮಾತ್ರ ಕೊರೊನಾ ಲಸಿಕೆಯು ಪವಾಡಸದೃಶವಾಗಿ ವ್ಯಕ್ತಿಯೊಬ್ಬನ ಜೀವನವನ್ನೇ ಬದಲಾಯಿಸಿದೆ!
44 ವರ್ಷದ ದುಲಾರ್‌ಚಂದ್ ಅವರು 4 ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿದ್ದರು. ಆಗ ಅವರ ಧ್ವನಿ ಉಡುಗಿ ಹೋಗಿತ್ತು, ಪೂರ್ಣವಾಗಿ ಹಾಸಿಗೆ ಹಿಡಿದಿದ್ದರು.
ಇದನ್ನೂ ಓದಿ:ರಮೇಶ ಜಾರಕಿಹೊಳಿ – ಆರೆಸ್ಸೆಸ್ ಮುಖಂಡ ಮಾತುಕತೆ
ಜ.4ರಂದು ಅವರು ಮೊದಲ ಲಸಿಕೆ ಪಡೆದಿದ್ದರು. ಅಚ್ಚರಿಯೆಂಬಂತೆ, ಅದಾದ ಮರುದಿನದಿಂದಲೇ ಅವರ ದೇಹಸ್ಥಿತಿಯೇ ಬದಲಾಗಲು ಆರಂಭವಾಯಿತು.
ಹಾಸಿಗೆ ಹಿಡಿದವರು ಎದ್ದು ನಿಂತರು, ಅನಂತರ ಧ್ವನಿಯೂ ಮರಳಿದೆ! ಈ ಬಗ್ಗೆ ಪರೀಕ್ಷೆ ನಡೆಸುತ್ತಿರು ವುದಾಗಿ ಡಾ| ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.