Advertisement

ಜಾರ್ಖಂಡ್‌ ರಾಜ್ಯಪಾಲೆ, ಬುಡಕಟ್ಟು ನಾಯಕಿ ಮುಂದಿನ ರಾಷ್ಟ್ರಪತಿ ?

07:19 PM May 03, 2017 | Team Udayavani |

ಹೊಸದಿಲ್ಲಿ : ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಚ್ಚರಿಯ ಅಭ್ಯರ್ಥಿಯೋರ್ವರನ್ನು ನಿಲ್ಲಿಸುವ ಸಾಧ್ಯತೆ ಇದೆ. ಮಾಧ್ಯಮ ವರದಿಗಳ ಪ್ರಕಾರ ಜಾರ್ಖಂಡ್‌ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಆಳುವ ಪಕ್ಷ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಪರಿಶೀಲಿಸಲ್ಪಡುತ್ತಿರುವ  ಹೆಸರುಗಳಲ್ಲಿ ಒಂದಾಗಿರುವುದಾಗಿ ತಿಳಿದು ಬಂದಿದೆ.

Advertisement

ಬುಡಕಟ್ಟು ನಾಯಕಿಯಾಗಿರುವ ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನ‌ ಮೊದಲ ಮಹಿಳಾ ರಾಜ್ಯಪಾರಾಗಿ 2015ರ ಮೇ 18ರಂದು ಅಧಿಕಾರ ವಹಿಸಿಕೊಂಡಿದ್ದರು. ಇವರು ಒಡಿಶಾದಿಂದ ಆಯ್ಕೆಯಾಗಿದ್ದ ಎರಡು ಬಾರಿಯ ಬಿಜೆಪಿ ಶಾಸಕಿಯೂ ಆಗಿದ್ದಾರೆ. ಒಡಿಶಾದ ಮಯೂರ್‌ ಭಂಜ್‌ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷೆಯಾಗಿಯೂ ಇವರು ಕರ್ತವ್ಯ ನಿಭಾಯಿಸಿದ್ದರು. ಒಡಿಶಾದಲ್ಲಿ ಈ ಹಿಂದೆ ಬಿಜೂ ಜನತಾ ದಳ ಮತ್ತು ಬಿಜೆಪಿಯ ಸಮ್ಮಿಶ್ರ ಸರಕಾರ ಜಾರಿಯಲ್ಲಿದ್ದಾಗ ಮುರ್ಮು ಅವರು ನವೀನ್‌ ಪಟ್ಟನಾಯಕ್‌ ಅವರ ಸಂಪುಟದಲ್ಲಿ  ಸಚಿವೆಯಾಗಿದ್ದರು. 1997ರಲ್ಲಿ ನಗರ ಸಭಾ ಸದಸ್ಯೆಯಾಗುವ ಮೂಲಕ ಮುರ್ಮು ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. 

ಈ ತನಕ ಯಾವುದೇ ಬುಡಕಟ್ಟು ವ್ಯಕ್ತಿ ಅಥವಾ ಮಹಿಳೆ ದೇಶದ ರಾಷ್ಟ್ರಪತಿ ಆಗಿ ಆಯ್ಕೆಯಾದದ್ದಿಲ್ಲ. ಹಾಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಧಿಕಾರಾವಧಿಯಲ್ಲಿ ಇದೇ ವರ್ಷ ಜುಲೈ 25ರಂದು ಕೊನೆಗೊಳ್ಳಲಿದೆ. ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಕೇಳಿ ಬರುತ್ತಿರುವ ಹೆಸರುಗಳೆಂದರೆ ಎಲ್‌ ಕೆ ಆಡ್ವಾಣಿ, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌, ಕೇಂದ್ರ ಸಚಿವ ವೆಂಕಯ್ಯ ನಾಯ್ಡು.

Advertisement

Udayavani is now on Telegram. Click here to join our channel and stay updated with the latest news.

Next