Advertisement

ಪರೀಕ್ಷಾ ಕೇಂದ್ರಕ್ಕೆ 1200 ಕಿ.ಮೀ. ಬೈಕ್‌ನಲ್ಲಿ ತೆರಳಿದ್ದ ದಂಪತಿಗೆ ಏರ್‌ಟಿಕೆಟ್‌!

12:09 AM Sep 08, 2020 | mahesh |

ಗ್ವಾಲಿಯರ್‌: ಗರ್ಭಿಣಿ ಪತ್ನಿಗೆ ಡಿ.ಇಡಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಬೈಕ್‌ನಲ್ಲಿ 1200 ಕಿ.ಮೀ. ಸವಾರಿ ಮಾಡಿದ್ದ ಧನಂಜಯ್‌- ಸೋನಿ ದಂಪತಿಗೆ ವಿಮಾನಯಾನದ ಸೌಭಾಗ್ಯ ಒದಗಿಬಂದಿದೆ.

Advertisement

ಪತ್ನಿ ಸೋನಿಯನ್ನು ಶಿಕ್ಷಕಿಯಾಗಿ ನೋಡ ಬಯಸಿದ್ದ ಜಾರ್ಖಂಡ್‌ನ‌ ಧನಂಜಯ್‌ ಗೊಡ್ಡಾ ಜಿಲ್ಲೆಯ ಹಳ್ಳಿಯಿಂದ ಗ್ವಾಲಿಯರ್‌ಗೆ ತಮ್ಮ ಪತ್ನಿಯೊಂದಿಗೆ ಬೈಕ್‌ನಲ್ಲಿ ಸವಾರಿ ಮಾಡಿದ್ದರು. ಸೆ.11ರಂದು ನಿಗದಿಯಾಗಿರುವ ಡಿ.ಇಡಿ ಪರೀಕ್ಷೆ ಬರೆಯಲು ಸೋನಿ ಈಗಾಗಲೇ ಪತಿಯೊಂದಿಗೆ ಗ್ವಾಲಿಯರ್‌ ತಲುಪಿದ್ದಾರೆ.

ಪರೀಕ್ಷೆ ಬಳಿಕ ಸೋನಿ ದಂಪತಿಗೆ ಊರಿಗೆ ಮರಳಲು ಅದಾನಿ ಫೌಂಡೇಶನ್‌ ವಿಮಾನ ಪ್ರಯಾಣದ ಟಿಕೆಟ್‌ಗಳನ್ನು ನೀಡಿದೆ. “ಧನಂಜಯ್‌ ಮತ್ತು ಸೋನಿ ದಂಪತಿ ಇಬ್ಬರದ್ದೂ ಆಶಾದಾಯಕ ಪ್ರಯಾಣ. ಅವರು ಗೊಡ್ಡಾಕ್ಕೆ ಸುರಕ್ಷಿತವಾಗಿ ಮರಳುವ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲು ನಾವು ವಿನಮ್ರರಾಗಿದ್ದೇವೆ. ಈ ಸ್ಫೂರ್ತಿ ಕಥೆಯನ್ನು ಬೆಳಕಿಗೆ ತಂದ ಮಾಧ್ಯಮಗಳಿಗೆ ಧನ್ಯವಾದಗಳು’ ಎಂದು ಫೌಂಡೇ ಶನ್‌ ಅಧ್ಯಕ್ಷೆ ಪ್ರತೀತಿ ಅದಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

“ನಮ್ಮ ಜೀವನದಲ್ಲಿ ಎಂದಿಗೂ ನಾವು ವಿಮಾನವನ್ನು ಏರಿರಲಿಲ್ಲ. ಅದಾನಿ ಫೌಂಡೇಶನ್‌ಗೆ ಧನ್ಯವಾದಗಳು’ ಎಂದು ಸೋನಿ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next