Advertisement

ಊರಿಗೆ ತೆರಳಲು ಜಾರ್ಖಾಂಡ್ ರಾಜ್ಯದ ಕಾರ್ಮಿಕರ ಪರದಾಟ

08:25 AM May 05, 2020 | keerthan |

ಗಂಗಾವತಿ: ಗಿಣಿಗೇರಿ ಮಹೆಬೂಬನಗರ ರೈಲ್ವೆ ಮಾರ್ಗದ ಕಾಮಗಾರಿ ಮಾಡಲು ಆಗಮಿಸಿ ಕೋವಿಡ್-19 ಕರ್ಪ್ಯೂ ನಲ್ಲಿ ಸಿಲುಕಿರುವ ಜಾರ್ಖಾಂಡ್ ರಾಜ್ಯದ ಕೂಲಿಕಾರ್ಮಿಕರು ತಮ್ಮ ಊರಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.

Advertisement

ಕೋವಿಡ್-19 ವೈರಸ್ ಹರಡದಂತೆ ವಿಧಿಸಲಾಗಿರುವ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇರುವುದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೂಲಿ ಕೆಲಸಕ್ಕಾಗಿ ಹೋಗಿರುವ ಕೂಲಿಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ತೆರಳಲು ಕೇಂದ್ರಹಾಗೂ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ.

ಕಾರಟಗಿ ತಾಲ್ಲೂಕಿನಲ್ಲಿ ನಡೆದಿರುವ ರೈಲ್ವೆಮಾರ್ಗದ ಕಾಮಗಾರಿಯಲ್ಲಿ ಕೂಲಿಕೆಲಸ ಮಾಡುವ ಮತ್ತು ಟಿಪ್ಪರ್ ಲಾರಿ ಚಾಲನೆ ಮಾಡುವ‌ 10ಕ್ಕೂ ಹೆಚ್ಚು ಜಾರ್ಖಾಂಡ್ ರಾಜ್ಯದ ಕೊಡರಾಂ ಜಿಲ್ಲೆಯ ಮದನಗುಂಡಿ ಗ್ರಾಮದ ಕೂಲಿಕಾರ್ಮಿಕರು ತಮ್ಮ ಊರಿಗೆ ತೆರಳಲು ಪರದಾಡುತ್ತಿದ್ದಾರೆ.

“ಇಲ್ಲಿ ಮಾಡಲು ಕೆಲಸವಿಲ್ಲ ಊರಿಗೆ ಹೋಗಲು ಹಣವಿಲ್ಲ ಸರಕಾರ ನಮಗೆ ಸಹಾಯ ಮಾಡಬೇಕು. ಸ್ವಂತ ಊರಿಗೆ ಹೋಗಲು ಎರಡು ದಿನಗಳ ಹಿಂದೆ ಕೇಂದ್ರ ಅವಕಾಶ ಕಲ್ಪಿಸಿದ್ದು ಆನ್ ಲೈನ್ ಆಪ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದು ಇದುವರೆಗೂ ಯಾವುದೇ ಮೆಸೇಜ್ ಬಂದಿಲ್ಲ. ಗಂಗಾವತಿ ತಹಸೀಲ್ದಾರ್ ಕಚೇರಿಗೆ ತೆರಳಿ ಊರಿಗೆ ಹೋಗಲು ಸಹಾಯ ಕೋರಲಾಗುತ್ತದೆ. ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಗುತ್ತಿಗೆದಾರ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಜಾರ್ಖಂಡ್ ರಾಜ್ಯದ ಕೂಲಿಕಾರ್ಮಿಕ ರಾಮಪ್ರಸಾದ ಪಾಸ್ವಾನ್ ಉದಯವಾಣಿ ಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next