Advertisement

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

02:05 PM Nov 08, 2024 | Team Udayavani |

ಕೊಪ್ಪಳ: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಜೆಸ್ಕಾಂ ಗುತ್ತಿಗೆದಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ (ನ.08) ಗಿಣಿಗೇರಿ ಗ್ರಾಮದಲ್ಲಿ ನಡೆದಿದೆ.

Advertisement

ಜಯರಾಂ ಪತ್ತಾರ (42) ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಮುನಿರಾಬಾದ್ ಎಇಇ ಸಂತೋಷ ಎಂಬಾತನಿಂದ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಕೆಲಸ ಮಾಡಿದ ಫೈಲ್ ಗಳು ಕಳೆದಿದೆ ಎಂದು ಕಿರುಕುಳ ನೀಡಿದ್ದು, ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಬೆಳಗಿನ ಜಾವ ವಿಷ ಸೇವನೆ ಮಾಡಿದ್ದಾರೆ. ಬಸ್ಸಾಪುರ ಗ್ರಾಮದ ರೆಸಾರ್ಟ್‌ ನಲ್ಲಿ ಕಾಮಗಾರಿ ಮಾಡಿದ ಫೈಲ್ ಗಳ ವಿಚಾರಕ್ಕೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಜಯರಾಂ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಯರಾಂ 25 ವರ್ಷದಿಂದ ಜೆಸ್ಕಾಂ ಗುತ್ತಿಗೆದಾರನಾಗಿ ಕೆಲಸ ಮಾಡ್ತಿದ್ದರು.

ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next