Advertisement

JEE Main: ಶೌಚಾಲಯಕ್ಕೆ ಹೋಗಿ ಬಂದರೂ ತಪಾಸಣೆ!

11:42 PM Jan 03, 2024 | Team Udayavani |

ಹೊಸದಿಲ್ಲಿ: ಜೆಇಇ-ಮೇನ್‌ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ­ಗಳು ಶೌಚಾಲಯಕ್ಕೆ ಹೋಗಿ ಬಂದ ನಂತ­ರವೂ(ಟಾಯ್ಲೆಟ್‌ ಬ್ರೇಕ್‌ ಬಳಿಕ) ಬಯೋ ಮೆಟ್ರಿಕ್‌ ಹಾಜರಾತಿ ಮತ್ತು ತಪಾ­ಸಣೆಗೆ ಒಳಪಡ­ಬೇಕಾ­ಗು­ತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅಧಿಕಾರಿಗಳು ತಿಳಿಸಿ­ದ್ಧಾರೆ.

Advertisement

ಪರೀಕ್ಷಾ ಕಾರ್ಯದಲ್ಲಿ ನಿರತರಾಗುವ ಅಧಿಕಾರಿ­ಗಳು, ವೀಕ್ಷಕರು, ಸಿಬ್ಬಂದಿ ಹಾಗೂ ಉಪಾಹಾರ ನೀಡು­ವವರು ಕೂಡ ಇದೇ ರೀತಿ ತಪಾಸಣೆಗೆ ಒಳಪಡಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ಧಾರೆ. “ನಕಲು ಅಭ್ಯರ್ಥಿಗಳು ಸೇರಿದಂತೆ ಯಾವುದೇ ರೀತಿಯ ಅಕ್ರಮಕ್ಕೂ ಅವಕಾಶ ನೀಡದೇ ಎಚ್ಚರವಹಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಎನ್‌ಟಿಎ ನಿರ್ದೇಶಕ ಸುಬೋಧ್‌ ಕುಮಾರ್‌ ಸಿಂಗ್‌ ಹೇಳಿದ್ಧಾರೆ.

ಜೆಇಇ ಮೇನ್‌-2024ರ ಪರೀಕ್ಷೆಯು ಜ.24ರಿಂದ ಫೆ.1ರವರೆಗೆ ನಡೆಯಲಿದೆ. ಫೆ.12ರಂದು ಫ‌ಲಿತಾಂಶ ಪ್ರಕಟವಾಗಲಿದೆ. ಇಂಗ್ಲೀಷ್‌ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಆವೃತ್ತಿಯ ಪರೀಕ್ಷೆಗೆ ದಾಖಲೆಯ ಒಟ್ಟು 12.3 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ಧಾರೆ. ದ್ವೆ„ವಾರ್ಷಿಕ ಪರೀಕ್ಷೆಯ ಎರಡನೇ ಆವೃತ್ತಿಯು ಏಪ್ರಿಲ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next