Advertisement

JEE Main: ಕರ್ನಾಟಕದ ಅಮೋಘ ಸೇರಿ 23 ಮಂದಿಗೆ 100 ಪರ್ಸೆಂಟೈಲ್‌ ಅಂಕ

12:43 AM Feb 14, 2024 | Pranav MS |

ಹೊಸದಿಲ್ಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೈನ್‌ನ ಫ‌ಲಿತಾಂಶ ಹೊರಬಿದ್ದಿದ್ದು, ಕರ್ನಾಟಕದಿಂದ ಒಬ್ಬರು ಸೇರಿ ಒಟ್ಟು 23 ಅಭ್ಯರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ತೆಲಂಗಾಣದವರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಹೇಳಿದೆ. ಕರ್ನಾಟಕದ ಅಮೋಘ… ಅಗರ್ವಾಲ್‌ 100 ಪರ್ಸೆಂಟೈಲ್‌ ಅಂಕ ಪಡೆದವರಲ್ಲಿ ಸೇರಿದ್ದಾರೆ.

Advertisement

ಮೊದಲ ಆವೃತ್ತಿಯ ನಿರ್ಣಾಯಕ ಜೆಇಇಯಲ್ಲಿ 11.70 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ನೂರಕ್ಕೆ 100 ಅಂಕ ಪಡೆದವರಲ್ಲಿ 7 ಮಂದಿ ತೆಲಂಗಾಣ, ತಲಾ 3 ಮಂದಿ ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ, ತಲಾ ಇಬ್ಬರು ಹರಿಯಾಣ, ಹೊಸದಿಲ್ಲಿ, ತಲಾ ಒಬ್ಬರು ಗುಜರಾತ್‌ ಮತ್ತು ತಮಿಳುನಾಡಿನವರು ಸೇರಿದ್ದಾರೆ ಎಂದು ಎನ್‌ಟಿಎ ಮಾಹಿತಿ ನೀಡಿದೆ. ಕನ್ನಡ ಸಹಿತ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಜೆಇಇ ಮೈನ್‌ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next