Advertisement

ಬಿಹಾರದಲ್ಲಿ  ಬಿಜೆಪಿಗೆ ಬಲ:ಎನ್‌ಡಿಎಯಲ್ಲೇ ಉಳಿಯಲಿರುವ ನಿತೀಶ್‌!

03:01 PM Jul 08, 2018 | |

ಪಟ್ನಾ: ಜೆಡಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆಯುತ್ತದೆ ಎನ್ನುವ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, 2019 ರ ಚುನಾವಣೆಯನ್ನು ಬಿಜೆಪಿ ಜೊತೆಯಲ್ಲೇ ಎದುರಿಸಲು ಬಿಹಾರ ಸಿಎಂ ನಿತೀಶ್‌ ಕುಮಾರ್‌ ನಿರ್ಧರಿಸಿದ್ದಾರೆ. 

Advertisement

ಶನಿವಾರ ಸಂಜೆ ಮತ್ತು ಭಾನುವಾರ ಬೆಳಗ್ಗೆ ಹೊಸದಿಲ್ಲಿಯಲ್ಲಿ ನಡೆದ ಜೆಡಿಯು ಪ್ರಮುಖ ನಾಯಕರ ಮಹತ್ವದ ಸಭೆಯಲ್ಲಿ  ನಿತೀಶ್‌ ಎಲ್ಲಾ ನಾಯಕರೊಂದಿಗೆ ಚರ್ಚಿಸಿ  ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದಾರೆ. 

2019ರ ಲೋಕಸಭಾ ಚುನಾವಣೆಯೊಂದಿಗೆ 2020 ರ ಬಿಹಾರ ವಿಧಾಸಭಾ ಚುನಾವಣೆಯಲ್ಲೂ ಸೀಟು ಹಂಚಿಕೆ ಮಾಡಿಕೊಳ್ಳಲು ಜೆಡಿಯು ಮುಂದಾಗಿದೆ. 

2019 ರ ಲೋಕಸಭಾ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿದೆ. ಉಳಿದ 23 ಸ್ಥಾನಗಳನ್ನು ಬಿಜೆಪಿ,ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿಗೆ ಬಿಟ್ಟುಕೊಡಲು ತೀರ್ಮಾನಿಸಿದೆ. 

2014 ರ ಚುನಾವಣೆಯಲ್ಲಿ  ಮೋದಿ ವಿರುದ್ಧ ಮುನಿಸಿಕೊಂಡು ಹೊರ ನಡೆದಿದ್ದು ನಿತೀಶ್‌ ಭಾರೀ ಹೊಡೆತ ಅನುಭವಿಸಿದ್ದರು. 40 ಲೋಕಸಭಾ ಸ್ಥಾನಗಳ ಪೈಕಿ ಕೇವಲ 2 ರಲ್ಲಿ ಜಯ ಗಳಿಸಿದ್ದರು. 

Advertisement

ಈ ಬಾರಿ ಆರ್‌ಜೆಡಿ  ಕಾಂಗ್ರೆಸ್‌ ಮೈತ್ರಿ ಕೂಟ ಮತ್ತು ಆಡಳಿತಾರೂಢ ಜೆಡಿಯು- ಬಿಜೆಪಿಯ ಎನ್‌ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವುದು ಖಚಿತವಾಗಿದೆ. 

ಸೀಟು ಹೊಂದಾಣಿಕೆ ಸಾಧ್ಯವೆ? 
ಬಿಜೆಪಿ 2014 ರಲ್ಲಿ 22 ಸ್ಥಾನಗಳು,ಮೈತ್ರಿ ಪಕ್ಷಗಳಾದ ಎಲ್‌ಜೆಪಿ 6 , ಆರ್‌ಎಲ್‌ಎಸ್‌ಪಿ 3 ಸೇರಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಜೆಡಿಯು 17 ಸ್ಥಾನಗಳಲ್ಲಿ  ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಉಳಿಯುವುದು 23 ಸ್ಥಾನಗಳು ಆಗ 8  ಕ್ಷೇತ್ರಗಳನ್ನು ಮೂರೂ ಪಕ್ಷಗಳು ಕಳೆದುಕೊಳ್ಳಬೇಕಾದ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next