Advertisement

ರೈತರು-ಕೃಷಿ ಕಾರ್ಮಿಕರ ಸೆಳೆದ ಜೆಡಿಎಸ್‌ ಪಾದಯಾತ್ರೆ

05:41 PM Oct 15, 2022 | Team Udayavani |

ಕಲಬುರಗಿ: ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಜೆಡಿಎಸ್‌ ಅಭ್ಯರ್ಥಿ ಶಿವಕುಮಾರ ನಾಟೀಕಾರ ನಡೆಸುತ್ತಿರುವ 50 ದಿನಗಳ ಬೃಹತ್‌ ಪಾದಯಾತ್ರೆ ದಿನಗಳೆದಂತೆ ರೈತರು, ಕೃಷಿ ಮಹಿಳೆಯರು ಮತ್ತು ಕಾರ್ಮಿಕರನ್ನು ಸೆಳೆಯುತ್ತಿದೆ.

Advertisement

ಅ.2ರಂದು ಗಾಂಧಿಜಯಂತಿಯಂದು ತಾಲೂಕಿನ ಮಣ್ಣೂರು ಗ್ರಾಮದಿಂದ ಆರಂಭವಾದ ಪಾದಯಾತ್ರೆ ದಿನಗಳೆದಂತೆ ಶಕ್ತಿ ವಿಸ್ತರಿಸಿಕೊಳ್ಳಲಾರಂಭಿಸಿದೆ. ಇದೇ ವೇಳೆ ಹೋದ ಗ್ರಾಮಗಳಲ್ಲಿ ರಾತ್ರಿಯಾದರೂ ಜನರು ಆಸಕ್ತಿಯಿಂದ ಪಾಲ್ಗೊಂಡು ಮುಖಂಡರು ಮಾತುಗಳಿಗೆ ಕಿವಿಗೊಡುತ್ತಿರುವುದು ಪಾದಯಾತ್ರೆಯ ಯಶಸ್ಸು ಇಮ್ಮಡಿಗೊಳಿಸುತ್ತಿದೆ.

ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಕುಮಾರ ಸ್ವಾಮಿ ಮಾಡಿರುವ ಯೋಜನೆಗಳು, ಜನರಿಗೆ ದೊರಕಿಸಿದ ಸೌವಲತ್ತುಗಳು ಮತ್ತು ರೈತರ ಸಾಲ ಮನ್ನಾ ವಿಷಯಗಳು ಪಾದಯಾತ್ರೆಯಲ್ಲಿ ಜನರಿಗೆ ಶಿವಕುಮಾರ ಮತ್ತು ತಂಡ ಮನವರಿಕೆ ಮಾಡುತ್ತಿದೆ. ಯುವಕರಂತೂ ಇದರಲ್ಲಿ ಉತ್ಸಾಹಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಎಲ್ಲ ವಿಡಿಯೋಗಳು, ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ.

ಜನರ ಮನೆಗಳಿಗೆ ಭೇಟಿಯ ವೇಳೆಯಲ್ಲಿ ಅಭ್ಯರ್ಥಿ ಶಿವಕುಮಾರ ನಾಟೀಕಾರ, ಕಳೆದ 40ವರ್ಷಗಳಿಂದ ಜಿಡ್ಡುಗಟ್ಟಿರುವ ರಾಜಕಾರಣಕ್ಕೆ ಹೊಸ ಮುಖದ ಅವಶ್ಯಕತೆ ಇದೆ. ಬದಲಾವಣೆ ಬೇಕಾಗಿದೆ, ಯುವಕರಿಗೆ ಉದ್ಯೋಗಬೇಕಿದೆ. ಯುವತಿಯರಿಗೆ ಒಳ್ಳೆಯ ಶಿಕ್ಷಣ ಬೇಕಿದೆ. ಅದೆಲ್ಲಕಿಂತ ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಮತ್ತು ನೀರಾವರಿಗಾಗಿ ನೀರಿನ ಸೌಕರ್ಯ ಬೇಕಿದೆ. ಇದೆಲ್ಲದರ ಜತೆಯಲ್ಲಿ ಗ್ರಾಮೀಣ ರಸ್ತೆಗಳು, ಶಾಲೆಗಳು, ಶಾದಿಮಹಲ್‌ಗ‌ಳು,
ದೇವಸ್ಥಾನಗಳು ಇವೆಲ್ಲವುಗಳ ಅಭಿವೃದ್ಧಿಗೆ ಬದಲಾವಣೆ ಖಂಡಿತ ಆಗಬೇಕು. ಅದನ್ನು ಮತದಾರರು ಮಾಡಬೇಕು ಎಂದು ಬಹಿರಂಗ ಸಭೆಗಳಲ್ಲಿ ಮನವಿ ಮಾಡುತ್ತಿದ್ದಾರೆ.

ಶಂಕರಗೌಡ ಪಾಟೀಲ ಭೋಸಗಾ, ರಾಜೇಂದ್ರ ಸರದಾರ, ಮಲ್ಲಿಕಾರ್ಜುನ ಸಿಂಗೆ ಗೌರ, ತಾಲೂಕು ಅಧ್ಯಕ್ಷ ಜಮೀಲ್‌ ಗೌಂಡಿ, ಡಾ. ಶರಣಗೌಡ ಪಾಟೀಲ, ಅಮೋಲ ಮೋರೆ, ಶ್ರೀಕಾಂತ ದಿವಾಣಜಿ, ಮಂಜು ನೈಕೋಡಿ ಕರಜಗಿ, ಮಲ್ಲು ಸೊಲ್ಲಾಪುರ, ಅಮರ ರಜಪೂತ್‌ ಇದ್ದರು.

Advertisement

ಕಳೆದ 10 ದಿನಗಳಲ್ಲಿ ಕ್ಷೇತ್ರದ ಹಲವಾರು ಹಳ್ಳಿಗಳ ಜನರೊಂದಿಗೆ ಮಾತನಾಡಿದ್ದೇನೆ. ಅವರ ಸಮಸ್ಯೆ, ಗೋಳು ಮತ್ತು ಅಸಹಾಯಕತೆ ನೋಡಿ ಕರಳು ಕಿತ್ತು ಬರುತ್ತದೆ. ಅಚ್ಛೇ ದಿನಗಳ ಕನಸಲ್ಲಿ ಜನ ಕತ್ತಲೆಗೆ ತಳ್ಳಲ್ಪಟ್ಟಿದ್ದಾರೆ. ನೀರಾವರಿ, ಶಿಕ್ಷಣ, ರಸ್ತೆ, ಕುಡಿವ ನೀರು ಜನರಿಗೆ ಮರೀಚಿಕೆಯಾಗಿದೆ. ಶಕ್ತಿ ಪ್ರದರ್ಶನದ ರಾಜಕೀಯದಲ್ಲಿ ಜನ ನೇಪಥ್ಯಕ್ಕೆ ಸರಿದಿದ್ದಾರೆ. ಈಗ ಹೊಸ ಬದಲಾವಣೆಗಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ.
ಶಿವಕುಮಾರ ನಾಟೀಕಾರ
ಜೆಡಿಎಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next