Advertisement
ಒಂದೆಡೆ ಎಸ್‌ಡಿಪಿಐ ಬಹುತೇಕ ಕಡೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಮತ್ತೂಂದೆಡೆ ಜೆಡಿಎಸ್ ಸಹ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಇವರು ಮತ ಹೆಚ್ಚು ಪಡೆದಷ್ಟೂ ಕಾಂಗ್ರೆಸ್‌ನ ಗೆಲುವಿನ ಹಾದಿ ಕಠಿಣವಾಗಲಿದೆ. ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಗಳು ಕಣಕ್ಕಿಳಿದಿರುವ ಕ್ಷೇತ್ರಗಳಲ್ಲಿ ಮತ ವಿಭಜನೆ ಆಗಿದ್ದೇ ಆದರೆ ಅದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಿ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎಂಬ ವ್ಯಾಖ್ಯಾನಗಳು ಇವೆ.
Related Articles
Advertisement
ಪ್ರಬಲರಿಗೆ ಮಣೆ: ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತ ಪ್ರಬಲರಿಗೆ ಜೆಡಿಎಸ್ ತನ್ನತ್ತ ಸೆಳೆದು ಟಿಕೆಟ್ ನೀಡಿದ್ದು ಅವರ ಜತೆ ಕಾಂಗ್ರೆಸ್ ಪಕ್ಷದ ಶೇ.20 ರಷ್ಟು ಕಾರ್ಯಕರ್ತರು ಹಾಗೂ ಮುಖಂಡರನ್ನು ಸೆಳೆಯಲಾಗಿದೆ. ಬಳ್ಳಾರಿಯಲ್ಲಿ ಅನಿಲ್ ಲಾಡ್, ಯಾದಗಿರಿಯಲ್ಲಿ ಮಾಲಕರೆಡ್ಡಿ, ಚಿತ್ರದುರ್ಗದಲ್ಲಿ ರಘು ಆಚಾರ್, ಹಳಿಯಾಳದಲ್ಲಿ ಘೋಕ್ಲೃಕರ್, ಹಾನಗಲ್‌ನಲ್ಲಿ ಮನೋಹರ್ ತಹಸೀಲ್ದಾರ್, ಬಾಗಲಕೋಟೆಯಲ್ಲಿ ಡಾ.ದೇವರಾಜ್ ಪಾಟೀಲ್ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು ಅವರೊಂದಿಗೆ ಹಲವು ಕಾಂಗ್ರೆಸ್ ನಾಯಕರನ್ನೂ ಜೆಡಿಎಸ್ ಸೆಳೆದು ಸೆಡ್ಡು ಹೊಡೆದಿದೆ. ಶಿವಮೊಗ್ಗದಲ್ಲಿ ಬಿಜೆಪಿಯಿಂದ ಜೆಡಿಎಸ್‌ಗೆ ಹೋದ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತ ಮಾಜಿ ಶಾಸಕ ಪ್ರಸನ್ನಕುಮಾರ್ ಜತೆಗೂಡಿರುವುದು ಅಲ್ಲಿ ಕಾಂಗ್ರೆಸ್ ಗೆಲುವಿನ ಹಾದಿ ಕಠಿಣಗೊಳಿಸಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮತ್ತೂಂದೆಡೆ ಎಸ್‌ಡಿಪಿಐ ಸಹ ಕಾಂಗ್ರೆಸ್ ಶಾಸಕರಿರುವ ನರಸಿಂಹರಾಜ, ಪುಲಕೇಶಿನಗರ, ಸರ್ವಜ್ಞನಗರ ಸೇರಿ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ ಕಾಂಗ್ರೆಸ್ ತಲೆಬಿಸಿಗೆ ಕಾರಣವಾಗಿದೆ.
ಮುಸ್ಲಿಂ ಅಭ್ಯರ್ಥಿಗಳು: ಕಣಕ್ಕಿಳಿದಿರುವ ಕ್ಷೇತ್ರಗಳು ಖಾನಾಪುರ, ಗುಲ್ಬರ್ಗ ಉತ್ತರ, ಹುಮ್ನಾಬಾದ್, ರೋಣ, ಕುಂದಗೋಳ, ಸಾಗರ, ಮಂಗಳೂರು ಉತ್ತರ, ಬೈಂದೂರು, ಕಾಪು, ಬೆಳ್ತಂಗಡಿ, ವಿರಾಜಪೇಟೆ, ನರಸಿಂಹರಾಜ, ಹೆಬ್ಟಾಳ, ಸರ್ವಜ್ಞನಗರ, ಚಿಕ್ಕಪೇಟೆ
-ಎಸ್.ಲಕ್ಷ್ಮಿನಾರಾಯಣ