Advertisement
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ನೇತೃತ್ವದಲ್ಲಿ ಶಾಸಕರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸದನದ ಕಲಾಪವನ್ನು ರಾಜಕೀಯ ಗುರಿ ಸಾಧನೆಗೆ ಗುರಾಣಿಯಾಗಿ ಮಾಡಿಕೊಂಡಿವೆ. ಜನರ ನಿರೀಕ್ಷೆಗಳನ್ನು ಎರಡೂ ಪಕ್ಷಗಳು ಹೊಸಕಿ ಹಾಕುತ್ತಿವೆ. ರಾಜ್ಯದ ಸಮಸ್ಯೆಗಳು ಹಾಗೂ ಜನರ ಕಷ್ಟಗಳ ಬಗ್ಗೆ ಅಧಿವೇಶನದಲ್ಲಿ ನಾವು ಚರ್ಚಿಸಬೇಕಿತ್ತು. ಅದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅವಕಾಶ ನೀಡಲಿಲ್ಲ ಎಂದು ಟೀಕಿಸಿದರು. ಸದನದಿಂದ ಹೊರಹಾಕಬೇಕಿತ್ತು: ಎಚ್‌ಕೆಕೆ
ಸರಕಾರಕ್ಕೆ ಸದನ ನಡೆಸುವ ಬದ್ಧತೆ ಇದ್ದರೆ ಗಲಾಟೆ ಮಾಡಿ ಕಲಾಪ ಹಾಳು ಮಾಡುತ್ತಿದ್ದವರನ್ನು ಹೊರಗೆ ಹಾಕಬೇಕಿತ್ತು ಅಥವಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕಿತ್ತು. ಅಧಿವೇಶನ ಪ್ರಾರಂಭವಾಗಿ ಒಂದು ವಾರ ಆಗಿದ್ದರೂ ಜನಪರವಾದ ಯಾವುದೇ ಚರ್ಚೆ ಆಗಿಲ್ಲ. ಕಾಂಗ್ರೆಸ್‌ನವರಿಗೆ ಈಶ್ವರಪ್ಪ ಅವರದ್ದೊಂದೇ ವಿಷಯವಾಗಿದೆ ಎಂದು ಎಚ್. ಕೆ. ಕುಮಾರಸ್ವಾಮಿ ಹೇಳಿದರು.