Advertisement

ಬಿಎಸ್‌ವೈ ಅಧಿಕಾರದಲ್ಲಿದ್ದಾಗ ಮಾಡಿದ್ದೇನು?

06:50 AM Mar 08, 2018 | |

ಬೆಂಗಳೂರು: ಅಶೋಕ್‌ ಖೇಣಿ ಕಾಂಗ್ರೆಸ್‌ ಸೇರ್ಪಡೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಮಾಡಿದ್ದೇನು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೈಸ್‌ ಒಪ್ಪಂದ ರದ್ದು ಮಾಡಿ ಇಡೀ ಯೋಜನೆ ರಾಜ್ಯ ಸರ್ಕಾರದ ವಶಕ್ಕೆ ಪಡೆಯಲು ನಿರ್ಣಯ ಕೈಗೊಳ್ಳಲು ಮುಂದಾದಾಗ ಯಡಿಯೂರಪ್ಪ ನೇತೃತ್ವದ 16 ಸಚಿವರು ಸಂಪುಟ ಸಭೆಗೆ ಸಂಜೆಯಾದರೂ ಬರಲಿಲ್ಲ ಮರುದಿನ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ನೈಸ್‌ ಮುಖ್ಯಸ್ಥರಿಂದ ಉಡುಗೊರೆ ಪಡೆದಿದ್ದು ಯಾರಿಗೂ ತಿಳಿದಿಲ್ಲವೇ? ಈಗ ಯಡಿಯೂರಪ್ಪ ನೈಸ್‌ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ದೇವೇಗೌಡರು ಖೇಣಿ ವಿರುದ್ಧ ಹೋರಾಟ ಮಾಡಿದ್ದಲ್ಲ. ಅದು ನೈಸ್‌ ಸಂಸ್ಥೆಯ ಅಕ್ರಮಗಳ ವಿರುದ್ಧ  ಹೋರಾಟ. ಅವರೆಂದೂ ರಾಜಿಗೆ ಒಳಗಾಗಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ವಿಧಾನಸಭೆಯಲ್ಲಿ ನೈಸ್‌ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಣಯ ಮಂಡಿಸೋಣ ಎಂದಾಗಲೂ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಇಬ್ಬರಿಗೂ ನೈತಿಕತೆಯಿಲ್ಲ ಎಂದು ಟೀಕಿಸಿದರು.

ಚನ್ನಪಟ್ಟಣ, ರಾಜರಾಜೇಶ್ವರಿ ನಗರದಿಂದ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ. ನನ್ನ ನಿರ್ಧಾರ ಅಚಲ. ಎರಡು ವರ್ಷದ ಹಿಂದೆಯೇ ತೀರ್ಮಾನ ಮಾಡಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ನಮ್ಮ ಕುಟುಂಬದಿಂದ ಇನ್ನೊಬ್ಬ ಅಭ್ಯರ್ಥಿ ಕಣಕ್ಕಿಳಿದರೆ ನಾನೇ ಹಿಂದೆ ಸರಿಯುತ್ತೇನೆ.
– ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next