ನಗರ: ಮಂಗಳೂರಿನಲ್ಲಿ ಸೌಹಾರ್ದ ಸಮಾವೇಶದ ಪ್ರಚಾರಾರ್ಥ ಜೆಡಿಎಸ್‌ನಿಂದ ಆಮಂತ್ರಣ ಪತ್ರಿಕೆ ವಿತರಣೆ ನಡೆಯಿತು. ದರ್ಬೆ ಬಳಿ ಪಕ್ಷದ ಧ್ವಜಾರೋಹಣಗೈದು ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಿದ ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಐ.ಸಿ. ಕೈಲಾಸ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕರಾವಳಿ ಜಿಲ್ಲೆಯ ಜನರ ಮತಗಳಿಸಿ, ತನ್ನ ಸ್ವಾರ್ಥಕೋಸ್ಕರ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಸಾಮರಸ್ಯಕ್ಕೆ ಧಕ್ಕೆ ತರುವ ವಾತಾವರಣವನ್ನು ಈ ಎರಡು ಪಕ್ಷಗಳು ಸೃಷ್ಟಿಸಿದ್ದು, ಜನರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಿದೆ. ಇದು ರಾಜಕೀಯ ಲಾಭಕೋಸ್ಕರ ಮಾಡಿದ ಹುನ್ನಾರ ಎಂದ ಅವರು ಸಾಮರಸ್ಯ, ಸೌಹಾ ರ್ದವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಸಮಾವೇಶ ಹಮ್ಮಿಕೊಳ್ಳಲಿದೆ ಎಂದರು.
ಜ.9ರಂದು ಮಂಗಳೂರಿನಲ್ಲಿ ನಡೆಯುವ ಸೌಹಾರ್ದ ಸಮಾವೇಶದಲ್ಲಿ 1 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾವೇಶದ ಮೂಲಕ ಕರಾವಳಿಯಲ್ಲಿ ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ ಎಂದು ಅವರು ಹೇಳಿದರು.
ಜೆಡಿಎಸ್ ಅಲ್ಪಸಂಖ್ಯಾಕ ಅಧ್ಯಕ್ಷ ಕರೀಂ ಪಳ್ಳತ್ತೂರು, ವಿಟ್ಲದ ಜಾಫರ್, ಯುವ ಜೆಡಿಎಸ್‌ನ ರಾಧಾಕೃಷ್ಣ, ಶಿವ ಸಾಲಿಯಾನ್, ಅದ್ದು ಪಡೀಲು, ವಿಕ್ಟರ್ ಗೊನ್ಸಾಲಿಸ್, ಹರೀಶ್ ಕೊಟ್ಟಾರಿ, ಅಬ್ದುಲ್ ಖಾದರ್ ಪಳ್ಳತ್ತೂರು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಸ್ವಾಗತಿಸಿದರು. ಆಶ್ಲೇಷ್ ಭಟ್, ರಝಾಕ್, ಖಲಂದರ್ ಶರೀಫ್, ಬಾಬು ರಾಜೇಂದ್ರ ಕೊಳ್ತಿಗೆ, ಕೆ.ಪಿ.ಇಬ್ರಾಹಿಂ, ರವಿರಾಜ್ ಗುಂಡ್ಯ, ಮೋನು ಉಪ್ಪಿನಂಗಡಿ, ಅಬ್ದುಲ್ ರಹಿಮಾನ್ ಮೇದರಬೆಟ್ಟು, ಖಲಂದರ್ ಶಾಫಿ ನೆಕ್ಕಿಲಾಡಿ, ಹಮೀದ್ ಕಂಬಳಬೆಟ್ಟು, ರಮೇಶ್ ಹಾರಾಡಿ, ಅಬ್ದುಲ್ ಖಾದರ್ ಪಳ್ಳತ್ತೂರು ಉಪಸ್ಥಿತರಿದ್ದರು.